|
ಮುಖಪುಟ
/ನಮ್ಮದೇವಾಲಯಗಳು
ಪುತ್ತೂರು
ಈ ಪುಣ್ಯ ಭೂಮಿಯಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಕಾಶಿ ಮಠ ಸಂಸ್ಥಾನದ ಆಡಳಿತಕ್ಕೊಳಪಟ್ಟ ವೆಂಕಟರಮಣಸ್ವಾಮಿ ದೇವಾಲಯವಿದೆ. ಈಗ್ಗೆ 100 ವರ್ಷಗಳ ಹಿಂದೆ ಅಂದರೆ 1899ರಲ್ಲಿ ಮಾಳಪ್ಪ ಪೈ ಎನ್ನುವ ಧರ್ಮಾತ್ಮರು ಮಂಜೇಶ್ವರದಿಂದ ವಿಗ್ರಹ ತರಿಸಿ ಪ್ರತಿಷ್ಠಾಪಿಸಿದರು. ಈಗಿರುವ ದೇವಾಲಯದ ಪ್ರದಕ್ಷಿಣ ಪಥದಲ್ಲಿ ಇರುವ ಪುಟ್ಟ ದೇವಾಲಯದಲ್ಲಿ ದೇವರನ್ನು ಪ್ರತಿಷ್ಠಾಪಿಸಿದರು. ಕುಟುಂಬದ ದೇವಾಲಯವಾಗಿದ್ದ ಇದನ್ನು ಹತ್ತೂ ಸಮಸ್ತರಿಗೆ ಒಪ್ಪಿಸಿದರು. ಈಗ ಈ ದೇವಾಲಯ ಗೌಡಸಾರಸ್ವತ ಸಮಾಜದ ಕಾಶೀಮಠ ಸಂಸ್ಥಾನದ ಆಡಳಿತಕ್ಕೊಳಟ್ಟು ಅಭಿವೃದ್ಧಿಯನ್ನು ಕಂಡಿದೆ.
ದೇವಾಲಯದ ಪ್ರಾಕಾರದಲ್ಲಿ ಗಣಪತಿ, ಹನುಮಂತ, ಮಹಾಲಕ್ಷ್ಮೀ, ಗರುಡ ಹಾಗೂ ನಾಗರ ಗುಡಿಗಳಿವೆ. ಪ್ರತಿ ನಿತ್ಯ ಇಲ್ಲಿ ಪ್ರಾತಃಕಾಲದಲ್ಲಿ ದೇವರಿಗೆ ಅಭಿಷೇಕ, ಅಲಂಕಾರ ಪೂಜೆ ನಡೆಯುತ್ತದೆ. ಚಾಂದ್ರಮಾನ ಯುಗಾದಿಯ ದಿನ ಪ್ರತಿಷ್ಠಾಪನಾ ವರ್ಧಂತಿ ನಡೆಯುತ್ತದೆ.
ಕಾರ್ತೀಕ ಮಾಸದಲ್ಲಿ 10 ದಿನಗಳ
ಕಾಲ ದೀಪೋತ್ಸವ, ಅವಭೃತೋತ್ಸವ, ಜಾಗರಣ ಪೂಜೆ, ದೇವರ ಪಟೆ ಸವಾರಿ ಉತ್ಸವ, 100 ವರ್ಷಗಳ ಹಿಂದೆ ಇಲ್ಲಿ ಮಾಳಪ್ಪ ಪೈ ಅವರು ನಿರ್ಮಿಸಿದ್ದ ಪುಟ್ಟ ದೇವಾಲಯದಲ್ಲಿ ಶ್ರೀರಾಮಚಂದ್ರ ಹಾಗೂ ವರದೇಂದ್ರ ಸ್ವಾಮೀಜಿ ಚಿತ್ರಪಟಗಳನ್ನು ಇಡಲಾಗಿದೆ. ನಿತ್ಯ ಪಾಂಚರಾತ್ರ ಪದ್ಮಸಂಹಿತೆಯ ರೀತ್ಯ ಪೂಜೆ ನಡೆಯುವ ದೇವಾಲಯದಲ್ಲಿ ಶ್ರೀರಾಮನವಿ, ಹನುಮಜಯಂತಿ, ನಾಗರಪಂಚಮಿ, ನೂಲಹುಣ್ಣಿಮೆ, ಮಹಾಲಯ ಅಮಾವಾಸ್ಯೆ ಹಾಗೂ ನವರಾತ್ರಿಯಲ್ಲಿ ವಿಶೇಷ ಪೂಜೆ ಅಲಂಕಾರಗಳು ನಡೆಯುತ್ತವೆ. ಮೈಸೂರು, ಬೆಂಗಳೂರು, ಮಂಗಳೂರು, ಮಡಿಕೇರಿ, ಹಾಸನಗಳಿಂದ ಪುತ್ತೂರಿಗೆ ನೇರ ಬಸ್ ಸೌಲಭ್ಯವಿದೆ. | |||