|
ಮುಖಪುಟ
/ನಮ್ಮದೇವಾಲಯಗಳು
ಸುಂದರ ವಾಸ್ತುಶಿಲ್ಪ ಹೊಂದಿರುವ ಈ ದೇವಾಲಯ ಬೇಲೂರು- ಹಳೇಬೀಡಿನ ದೇವಾಲಯಗಳಂತೆ ಶಿಲ್ಪಕಲಾ ಶ್ರೀಮಂತಿಕೆಯಿಂದ ಕೂಡಿದೆ. ದೇವಾಲಯದ ವಾಸ್ತು ಶಿಲ್ಪ ವಿಜಯನಗರ ಮತ್ತು ಹೊಯ್ಸಳ ಶೈಲಿಯಿಂದ ಕೂಡಿದೆ. ದೇಗುಲದ ಗೋಪುರ ಕದಂಬನಾಗರ ಶೈಲಿಯಲ್ಲಿದ್ದು ಚಿಕ್ಕದಾಗಿದೆ. ಪ್ರದಕ್ಷಣ ಪಥ ಸುತ್ತಿ ಸಭಾಮಂಟಪ ಪ್ರವೇಶಿಸಿದರೆ, ಸುಂದರ ಹಾಗೂ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ 12 ಕಂಬಗಳು ನೋಡುಗರ ಮನಸೆಳೆಯುತ್ತವೆ. ಇದಲ್ಲದೆ ಇಲ್ಲಿ 6 ಅರೆ ಕಂಬಗಳೂ ಇವೆ.
ಭಿತ್ತಿಗಳಲ್ಲಿ ಮತ್ತು ಛಾವಣಿಯಲ್ಲಿ ವಿಷ್ಣು ಭೂಮಿಯಲ್ಲಿ ಎತ್ತಿದ ಅವತಾರ, ಆಂಜನೇಯ, ಗಣೇಶ, ಮಹಿಷಾಸುರ ಮರ್ದಿನಿಯ ಶಿಲ್ಪಗಳಿವೆ.
ಪ್ರಧಾನ ಗರ್ಭಗುಡಿಯ ಮುಂಭಾಗದಲ್ಲಿ ಸ್ತ್ರೀದ್ವಾರಪಾಲಕರ ಮೂರ್ತಿಗಳಿರುವುದು
ವಿಶೇಷ. ಗರ್ಭಗೃಹದಲ್ಲಿರುವ ವೆಂಕಟರಮಣನ ವಿಗ್ರಹ ಮೋಹಕವಾಗಿದೆ. ಶಂಖಚಕ್ರಧಾರಿಯಾದ
ವೆಂಕಟರಮಣನ ಹಿಂದಿರುವ ಶಿಲಾ ಪ್ರಭಾವಳಿಯಲ್ಲಿ
ಮುಖ್ಯ ದೇವಾಲಯದ ಎದುರು ಎರಡು ಬೃಂದಾವನಗಳು ಹಾಗೂ ಧ್ವಜಸ್ತಂಭವಿದೆ. ದೇವಾಲಯದ ಹೊರಗೆ ಇರುವ ಪುಷ್ಕರಣಿಯ ಸುತ್ತಲ ಪರಿಸರ ಸುಂದರವಾಗಿದೆ. ಹುಣಸೆಹೊಂಡಕ್ಕೆ ಶಿರಸಿಯಿಂದ ಕೇವಲ 20 ಕಿಲೋ ಮೀಟರ್. ರಾತ್ರಿ ಉಳಿಯಲು ಶಿರಸಿಯಲ್ಲಿ ವ್ಯವಸ್ಥೆ ಇದೆ. | |||