|
ಲಕ್ಷ್ಮೇಶ್ವರದ ಸ್ವಯಂಭು ಸೋಮೇಶ್ವರ ದೇವಾಲಯ
ಈ ಪ್ರದೇಶವನ್ನು 11ನೇ ಶತಮಾನದಲ್ಲಿ ಆಳುತ್ತಿದ್ದ ಸರ್ವೇಶ್ವರನೆಂಬ ಮಾಂಡಲಿಕ, ತನಗೆ (ಸೋಮದೇವನೆಂಬ) ಮಗ ಹುಟ್ಟಿದಾಗ ಪುತ್ರೋತ್ಸವದ ಸಂಭ್ರಮದಲ್ಲಿ 1096ರಲ್ಲಿ ಇಲ್ಲಿ ಚಾಳುಕ್ಯರ ಮಾದರಿಯಲ್ಲಿ ಸ್ವಯಂಭೂ ಸೋಮೇಶ್ವರ ದೇವಾಲಯ ಕಟ್ಟಿಸಿದನೆಂದು ಇತಿಹಾಸ ಸಾರುತ್ತದೆ.
ಅಂದಿನಿಂದ ಸೋಮೇಶ್ವರ ಮಾಂಜವಿರಪ ಕುಲದೇವತೆಯಾಗಿ ಇಲ್ಲಿ ಪೂಜೆಗೊಳ್ಳುತ್ತಿದ್ದಾನೆ
ಎಂದು ಐತಿಹ್ಯ ಹೇಳುತ್ತದೆ. ಚಾಲುಕ್ಯರ ವಾಸ್ತುವೈಭವಕ್ಕೆ ಸಾಕ್ಷಿಯಾಗಿರುವ
ಸೋಮೇಶ್ವರ ದೇವಾಲಯ ಭವ್ಯವಾಗಿದ್ದು ನೃತ್ಯ ಮಂಟಪ,
ಸಭಾಮಂಟಪ,
ಪೌಳಿ,
ಘಟಿಕಾಸ್ಥಳ ಒಳಗೊಂಡಿದೆ.
ಪೂರ್ವಕ್ಕಿರುವ
ದೇವಾಲಯದ ಪೂರ್ವ, ಉತ್ತರ ಹಾಗೂ ದಕ್ಷಿಣ ದಿಕ್ಕುಗಳಲ್ಲಿ ಮಹಾದ್ವಾರಗಳಿವೆ. ದೇಗುಲದ ಸುತ್ತ ಕಲ್ಲಿನ ಕೋಟೆಯಿದೆ. ದೇಗುಲದ ಇಕ್ಕೆಲಗಳಲ್ಲಿ ಚಂದ್ರಶಾಲೆಗಳಿವೆ. ಮಾಘ ಶುದ್ಧದಲ್ಲಿ ಪ್ರಾತಃ ಸೂರ್ಯಕಿರಣಗಳು ದೇವರ ಮೇಲೆ ಬೀಳುವಂತೆ ನಿರ್ಮಿಸಿರುವ ವಾಸ್ತುಶಿಲ್ಪಿಗಳ ವೈಜ್ಞಾನಿಕ ಕಲ್ಪನೆ ಎಲ್ಲರನ್ನೂ ಬೆರಗುಗೊಳಿಸುತ್ತದೆ. ಸುತ್ತಲೂ ಪಂಚಲಿಂಗಗಳ ಚಿಕ್ಕ ಗುಡಿಗಳಿದ್ದು, ಸೋಮೇಶ್ವರ ದೇವಾಲಯದ ಭವ್ಯತೆಯನ್ನು ನೂರ್ಮಡಿಗೊಳಿಸಿವೆ. ಇಲ್ಲಿನ ಗರ್ಭಗೃಹದಲ್ಲಿ ಶಿವ, ಲಿಂಗರೂಪದ ಬದಲು ವೃಷಭಾರೂಢನಾಗಿ ಪಾರ್ವತಿಯ ಸಮೇತ ನೆಲೆಸಿದ್ದಾನೆ. ಇಲ್ಲಿ ಶಿವನ ಮೂರ್ತಿ ಪೂಜೆ ನಡೆಯುವುದು ವಿಶೇಷ. ನಂದಿಯ ಮೇಲೆ ಕುಳಿತ ಪಾರ್ವತಿ ಪರಮೇಶ್ವರರ ವಿಗ್ರಹ ಅತ್ಯಾಕರ್ಷಕ. ಮಾಘ ಮಾಸದ ಪ್ರತಿಪದೆಯಂದು ಇಲ್ಲಿ ರಥೋತ್ಸವ ನಡೆಯುತ್ತದೆ.
ಕಲಾಕೌಶಲ್ಯದಿಂದ
ಕೂಡಿದ ದೇವಾಲಯದಲ್ಲಿ 15ಕ್ಕೂ ಹೆಚ್ಚು ಕಲ್ಲಿನ ಕಂಬಗಳಿವೆ. ನುಣುಪಾದ ಗ್ರಾನೈಟ್
ಶಿಲೆಯ ಈ
ಧಾರವಾಡದಿಂದ ಲಕ್ಷ್ಮೇಶ್ವರಕ್ಕೆ ಕೇವಲ 72 ಕಿ.ಮೀ. ಬಸ್ ಸೌಕರ್ಯ ಉತ್ತಮವಾಗಿದೆ. ಚಿತ್ರ ಮಾಹಿತಿ: ಬಿ.ಎಚ್.ಕೊಪ್ಪರ | |||