ಮುಖಪುಟ /ನಮ್ಮ ದೇವಾಲಯಗಳು  

ನುಗ್ಗೇಹಳ್ಳಿಯ ಲಕ್ಷೀ ನರಸಿಂಹ ದೇವಾಲಯ

Nuggehalli laxminarashima temple, ಲಕ್ಷ್ಮೀನರಸಿಂಹ ದೇವಾಲಯ, ನುಗ್ಗೇಹಳ್ಳಿ, kannadaratna.com our temples.in, temples of karnataka, hassan, namma devalayagalu, ಚಿತ್ರಕೃಪೆ ಹಾಸನ ಜಿಲ್ಲೆ ಅಧಿಕೃತ ಪ್ರವಾಸಿ ಹೊತ್ತಗೆ, ಕಗ್ಗಲುಗಳು ಶಿಲೆಗಳಾಗಿ ತಮ್ಮ ಕಲಾ ಶ್ರೀಮಂತಿಕೆಯಿಂದ ವಿಶ್ವದ ಪ್ರವಾಸಿಗರನ್ನೇ ತಮ್ಮತ್ತ ಸೆಳೆಯುತ್ತಿರುವ ಹಾಸನ ಜಿಲ್ಲೆಯಲ್ಲಿರುವ ಮತ್ತೊಂದು ವೈಭವೋಪೇತ ದೇವಾಲಯಗಳ ಬೀಡು ನುಗ್ಗೇಹಳ್ಳಿ.  ಚನ್ನರಾಯಪಟ್ಟಣದಿಂದ 19 ಕಿಮೀ. ದೂರದಲ್ಲಿರುವ ನುಗ್ಗೇಹಳ್ಳಿ 13ನೆ ಶತಮಾನದಲ್ಲಿ ಹೊಯ್ಸಳ ಸೋಮೇಶ್ವರನ ಕಾಲದಲ್ಲಿ ದಂಡನಾಯಕನಾಗಿದ್ದ ಬೊಮ್ಮಣ್ಣ ಬಿಟ್ಟ ಅಗ್ರಹಾರ.

ಹಿಂದೆ ವಿಜಯ ಸೋಮನಾಥಪುರವೆಂದು ಖ್ಯಾತವಾಗಿದ್ದ ಈ ಊರು ನುಗ್ಗೆಹಳ್ಳಿ ಎಂದೇ ಪ್ರಖ್ಯಾತವಾಗಿದೆ. 16ನೆ ಶತಮಾನದಲ್ಲಿ ನುಗ್ಗೆಹಳ್ಳಿ ಒಂದು ಪಾಳೆಯಪಟ್ಟಾಗಿತ್ತು. ಈ ಪ್ರಾಂತ್ಯವನ್ನು  ಪೂಡೂರ ವಂಶಕ್ಕೆ ಸೇರಿದ ಪಾಳೆಯಗಾರರು ಆಳುತ್ತಿದ್ದರು ಎನ್ನುತ್ತದೆ ಇತಿಹಾಸ.

ಹರಿಹರ ಕ್ಷೇತ್ರವೆಂದೇ ಕರೆಸಿಕೊಂಡಿರುವ ಊರಿನ ಮಧ್ಯದಲ್ಲಿ ವಿಷ್ಣು ದೇವಾಲಯ ಹಾಗೂ ಈಶಾನ್ಯ ಭಾಗದಲ್ಲಿ ಸದಾಶಿವ ದೇವಾಲಯವಿದೆ. ಕಟ್ಟಿಗೆ ಗುಂಡಪ್ಪ ನಾಯಕ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿಸಿದನೆಂದು ತಿಳಿದುಬರುತ್ತದೆ.

kannadaratna.com our temples.in, temples of karnataka, hassan, namma devalayagalu, ಚಿತ್ರಕೃಪೆ ಹಾಸನ ಜಿಲ್ಲೆ ಅಧಿಕೃತ ಪ್ರವಾಸಿ ಹೊತ್ತಗೆ, ನುಗ್ಗೆಹಳ್ಳಿಯಲ್ಲಿರುವ ಲಕ್ಷ್ಮೀನರಸಿಂಹ ದೇವಾಲಯ ಪ್ರಮುಖವಾದ್ದು. 1246ರಲ್ಲಿ ನಿರ್ಮಿಸಲಾದ ಹೊಯ್ಸಳ ಶೈಲಿಯ ಲಕ್ಷ್ಮೀನರಸಿಂಹ ದೇವಾಲಯ 3 ಗೋಪುರ, 3ಗರ್ಭಗುಡಿಗಳಿಂದ ಕೂಡಿ ತ್ರಿಕೂಟಾಚಲವೆಂದು ಕರೆಸಿಕೊಂಡಿದೆ.  ಮಧ್ಯದ ಗರ್ಭಗುಡಿಯಲ್ಲಿ ಪ್ರಸನ್ನ ಕೇಶವನ ವಿಗ್ರಹವಿದೆ. ಮತ್ತೊಂದು ಗರ್ಭಗುಡಿಯಲ್ಲಿ ಲಕ್ಷ್ಮೀನರಸಿಂಹನ ಪ್ರತಿಮೆಯಿದ್ದರೆ, ಇನ್ನೊಂದರಲ್ಲಿ ವೇಣುಗೋಪಾಲನ ವಿಗ್ರಹವಿದೆ.  ಮಧ್ಯದ ಗರ್ಭಗುಡಿಗೆ ಮಾತ್ರವೇ ಹೊಯ್ಸಳ ಶೈಲಿಯ ರಮಣೀಯ ಗೋಪುರವಿದೆ.

ನಕ್ಷತ್ರಾಕಾರದ ಜಗತಿಯ ಮೇಲೆ ಬಳಪದಕಲ್ಲುಗಳಿಂದ ಕಟ್ಟಲಾದ ಸುಂದರ ದೇವಾಲಯವಿದೆ. ಹೊರಭಿತ್ತಿಯ ಪಟ್ಟಿಕೆಗಳಲ್ಲಿ ಆನೆ, ಲತೆ, ಕುದುರೆ, ಭಾಗವತದ ಕಥಾನಕಗಳು, ಮೊಸಳೆ ಮತ್ತು ಹಂಸಗಳ ಸಾಲುಗಳಿವೆ. ಪಟ್ಟಿಕೆಗಳಲ್ಲಿರುವ ಕೆಲವು ದೇವತಾ ಮೂರ್ತಿಗಳ ಉಬ್ಬುಶಿಲ್ಪ ಅದ್ಭುತವಾಗಿದೆ.   

ಹೊಯ್ಸಳ ವಾಸ್ತು ಶೈಲಿಯಲ್ಲಿರುವ ಈ ದೇವಾಲಯದಲ್ಲೂ ಮಹಾದ್ವಾರ, ಮುಖಮಂಟಪ, ನವರಂಗ, ಸುಖನಾಸಿ, ಭುವನೇಶ್ವರಿ ಹಾಗೂ ಗರ್ಭಗೃಹವಿದೆ. ಲಕ್ಷ್ಮೀನರಸಿಂಹ ದೇವಾಲಯಕ್ಕೆ ಉತ್ಸವಮೂರ್ತಿಯನ್ನು ಹಾಗೂ ಇತರ ಹಲವು ಲೋಹಪ್ರತಿಮೆಗಳನ್ನೂ ನುಗ್ಗೆಹಳ್ಳೀಯ ಪಾಳೆಯಗಾರ ಗೋಪಾಲ ಮಾಡಿಸಿಕೊಟ್ಟನೆಂದೂ ತಿಳಿದುಬರುತ್ತದೆ.

ಈಶಾನ್ಯದಲ್ಲಿರುವ ಸದಾಶಿವ ದೇವಾಲಯದ ಹೊರ ಭಿತ್ತಿಗಳ ಮೇಲೆ ಸೂಕ್ಷ್ಮ ಕಲಾತ್ಮಕ ಕೆತ್ತನೆಗಳಿಲ್ಲದಿದ್ದರೂ,  ಗೋಪುರ ವಿಶಿಷ್ಟವಾದ್ದಾಗಿದೆ. ನವರಂಗದ ಭುವನೇಶ್ವರಿಗಳಲ್ಲಿರುವ ಕಲಾತ್ಮಕತೆ ಮನಸೆಳೆಯುತ್ತದೆ.

ಸಂಪರ್ಕ: ಉಪ ನಿರ್ದೇಶಕರು ಮತ್ತು ಅಧ್ಯಕ್ಷರು, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ, ಹಾಸನ, ದೂರವಾಣಿ 08172-267345. ಅಥವಾ ಸಹಾಯಕ ನಿರ್ದೇಶಕರು, ಪ್ರದಾಶಿಕ ಪ್ರವಾಸೋದ್ಯಮ ಅಧಿಕಾರಿಗಳ ಕಾರ್ಯಾಲಯ, ಹಾಸನ. 08172-268862.

ಮುಖಪುಟ /ನಮ್ಮ ದೇವಾಲಯಗಳು