|
ಎಡೆಯೂರು ಪವಾಡಪುರುಷ ಸಿದ್ಧಲಿಂಗೇಶ್ವರರ ನೆಲೆವೀಡು *ಟಿ.ಎಂ.ಸತೀಶ್
ಎಲ್ಲ, ಜಾತಿ, ಮತ, ಪಂಗಡದವರೂ ಪೂಜಿಸುವ 15ನೇ ಶತಮಾನದ ಪವಾಡಪುರುಷ ನಿರಂಜನ ಗಣಪನ ಅಪರಾವತಾರರಾಗಿದ್ದ ಶ್ರೀಸಿದ್ಧಲಿಂಗೇಶ್ವರ ಸ್ವಾಮಿಯವರು ಇಲ್ಲಿ ಸಮಾಧಿ ಯಾಗಿದ್ದಾರೆ. ಇಲ್ಲಿ ದಾನಿಗಳಾದ ಚೆನ್ನವೀರಪ್ಪ ಒಡೆಯರು ಕಟ್ಟಿಸಿದ ದ್ರಾವಿಡ ಶೈಲಿಯ ಬೃಹತ್ ಭವ್ಯ ದೇವಾಲಯವೂ ಇದೆ. ಸಿದ್ಧಲಿಂಗೇಶ್ವರರು ಚಿತ್ರಾಮಠದಲ್ಲಿ ಕೆಲ ಕಾಲ ಕಳೆದು ಬೋಳು ಬಸವರಾಜೇಂದ್ರರನ್ನು ತಮ್ಮ ಉತ್ತರಾಕಾರಿಯನ್ನಾಗಿ ಮಾಡಿ ಎಡೆಯೂರಿನಲ್ಲಿ ನಿರ್ವಿಕಲ್ಪ ಸಮಾಧಿ ಹೊಂದಿದರೆಂಬುದು ಐತಿಹ್ಯ.
ಪ್ರಸಿದ್ಧ ವೀರಶೈವ ಯತಿ, ವಚನಕಾರ ಎಂಬ ಕೃತಿಯ ಕರ್ತೃ ಶ್ರೀಸಿದ್ಧಲಿಂಗೇಶ್ವರರು ಈ ಇಲ್ಲಿಗೆ ಸಮೀಪದ ಕಗ್ಗೆರೆ ಬಳಿಯ ನಾಗಿಣಿ ನದಿ ತೀರದ ತೋಟದಲ್ಲಿ 12 ವರ್ಷಗಳ ಕಾಲ ಶಿವಯೋಗ ಧ್ಯಾನ ವಾಚರಸಿದ್ದರಂತೆ. ಹೀಗಾಗಿ ಇವರಿಗೆ ತೋಂಟದ ಸಿದ್ಧಲಿಂಗ ಎಂಬ ಹೆಸರೂ ಪ್ರಾಪ್ತವಾಗಿದೆ. ಸಿದ್ಧಲಿಂಗೇಶ್ವರರು ಎಡೆಯೂರಿಗೆ ಬಂದು ನೆಲೆಸುವ ಮುನ್ನ ಸೌರಾಷ್ಟ್ರ, ಕೊಲ್ಲಿ, ಪಾಕಿಸ್ತಾನ, ಕೇದಾರ, ಚಿದಂಬರ, ಶ್ರೀರಂಗ, ಕಂಚಿ, ಕಾಳಹಸ್ತಿ, ಅರುಣಾಚಲ... ಹೀಗೆ ಆಸೇತು ಹಿಮಾಚಲ ಪರ್ಯಂತ ಸಂಚರಿಸಿ, ಪವಾಡ ತೋರಿ, ವೀರಶೈವಧರ್ಮ ಪುನರುಜ್ಜೀವನಗೊಳಿಸಿದರು. ಈಗಿನ ಸಿದ್ಧಗಂಗೆಯಲ್ಲಿ ತಮ್ಮ ಪಾದಸ್ಪರ್ಶದಿಂದ ಗಂಗೆಯನ್ನೇ ತರಿಸಿದ ಯತಿಗಳು.. ಈಹೊತ್ತು ಎಡೆಯೂರಿನಲ್ಲಿ ನಿರ್ವಿಕಲ್ಪ ಸಮಾಧಿಯಲ್ಲಿರುವ ಸಿದ್ದಲಿಂಗೇಶ್ವರರು ಬರುವ ಭಕ್ತರ ಕಷ್ಟವನ್ನು ನೀಗಿಸಿ, ಮುಕ್ತಿ ನೀಡುತ್ತಾರೆಂಬುದು ನಂಬಿಕೆ.
ಇಲ್ಲಿರುವ ಯತಿಗಳ
ಗದ್ದುಗೆ ಶಿವಭಕ್ತರಿಗೆ ತೀರ್ಥಕ್ಷೇತ್ರವಾಗಿದೆ. ಎಡೆಯೂರಿಗೆ ಹೋಗುತ್ತಿದ್ದಂತೆ
ದೇವಾಲಯದ ಮೇಲಿನ
ಯತಿಗಳ ಸ್ಮರಣಾರ್ಥ ಕಟ್ಟಿಸಲಾಗಿರುವ ದೇವಾಲಯವಿದೆ. ರಜತದ್ವಾರದಿಂದ ಕಗೊಂಳಿಸುವ ಗರ್ಭಗುಡಿಯಲ್ಲಿರುವ ಸ್ವಾಮಿಗಳ ಗದ್ದುಗೆ. ಸುವರ್ಣ ಮುಖವಾಡದ ವಿಭೂತಿಲಿಂಗ ಹಾಗೂ ಉತ್ಸವ ಮೂರ್ತಿಯಿದೆ. ಮುಖ್ಯ ದ್ವಾರದಲ್ಲಿ ಗುರು ಸಿದ್ಧಲಿಂಗೇಶ್ವರರು ತಪಸ್ಸನ್ನಾಚರಿಸುತ್ತಿರುವ ಸುಂದರ ಪ್ರತಿಮೆಯನ್ನು ನಿರ್ಮಿಸಲಾಗಿದ್ದು ಅಂತ್ಯಂತ ಆಕರ್ಷಕವಾಗಿದೆ. ಮುಖ್ಯರಸ್ತೆಯಿಂದ ದೇವಾಲಯದವರೆಗೆ ಹೋಗುವ ದಾರಿಯ ಇಕ್ಕೆಲಗಳಲ್ಲೂ ಸಾಲು ಮರಗಳಿದ್ದು, ಅವುಗಳಿಗೆ ಹಲವು ನೀತಿ ವಿಚಾರಗಳ, ಧರ್ಮ ವಿಚಾರಗಳ ಫಲಕ ಹಾಕಲಾಗಿದೆ. ಇವು ಭಕ್ತರನ್ನು ಸತ್ಯಧರ್ಮದ ಹಾದಿಯಲ್ಲಿ ನಡೆಸುವಲ್ಲಿ ಯಶಸ್ವಿಯಾಗಿವೆ.
ಯತಿಗಳು ಈ ಕ್ಷೇತ್ರದಲ್ಲಿ ನೆಲೆಸಿದ ಬಗ್ಗೆ ಕೂಡ ಒಂದು ಕಥೆ ಇದೆ. ಕ್ಷೇತ್ರದ ಬಳಿಯೇ ಇರುವ ಕಗ್ಗೆರೆಯ ನಿವಾಸಿ ನಂಬಿಯಣ್ಣಶೆಟ್ಟಿ ಎಂಬುವನಿಂದ ಬಿನ್ನಹ ಪಡೆದು, ಭಸಿತವನ್ನು ಸ್ವೀಕರಿಸಿದ್ದರಿಂದ ಸ್ಥಳ ಬಿಟ್ಟು ಹೋಗಲಾರದೆ ಅಲ್ಲೇ ಮರವೊಂದರ ಕೆಳಗೆ ಧ್ಯಾನದಲ್ಲಿ ಮಗ್ನರಾಗುತ್ತಾರೆ. ಹೀಗೆ ಕಗ್ಗೆರೆಯ ಪುಷ್ಪವನದಲ್ಲಿರಲು, ದಾಳಿಕೋರರು ಕಗ್ಗೆರೆಯನ್ನು ಲೂಟಿ ಮಾಡಲಿರುವ ವಿಚಾರವನ್ನು ತಮ್ಮ ತಪಶ್ಶಕ್ತಿಯಿಂದ ಗ್ರಹಿಸಿದ ಯತಿಗಳು, ಆ ವಿಚಾರವನ್ನು ಗಿರಿಯಣ್ಣಗೌಡ ಎಂಬ ಊರಿನ ಮುಖ್ಯನಿಗೆ ತಿಳಿಸಿ, ಊರು ಬಿಡುವಂತೆ ಸೂಚಿಸುತ್ತಾರೆ. ಅವರ ಮಾತಿನಂತೆ ಎಲ್ಲರೂ ಊರು ಬಿಟ್ಟು ಬೇರೆ ಪಟ್ಟಣ ಸೇರುತ್ತಾರೆ. 12 ವರ್ಷ ಬಳಿಕ ಮತ್ತೆ ಕಗ್ಗೆರೆಯನ್ನು ಪುನರ್ನಿರ್ಮಾಣ ಮಾಡಿ ಅಲ್ಲಿಗೆ ಆಗಮಿಸಿದಾಗ, ನಂಬಿಯಣ್ಣನ ಹಸು ಪ್ರತಿದಿನ ಹೂತೋಟದಲ್ಲಿದ್ದ ಹುತ್ತಕ್ಕೆ ಹಾಲು ಕರೆದು ಬರುವುದನ್ನು ಕಂಡು, ಹುತ್ತುಕ್ಕೆ ಕ್ಷೀರಾಭಿಷೇಕ ಮಾಡಿ ಕರಗಿಸಿದಾಗ ಶ್ರೀಗಳು ಅಲ್ಲಿ ತಪವನ್ನಾಚರಿಸಿದರಂತೆ. ತೋಟದಲ್ಲಿ ಶ್ರೀಗಳು ನೆಲೆಸಿದ್ದರಿಂದ ಅವರಿಗೆ ತೋಂಟದ ಯತಿಗಳೆಂದೇ ಹೆಸರಾಯ್ತು ಎಂಬುದು ಸ್ಥಳ ಪುರಾಣ.
ಈಗ ಭಕ್ತರಿಂದ ದೇಣಿಗೆ ಬಂದ ಚಿನ್ನದಿಂದ ಶ್ರೀಸಿದ್ಧಲಿಂಗೇಶ್ವರರಿಗೆ 9 ಲಕ್ಷ ರುಪಾಯಿ ಮೌಲ್ಯದ ಚಿನ್ನದ ಮುಖವಾಡ ಮಾಡಲಾಗಿದೆ. 320 ಕೆ.ಜಿ. ತೂಕದ ಬೆಳ್ಳಿಯ ರಥವೂ ಸಿದ್ಧಗೊಂಡಿದೆ. ರಥದಲ್ಲಿನ ಕೆತ್ತನೆ ಕಣ್ಮನಸೆಳೆಯುತ್ತದೆ. ದೇಗುಲದ ಸನಿಹದಲ್ಲೇ ಬಾಳೆಹೊನ್ನೂರು ಮಠದ ಶಾಖಾ ಮಠವಿದೆ. ಸನಿಹದಲ್ಲೇ ಮಾರ್ಕೋನಹಳ್ಳಿ ಜಲಾಶಯವಿದೆ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in
| |||