|
ಶ್ರೀ ವಿದುರಾಶ್ವತ್ಥ ನಾರಾಯಣಸ್ವಾಮಿ ದೇವಾಲಯ
ಮೈತ್ರೇಯ ಮಹಾಮುನಿಗಳು ನೆಟ್ಟ ಬ್ರಹ್ಮ, ವಿಷ್ಣು, ಮಹೇಶ್ವರರು ನೆಲೆಸಿಹ ಅಶ್ವತ್ಥಗಿಡವನ್ನು
ಮೂಲತೋ ಬ್ರಹ್ಮರೂಪಾಯ ಈ ವೃಕ್ಷದ ಸುತ್ತ ಪ್ರಾಕರವಿದ್ದು, ದೇವಾಲಯ ಪ್ರವೇಶಿಸುತ್ತಿದ್ದಂತೆಯೇ ಮೊದಲು ಅಭಿಷ್ಟ ಸಿದ್ಧ ಗಣಪತಿ ದರ್ಶನವಾಗುತ್ತದೆ. ಅಮೃತಶಿಲೆಯಿಂದ ಕೆತ್ತಲಾಗಿರುವ ಬಲಮುರಿ ಗಣಪನ ಮೂರ್ತಿ ಸುಂದರವಾಗಿದೆ. ಪಕ್ಕದಲ್ಲೇ ಇರುವ ಅಶ್ವತ್ಥನಾರಾಯಣ ಗುಡಿ ಪ್ರಧಾನವಾದದ್ದು. ಇಲ್ಲಿ ಭವಾನಿಶಂಕರ, ಶ್ರೀರಾಮ, ವೀರಾಂಜುನೇಯಸ್ವಾಮಿ, ಶ್ರೀದೇವಿ, ಭೂದೇವಿ ದೇವಾಲಯಗಳೂ ಇವೆ. ದೇವಾಲಯಗಳಿವೆ. ಈ ದೇವಸ್ಥಾನದ ಹಿಂದಿರುವ ತೋಟದಲ್ಲಿ ಪ್ರತಿವರ್ಷ ಚೈತ್ರಮಾಸದ ಹುಣ್ಣಿಮೆಯ ದಿನ ದೊಡ್ಡ ಜಾತ್ರೆ ನೆರೆಯುತ್ತದೆ. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ಊರು ಪ್ರಮುಖ ಪಾತ್ರ ವಹಿಸಿತ್ತು. ಬ್ರಿಟಿಷರು ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಗುಂಡು ಹಾರಿಸಿ 10 ಮಂದಿ ದೇಶಭಕ್ತರನ್ನು ಕೊಂದಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದವರ ಸ್ಮರಣಾರ್ಥ 1959ರಲ್ಲಿ ಇಲ್ಲಿ ಸರ್ವೋದಯ ಮೆಮೋರಿಯಲ್ ಪ್ರೌಢಶಾಲೆಯನ್ನು ಸ್ಥಾಪಿಸಲಾಯಿತು. 1962ರಲ್ಲಿ ಸತ್ಯಾಗ್ರಹಿಗಳ ನೆನಪಿಗಾಗಿ ಸ್ಮಾರಕಸ್ತಂಭವೊಂದನ್ನು ನಿರ್ಮಿಸಲಾಗಿದೆ. ಸಂಪರ್ಕ : ಬೆಂಗಳೂರು ಹೈದ್ರಾಬಾದ್ ಹೆದ್ದಾರಿಯಲ್ಲಿ ಗೌರಬಿದನೂರು ಹಾಗೂ ಹಿಂದೂಪುರದ ನಡುವೆ ಇರುವ ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರಕ್ಕೆ ನೇರ ಬಸ್ ಸೌಕರ್ಯವಿದೆ. | |||