|
ಶ್ರೀ ಮಾರುತಿ, ಶಕ್ತಿಗಣಪತಿ, ಮಂಜುನಾಥೇಶ್ವರ ದೇವಾಲಯ
ಮಧ್ಯದ ಗರ್ಭಗೃಹದಲ್ಲಿ ತನ್ನಬಾಲವನ್ನು ಸುರುಳಿಯಾಗಿ ಸುತ್ತಿಕೊಂಡು ಸಿಂಹಾಸನ ಮಾಡಿ,
ಕುಳಿತಿರುವ ಆಂಜನೇಯನ ಸುಂದರ ವಿಗ್ರಹವಿದ್ದರೆ, ಎಡ ಭಾಗದ ಗರ್ಭಗೃಹದಲ್ಲಿ
ಮಂಜುನಾಥೇಶ್ವರನ ಪ್ರತಿಮೆ ಇದೆ. ಬಲ ಗರ್ಭಗೃಹದಲ್ಲಿ ಶಕ್ತಿ ಗಣಪತಿಯ ವಿಗ್ರಹವನ್ನು
ಪ್ರತಿಷ್ಠಾಪಿಸಲಾಗಿದೆ.
ಇಲ್ಲಿ ಮೊದಲಿಗೆ 4-9-1997ರಲ್ಲಿ ಶಕ್ತಿಗಣಪತಿಯನ್ನು ಪ್ರತಿಷ್ಠಾಪಿಸಲಾಯಿತು.
18-02-1998ರಲ್ಲಿ ಮಾರುತಿ ಮತ್ತು ಮಂಜುನಾಥೇಶ್ವರ ವಿಗ್ರಹಗಳ ಪ್ರತಿಷ್ಠಾಪನೆ
ನೆರವೇರಿತು. ದೇವಾಲಯದ ಜಿರ್ಣೋದ್ಧಾರ, ನೂತನ ಗೋಪುರ ನಿರ್ಮಾಣ ಕಾರ್ಯ
17-06-2007ರಲ್ಲಿ ನೆರವೇರಿತು.
ದೇವಾಲಯದಲ್ಲಿ ವಿಶಾಲವಾದ ಪ್ರಾಕಾರ ಹಾಗೂ ಪ್ರದಕ್ಷಣಾ ಪಥವಿದೆ. ಇಲ್ಲಿ ನಿತ್ಯ ಪೂಜೆ
ನಡೆಯುತ್ತದೆ. ಪ್ರತಿ ತಿಂಗಳು ಸಂಕಷ್ಟ ಹರ ಗಣಪತಿ ಪೂಜೆ, ಹನುಮ ಜಯಂತಿಯಂದು ಹಾಗೂ
ಶ್ರೀರಾಮ ನವಮಿಯಂದು ಮತ್ತು ಶಿವರಾತ್ರಿಯಂದು ವಿಶೇಷ ಪೂಜೆ ನಡೆಯುತ್ತದೆ. | |||||