|
ಯಲಹಂಕದ ವಿಶ್ವನಾಥೇಶ್ವರ ದೇವಾಲಯ
ಇಲ್ಲಿ ಭವ್ಯವಾದ ಹಲವು ಪುರಾತನ ದೇವಾಲಯಗಳಿವೆ. ಇವುಗಳ ಪೈಕಿ, ಶ್ರೀವೇಣುಗೋಪಾಲಸ್ವಾಮಿ ದೇವಾಲಯ ಪ್ರಾಕಾರದಲ್ಲೇ ಇರುವ ಶ್ರೀವಿಶ್ವನಾಥೇಶ್ವರ ದೇವಾಲಯವೂ ಒಂದು. ಮಹಾಭಾರತದ ಜನಮೇಜಯನ ಕಾಲದ್ದೆಂದು ಹೇಳಲಾಗುವ ಈ ದೇವಾಲಯವನ್ನು ಚೋಳರು ನಂತರ ಯಲಹಂಕದ ನಾಡಪ್ರಭುಗಳು ಅಭಿವೃದ್ಧಿ ಪಡಿಸಿದರೆಂದು ಇತಿಹಾಸ ಹೇಳುತ್ತದೆ.
ದೇವಾಲಯಕ್ಕೆ ವಿಶಾಲವಾದ ಪ್ರಾಕರವಿದೆ. ಒಳಗೆ ಮೂರು ಗರ್ಭಗೃಹಗಳಿದ್ದು, ಪ್ರಧಾನ ಗರ್ಭಗೃಹದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ವಿಶ್ವನಾಥೇಶ್ವರನ ಬಲ ಭಾಗದಲ್ಲಿ ಗಣಪತಿಯ ಹಾಗೂ ಎಡ ಭಾಗದ ಗರ್ಭಗೃಹದಲ್ಲಿ ಪಾರ್ವತಿ ಅಮ್ಮನವರ ವಿಗ್ರಹವಿದೆ.
ನವರಾತ್ರಿಯ ಕಾಲದಲ್ಲಿ ಹತ್ತೂ
ದಿನ ಗಣೇಶ, ವಿಶ್ವನಾಥೇಶ್ವರ ಹಾಗೂ ಪಾರ್ವತಿ ದೇವಿಯವರಿಗೆ ನಾರಿಕೇಳ
ಅಲಂಕಾರ, ಪುಷ್ಪಾಲಂಕಾರ, ಪೂಲಂಗಿ ಸೇವೆ, ಸಕ್ಕರೆ ಅಲಂಕಾರ, ನವಧಾನ್ಯ ಅಲಂಕಾರ,
ದ್ರಾಕ್ಷಿ ಗೋಡಂಬಿ ಅಲಂಕಾರ, ಕುಂಕುಮ ಅಲಂಕಾಸ, ಚಿತ್ರವಸ್ತ್ರ ಅಲಂಕಾರ, ವೀಳೆದೆಲೆ
ಪ್ರತಿ ಸೋಮವಾರ ಏಕಾದಶ ರುದ್ರಾಭಿಷೇಕ ಮತ್ತು ಕಾರ್ತೀಕ ಮಾಸ ಪೂರ್ತಿ ಕುಂಭಾಭಿಷೇಕ, ಮಾಘ ಮಾಸದಲ್ಲಿ ಶತ ರುದ್ರ ಯಾಗವೇ ಮೊದಲಾದ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ.
ಪ್ರಾಕಾರದಲ್ಲಿ ಚಂಡಿಕೇಶ್ವರ,
ಬೃಂಗಿ, ಸೂರ್ಯನಾರಾಯಣ ಹಾಗೂ ನಾಗರಕಲ್ಲುಗಳಿವೆ. ಇಲ್ಲಿ ಶೈವಾಗಮದ ರೀತ್ಯ ನಿತ್ಯ
ಅಭಿಷೇಕ, ಪೂಜೆ ನಡೆಯುತ್ತದೆ. ಆರಿದ್ರಾ ಶಿವಯೋಗದಲ್ಲಿ, ಶಿವರಾತ್ರಿಯಂದು ಹಾಗೂ
ತಿಂಗಳ ಎರಡು ಪ್ರದೋಷದ ದಿನ, ಅಮಾವಾಸ್ಯೆ ಹಾಗೂ ಪೌರ್ಣಿಮೆಯಂದು ದೇವರಿಗೆ ವಿಶೇಷ
ಪೂಜೆ ನಡೆಯುತ್ತದೆ ದಿವಂಗತ ವಿರೂಪಾಕ್ಷ ದೀಕ್ಷಿತರು ಈ ದೇವಾಲಯದಲ್ಲಿ 70ಕ್ಕೂ
ಹೆಚ್ಚು ವರ್ಷಗಳ ಕಾಲ ಪೂಜೆ ಸಲ್ಲಿಸಿದ್ದಾರೆ, ಅವರ ಪುತ್ರ ಗುರುರಾಜ ದೀಕ್ಷಿತರು
40ಕ್ಕೂ ಹೆಚ್ಚು ವರ್ಷಗಳ ಕಾಲ ಇದೇ ದೇವಾಲಯದಲ್ಲಿ ಅರ್ಚಕರಾಗಿ
ಪಕ್ಕದಲ್ಲಿಯೇ ಶ್ರೀವೇಣುಗೋಪಾಲಸ್ವಾಮಿ ದೇವಾಲಯವಿದೆ. ವಿಶ್ವನಾಥೇಶ್ವರ ದೇವಾಲಯದ ಎದುರು ಗೀತಾಮಂಟಪವಿದೆ. ಪಕ್ಕದಲ್ಲಿ ನವಗ್ರಹಗಳ ಗುಡಿಯಿದೆ. ಅಶ್ವತ್ಥಕಟ್ಟೆಯೂ ಇದೆ. | |||