ಮುಖಪುಟ /ನಮ್ಮ ದೇವಾಲಯಗಳು  

ಸಂಜಯನಗರದ ವರಪ್ರದ ಬಲಮುರಿ ಗಣಪತಿ

* ಟಿ.ಎಂ.ಸತೀಶ್
varapradha Ganapati, Rangabharanaಆದಿ ವಂದಿಪ ಗಣಪ
. ಯಾವುದೇ ಶುಭಕಾರ್ಯ ಮಾಡುವ ಮುನ್ನ ವಿಘ್ನನಿವಾರಕ ಗಣಪನ ಪೂಜಿಸುವುದು ಸಂಪ್ರದಾಯ. ಪ್ರತಿಯೊಂದು ಊರಿನಲ್ಲೂ ಗಣಪನ ದೇವಾಲಯ ಇರುತ್ತದೆ. ಯಾವುದೇ ಹೊಸ ಬಡಾವಣೆ ಆದರೂ ಅಲ್ಲೊಂದು ಗಣಪನ ದೇವಸ್ಥಾನ ಇದ್ದೇ ಇರುತ್ತದೆ.

ಆದರೆ, ಬೃಹದಾಕಾರವಾಗಿ ಬೆಳೆದಿರುವ ಬೆಂಗಳೂರಿನ ಸಂಜಯನಗರದ ಪ್ರತಿಷ್ಠಿತ ಕೆ.ಇ.ಬಿ. ಬಡಾವಣೆಯಲ್ಲಿ ಗಣಪನ ದೇವಾಲಯ ಇಲ್ಲದೇ ಇದ್ದುದು ಒಂದು ಕೊರತೆಯಾಗಿತ್ತು.

ಇದನ್ನು ಮನಗಂಡ ಅಭಿನಯ ಮತ್ತು ಲಲಿತ ಕಲಾ ಶಾಲೆ ರಂಗಾಭರಣ ಕಲಾಕೇಂದ್ರ (ರಿ) ತನ್ನ ಕಲಾಶಾಲೆ ಹಾಗೂ ಚಂದ್ರಪ್ರಿಯ ರಂಗಮಂದಿರದ ಆವರಣದಲ್ಲಿ ಸುಂದರವಾದ ಗಣಪನ ದೇವಾಲಯ ನಿರ್ಮಿಸಿದೆ.

ಎಲ್ ಅಂಡ್ ಸಿ ನಿರ್ಮಾಣ ಸಂಸ್ಥೆಯ ಮಾಲಿಕರೂ, ಭವಾನಿ ಟ್ರಸ್ಟ್ ನ ಅಧ್ಯಕ್ಷರೂ ಹಾಗೂ ರಂಗಾಭರಣ ಕಲಾಕೇಂದ್ರದ ಅಧ್ಯಕ್ಷರೂ ಆದ ಶ್ರೀ ಲಕ್ಷ್ಮಣ್ ಅವರು ಈ ದೇವಾಲಯ ಕಟ್ಟಿಸಿದ್ದಾರೆ.

ಸುಂದರವಾದ ದೇವಾಲಯದಲ್ಲಿ  ನಯನ ಮನೋಹರವಾದ ವರಪ್ರದ ಬಲಮುರಿ ಗಣಪತಿಯ ಸುಂದರ ಪ್ರತಿಮೆಯನ್ನು ವಿಧ್ಯುಕ್ತವಾಗಿ ಹಾಗೂ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಲಾಗಿದೆ.

varapradha Ganapati temple, Rangabharanaರಂಗಾಭರಣ ಗಣಪತಿಗೆ ನಿತ್ಯಪೂಜೆ ನಡೆಯಲು ಸಕಲ ವ್ಯವಸ್ಥೆ ಮಾಡಿದೆ. ಸಂಕಷ್ಟಹರ ಚತುರ್ದಶಿಯಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಸುತ್ತಮುತ್ತಲ ಬಡಾವಣೆಯ ಎಲ್ಲ ಭಕ್ತರೂ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ.

ತನ್ನಲ್ಲಿಗೆ ಬರುವ ಭಕ್ತರನ್ನು ವಿಘ್ನನಿವಾರಕ ಗಣಪ ಹರಸುತ್ತಿದ್ದಾನೆ. ವರಪ್ರದ ಗಣಪ, ಭಕ್ತರ ಅಭಿಷ್ಟವನ್ನು ಈಡೇರಿಸುತ್ತಿದ್ದಾನೆ. ವರವ ನೀಡೊ ಗಣಪತಿ, ನಿನಗೆ ಕರವ ಮುಗಿವೆನು.. ಎಂದು ಬರುವ ಭಕ್ತರ ಕೋರಿಕೆಯನ್ನು ಈಡೇರಿಸಿ ವರ ನೀಡಿ ವರಪ್ರದನಾಗೇ ನೆಲೆಸಿದ್ದಾನೆ.

ಈ ದೇವಾಲಯದಲ್ಲಿ ಕಾಲಿಟ್ಟೊಡನೆಯೇ ಭಕ್ತರಲ್ಲಿ ಧನ್ಯತಾಭಾವ ಮೂಡುತ್ತದೆ. ಅರಿವಿಲ್ಲದೆ ದೇಹದಲ್ಲಿ ವಿಶೇಷವಾದ ಚೈತನ್ಯ ಒಡಮೂಡುತ್ತದೆ ಎಂಬುದು ಹಲವು ಭಕ್ತರ ಅನಿಸಿಕೆ. ಇದು ಭಗವಂತನ, ಸ್ಥಳದ ಮಹಿಮೆ ಎಂಬುದು ಭಕ್ತರ ಅಭಿಪ್ರಾಯ.

ರಂಗಾಭರಣ ಕಲಾಕೇಂದ್ರದ ಎಂ.ಎಸ್. ಗುಣಶೀಲನ್ ಹಾಗೂ ಲಕ್ಷ್ಮಣ್ ಅವರು ಈ ಭಾಗದಲ್ಲಿ ದೇವಾಲಯವಿಲ್ಲದ ಕೊರತೆಯನ್ನು ನೀಗಿಸಿದ್ದು, ಕಲಾಸೇವೆಯ ಜೊತೆಗೆ ದಾರ್ಮಿಕ ಕಾರ್ಯದಲ್ಲೂ ತೊಡಗಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಮುಖಪುಟ /ನಮ್ಮ ದೇವಾಲಯಗಳು