ಮುಖಪುಟ /ನಮ್ಮದೇವಾಲಯಗಳು

ಲಕ್ಷ್ಮೇಶ್ವರದ ಸಹಸ್ರಲಿಂಗ ದೇವಾಲಯ

sahasralinganagudi, lakshmeswaraಬಾದಾಮಿ ಚಾಲುಕ್ಯರ ರಾಜಧಾನಿಯಾಗಿಯೂ ಮೆರೆದ ಲಕ್ಷ್ಮೇಶ್ವರ, ಪುಲಿಗೆರೆ, ಹುಲಿಗೆರೆ, ಪುಲಿಕರನಗರವೆಂದೂ ಖ್ಯಾತವಾಗಿದ್ದ ನಗರ. ಇಲ್ಲಿರುವ ಹಲವು ಪ್ರಾಚೀನ ದೇವಾಲಯಗಳ ಪೈಕಿ ಸಹಸ್ರಲಿಂಗ ದೇವಾಲಯವೂ ಒಂದು.

ಪ್ರಾಚೀನಕಾಲದ ಈ ದೇವಾಲಯ ಊರಿನ ಹೊರಗೆ ಆಗ್ನೇಯ ದಿಕ್ಕಿನಲ್ಲಿದೆ. ಈ ದೇವಾಲಯ ಹಲವು ವಿಶೇಷತೆಗಳಿಂದ ಕೂಡಿದೆ.

ದೇವಾಲಯದಲ್ಲಿರುವ ಶಿವಲಿಂಗದ ಮೇಲೆ 999 ಚಿಕ್ಕ ಚಿಕ್ಕ ಲಿಂಗಗಳನ್ನು ಕೆತ್ತಲಾಗಿದೆ ಹೀಗಾಗೆ ಇದು ಸಹಸ್ರಲಿಂಗ ಎಂದು ಖ್ಯಾತವಾಗಿದೆ. ನೋಡಲು ಜೇನುಗೂಡಿನಂತಿರುವ ಈ ಲಿಂಗವನ್ನು ಅಮರ ಶಿಲ್ಪಿ ಜಕಣಾಚಾರಿ ಒಂದೇ ರಾತ್ರಿಯಲ್ಲಿ ನಿರ್ಮಿಸಿದ್ದೆಂದು ಹೇಳಲಾಗುತ್ತದೆ.

ಜಕಣಾಚಾರಿ ಒಂದೇ ಶಿಲೆಯಲ್ಲಿ ಲಿಂಗಾಗೃತಿಯಲ್ಲಿಯೇ ಸಹಸ್ರಲಿಂಗವನ್ನು ಒಂದೇ ರಾತ್ರಿಯಲ್ಲಿ ಪೂರ್ಣಗೊಳಿಸುವ ಮಹತ್ಕಾರ್ಯ ಕೈಗೊಂಡನಂತೆ. ಒಂದು ಸಾವಿರ ಶಿವಲಿಂಗ ಕೆತ್ತನೆ ಕಾರ್ಯವನ್ನು ಸೂರ್ಯೋದಯವಾಗುವದರೊಳಗೆ ಮಾಡಿ ಮುಗಿಸುವುದು ಅವನ ಉದ್ದೇಶವಾಗಿತ್ತು. ಆದರೆ, ಸೂರ್ಯೋದಯವಾಗುವ ಹೊತ್ತಿಗೆ ಆತನಿಂದ ಕೇವಲ 999 Sahasralinga temple, Lakshmeswaraಲಿಂಗಗಳನ್ನು ಮಾತ್ರವೇ ಕೆತ್ತಲು ಸಾಧ್ಯವಾಯಿತು. ಆತ ಇನ್ನೊಂದು ಲಿಂಗ ಕೆತ್ತಿದ್ದೇ ಆಗಿದ್ದಲ್ಲಿ ಪುಲಿಗೆರೆ ರಾಮೇಶ್ವರಕ್ಕಿಂತಲೂ ಶ್ರೇಷ್ಠ ಹಾಗೂ ಪುಣ್ಯಭೂಮಿಯಾಗಿ ಮೆರೆಯುತ್ತಿತ್ತೆಂಬ ಪ್ರತೀತಿ ಇದೆ ಎಂದು ಊರ ಹಿರಿಯರು ಹೇಳುತ್ತಾರೆ. ಈ ಶಿವಲಿಂಗದಲ್ಲಿ ಒಂದು ಲಿಂಗ ಕಡಿಮೆ ಇದ್ದರೂ ಜನರ ಬಾಯಲ್ಲಿ ಇದು  ಸಹಸ್ರಲಿಂಗ ಗುಡಿಯೆಂದೇ ಖ್ಯಾತವಾಗಿದೆ.

ಧಾರವಾಡದಿಂದ ಲಕ್ಷ್ಮೇಶ್ವರಕ್ಕೆ ಕೇವಲ 72 ಕಿ.ಮೀ. ಬಸ್ ಸೌಕರ್ಯ ಉತ್ತಮವಾಗಿದೆ.
ಚಿತ್ರ ಮಾಹಿತಿ: ಬಿ.ಎಚ್.ಕೊಪ್ಪರ

ಮುಖಪುಟ /ನಮ್ಮ ದೇವಾಲಯಗಳು