|
ಮುಖಪುಟ
/ನಮ್ಮ
ದೇವಾಲಯಗಳು ತುರುವೇಕೆರೆಯ ಗಂಗಾಧರೇಶ್ವರ ದೇವಾಲಯ *ಟಿ.ಎಂ.ಸತೀಶ್
ಉತ್ತರಾಭಿಮುಖವಾಗಿರುವ ಗರ್ಭಗೃಹದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಂಗಾಧರೇಶ್ವರನ ಶಿವಲಿಂಗ ವೈಶಿಷ್ಠ್ಯಪೂರ್ಣವಾಗಿದೆ. ಶಿವಲಿಂಗದ ಮೇಲೆ ಹೆಡೆಬಿಚ್ಚಿದ ನಾಗರಹಾವಿನೋಪಾದಿಯಲ್ಲಿರುವ ಗಂಗೆಯನ್ನು, ಸುರುಳಿ ಸುರುಳಿಯಾಕಾರದ ಕೇಶಪುಂಜವನ್ನೂ ಶಿಲ್ಪಿ ಮನೋಹರವಾಗಿ ಕಡೆದಿದ್ದಾನೆ. ಜಡೆಯಲ್ಲಿ ಬಂಧಿಯಾದ ಗಂಗೆಯ ಚಿಕ್ಕಮೂರ್ತಿ ಮನೋಜ್ಞವಾಗಿದೆ. ನಾಗಾಭರಣದ ಮೇಲೆ ಚಂದ್ರ, ಸೂರ್ಯ ಹಾಗೂ ಅಶ್ವಿನಿ, ಭರಣಿ, ಕೃತ್ತಿಕೆ, ರೋಹಿಣಿ ಮೊದಲಾದ 27 ನಕ್ಷತ್ರಗಳನ್ನೂ ಶಿಲ್ಪಿ ಮೂಡಿಸಿದ್ದಾನೆ.
ಈ
ದೇವಾಲಯ ಪ್ರವೇಶಿಸುತ್ತಿದ್ದಂತೆ ಮಂಟಪದಲ್ಲಿರುವ ಕೃಷ್ಣಶಿಲೆಯ ಸುಂದರ ನಂದಿಯ ವಿಗ್ರಹ
ಗಮನ ಸೆಳೆಯುತ್ತದೆ.
ದೊಡ್ಡ ಪ್ರಾಕಾರವಿರುವ ಈ ದೇವಾಲಯದಲ್ಲಿ ಗಂಗಾಧರೇಶ್ವರ ಮತ್ತು ಪಾರ್ವತಿಯ ಗುಡಿಗಳಿವೆ. ಅಮ್ಮನವರ ಗುಡಿ ದೇವಾಲಯದ ಪ್ರವೇಶದ ಬಲಭಾಗದಲ್ಲಿ ಪೂರ್ವಾಭಿಮುಖವಾಗಿದ್ದರೆ, ಗಂಗಾಧರೇಶ್ವರ ಗುಡಿ ಉತ್ತರಾಭಿಮುಖವಾಗಿದೆ. ಇಲ್ಲಿಯೂ ವಿಶಾಲವಾದ ಹಜಾರ, ಸುಖನಾಸಿ, ಗರ್ಭಗೃಹವಿದೆ.
ದೇವಾಲಯದ
ಪೂರ್ವಭಾಗದಲ್ಲಿರುವ ಮಂಟಪದ ಕಂಬದಲ್ಲಿ ಬೇಡರ ಕಣ್ಣಪ್ಪನ ಉಬ್ಬುಶಿಲ್ಪವಿದೆ. ಶಿವರಾತ್ರಿಯ
ದಿನ ಈ
ವಾಣಿಜ್ಯ ಕೇಂದ್ರ: ವಿನೋಬನಗರ, ಸುಬ್ರಹ್ಮಣ್ಯನಗರ, ಗಾಂನಗರವೆಂಬ ವಿಸ್ತರಣೆಗಳನ್ನೊಳಗೊಂಡು ದಿನದಿಂದ ದಿನಕ್ಕೆ ಬೆಳೆಯುತ್ತಿರುವ ತುರುವೇಕೆರೆ ಒಂದು ವಾಣಿಜ್ಯಕೇಂದ್ರ. ನಿಯಂತ್ರಿತ ಮಾರುಕಟ್ಟೆ, ನ್ಯಾಯಾಲಯವನ್ನೂ ಒಳಗೊಂಡ ಈ ಊರು ಒಂದು ಕಾಲದಲ್ಲಿ ಹತ್ತಿಯ ವಾಣಿಜ್ಯ ಕೇಂದ್ರವಾಗಿತ್ತು .
ತುರುವೇಕೆರೆಗೆ ನೇರವಾಗಿ ರೈಲು ಮಾರ್ಗವಿಲ್ಲದಿದ್ದರೂ, ತಾಲೂಕಿನ ಬಾಣಸಂದ್ರದಲ್ಲಿ ರೈಲು ನಿಲ್ಣಾಣವಿದ್ದು, ಬೆಂಗಳೂರು- ಪುಣೆ ರೈಲು ಮಾರ್ಗವನ್ನು ಇದು ಸಂದಿಸುತ್ತದೆ. ಬಾಣಸಂದ್ರದಿಂದ ತುರುವೇಕೆರೆಗೆ 13 ಕಿ.ಮೀಟರ್. ಬೆಂಗಳೂರಿನಿಂದ 120 ಕಿ.ಮೀಟರ್ ದೂರದಲ್ಲಿರುವ ತುರುವೇಕೆರೆಗೆ ರಾಜ್ಯದ ಎಲ್ಲ ಪ್ರಮುಖ ಪಟ್ಟಣಗಳಿಂದಲೂ ನೇರ ಬಸ್ ಸೌಕರ್ಯವಿದೆ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in | |||