|
ಮುಖಪುಟ
/ನಮ್ಮದೇವಾಲಯಗಳು
ಮಲೆನಾಡ ಮಡಿಲ ಶಾರದೆಯ ನೆಲೆವೀಡು
*ಟಿ.ಎಂ.
ಸತೀಶ್
ಆದರೆ,
ಇಲ್ಲಿ ಆಗಸದೆತ್ತರಕ್ಕೆ ನಿಂತಿರುವ ಗಿರಿಗಳು ಹಸುವಿನ ಕೋಡಿನಂತೆ
(ಶೃಂಗ) ಕಾಣುವ ಕಾರಣ ಈ ಸ್ಥಳ ಶೃಂಗಗಿರಿ ಎಂದು ಕರೆಯಲ್ಪಡುತ್ತಿತ್ತು ಎನ್ನುವುದು
ಮತ್ತೊಂದು ವಾದ.
ಪ್ರಕೃತಿ ಸಿರಿ:
ನಿರ್ಮಲವಾಗಿ ಹಾಗೂ ಶಾಂತವಾಗಿ ಹರಿಯುವ ನದಿ,
ತಿಳಿನೀರ ನದಿಯಲ್ಲಿ ನಿರ್ಭಯವಾಗಿ ಈಜಾಡುವ ಸುಂದರವಾದ ದೊಡ್ಡ
ಮೀನುಗಳು, ಎಡದಂಡೆಯ ಮೇಲೆ ಎತ್ತರದ ಪ್ರದೇಶದಲ್ಲಿ
ದೊಡ್ಡ ರಥದಂತೆ ನಿಂತಿರುವ ಶಿಲ್ಪಶಿಲಾಮಯ ಶ್ರೀವಿದ್ಯಾಶಂಕರ ದೇಗುಲ ಶೃಂಗೇರಿಯ
ಮತ್ತೊಂದು ಪ್ರಮುಖ ಆಕರ್ಷಣೆ. ಹೊಯ್ಸಳ, ಚಾಲುಕ್ಯ,
ದ್ರಾವಿಡ, ವಿಜಯನಗರ ಶಿಲ್ಪಕಲಾ
ಚಾತುರ್ಯದ ಸಂಗಮವಾಗಿರುವ ಈ ದೇವಾಲಯದ ನೋಟ ನಯನ ಮನೋಹರ. ದೇವಾಲಯದ ಒಳಭಾಗ,
ಹೊರಭಿತ್ತಿಯಲ್ಲಿ ಸುಂದರವಾದ ಹಾಗೂ ಸೂಕ್ಷ್ಮವಾದ
ಕಲಾಕೃತಿಗಳಿದ್ದು, ಇವು ವೈಶಿಷ್ಟ್ಯ ಪೂರ್ಣವಾಗಿವೆ.
ಪಕ್ಕದಲ್ಲೇ ಇರುವ ಅಂದರೆ
ತುಂಗಾನದಿಯ ಬಲದಂಡೆಯ ಮೇಲಿರುವ ನರಸಿಂಹ ವನದಲ್ಲಿ ಶೃಂಗೇರಿ ಜಗದ್ಗುರುಗಳ ಮಠವಿದೆ.
ಇಲ್ಲಿಗೆ ಹೋಗಲು ತುಂಗಾನದಿಗೆ ಅಡ್ಡಲಾಗಿ ಸೇತುವೆಯನ್ನೂ ನಿರ್ಮಿಸಲಾಗಿದೆ. ಶೃಂಗೇರಿ
ಶಾರದೆ,
ಶಕ್ತಿಗಣಪ, ಆಚಾರ್ಯ ಶಂಕರ ಆಲಯ,
ವಿದ್ಯಾಶಂಕರ ದೇವಾಲಯ, ಕಪ್ಪೆಶಂಕರ,
ನರಸಿಂಹವನ, ಚತುರ್ವಿದ್ಯೇಶ್ವರ
ಮೂರ್ತಿ, ಹರಿಹರೇಶ್ವರ ದೇವಾಲಯ,
ಮಲಹಾನಿಕರೇಶ್ವರ ದೇವಸ್ಥಾನ, ರಕ್ಷಕ
ದೇವತಾ ಆಲಯ, ಕಾಲಭೈರವೇಶ್ವರ,
ಆಂಜನೇಯ, ದುರ್ಗಾಂಬಾ,
ಕಾಳಿಕಾಂಬಾ ಮತ್ತು ರತ್ನಗರ್ಭ ಗಣಪ ಶೃಂಗೇರಿಯಲ್ಲಿ ನೋಡಲೇಬೇಕಾದ
ಪವಿತ್ರ ತಾಣಗಳು.
ನರಸಿಂಹ ಪರ್ವತ,
ಕನ್ನಡ ರಾಜ ರಾಜೇಶ್ವರಿ ಭುವನೇಶ್ವರಿ, ಆದಿ ಶಂಕರಾಚಾರ್ಯ
ವಿಗ್ರಹಗಳು, ಕಿಗ್ಗದ ಶ್ರೀ ಋಷ್ಯಶೃಂಗೇಶ್ವರ
ದೇವಾಲಯಗಳೂ ಈ ಕ್ಷೇತ್ರದ ಪಾವಿತ್ರ್ಯವನ್ನು ಮತ್ತಷ್ಟು ಹೆಚ್ಚಿಸಿವೆ.
ಯಾತ್ರಿಕರಿಗಾಗಿಯೇ ಶ್ರೀಮಠದ
ಮುಖ್ಯದ್ವಾರದ ಎಡಗಡೆ ಶ್ರೀಮಠಕ್ಕೆ ಹೊಂದಿಕೊಂಡಂತೆ ಶ್ರೀಶಂಕರ ನಿಕೇತನ,
ಅದರ ಎದುರು ಅತಿಥಿಗೃಹ ಮತ್ತು ತಿರುಪತಿ ದೇವಸ್ಥಾನದವರು
ನಿರ್ಮಿಸಿರುವ ವಸತಿಗೃಹಗಳೂ ಇವೆ. ಶಂಕರಕೃಪಾ, ಭಾರತೀ
ವಿಹಾರವೇ ಮುಂತಾದ ವಸತಿ ಗೃಹಗಳೂ ಇವೆ.
ಶೃಂಗೇರಿ ಋಷಿ ಮುನಿಗಳ ತಪೋ
ಭೂಮಿಯಾಗಿತ್ತು ಎಂಬುದಕ್ಕೆ ನೂರಾರು ಪ್ರಕರಣಗಳು ಪುಷ್ಟಿ ನೀಡುತ್ತವೆ. ಸುಮಾರು
೧೨೦೦ ವರ್ಷಗಳ ಹಿಂದೆ ಸಾತ್ವಿಕ ಧರ್ಮ ಕ್ಷೀಣವಾಗಿ,
ವಾಮಾಚಾರ ಕ್ಷುದ್ರೋಪಾಸನೆ ತಾಂಡವವಾಡುತ್ತಿದ್ದ ಕಾಲದಲ್ಲಿ
ಕ್ರಿ.ಶ. ೭೮೮ರಲ್ಲಿ ಜನಿಸಿದ ಶಂಕರ ಭಗವತ್ಪಾದರು ಅದ್ವೈತ ಧರ್ಮ ಪ್ರತಿಪಾದನೆ ಮಾಡಿ
ಸಾತ್ವಿಕ ಧರ್ಮವನ್ನು ನೆಲೆಗೊಳಿಸಲು ಆಸೇತು ಹಿಮಾಚಲ ಪರ್ಯಂತ ಸಂಚರಿಸಿದಾಗ,
ವೈದಿಕ ಧರ್ಮವನ್ನು ಪುನರ್ ಸ್ಥಾಪಿಸಲು ನಾಲ್ಕು ಆಮ್ನಾಯ
ಧರ್ಮಪೀಠಗಳನ್ನು ಸ್ಥಾಪಿಸಿದರು. ಇದರಲ್ಲಿ ಮೊದಲನೆಯದೇ ಶೃಂಗೇರಿಯ ದಕ್ಷಿಣಾಮ್ನಾಯ
ಶ್ರೀ ಶಾರದಾ ಪೀಠ.
ಕಾಶ್ಮೀರ ಪುರವಾಸಿನಿಯೂ
ವಿದ್ಯಾದೇವತೆಯೂ ಆದ ಬ್ರಹ್ಮಸತಿ ತಾಯಿ ಶಾರದೆಯನ್ನು ಶಂಕರ ಭಗವತ್ಪಾದರು ಈ
ಪೀಠದಲ್ಲಿ ಪ್ರತಿಷ್ಠಾಪಿಸಿದರು.
ಜಿಲ್ಲಾಕೇಂದ್ರ ಚಿಕ್ಕಮಗಳೂರಿನಿಂದ ಶೃಂಗೇರಿಗೆ 90 ಕಿಲೋ ಮೀಟರ್ ದೂರವಾದರೆ, ಬೆಂಗಳೂರಿನಿಂದ 237 ಕಿಲೋ ಮೀಟರ್. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in |
![]() ![]() |
||