|
ಮುಖಪುಟ
/ನಮ್ಮ
ದೇವಾಲಯಗಳು ನುಗ್ಗೇಹಳ್ಳಿಯ ಸದಾಶಿವ ದೇವಾಲಯ
ಹೊಯ್ಸಳರ ಶೈಲಿಯ ಈ ದೇವಾಲಯ ಇದೇ ಊರಿನಲ್ಲಿರುವ ಲಕ್ಷ್ಮೀನರಸಿಂಹ ದೇವಾಲಯದಷ್ಟು ಕಲಾ ಶ್ರೀಮಂತಿಕೆಯಿಂದ ಕೂಡಿಲ್ಲ. ಏಕ ಕೂಟವಾದ ಈ ದೇವಾಲಯದಲ್ಲಿ ಸಹ ಸುಂದರ ಗೋಪುರ, ಮುಖಮಂಟಪ, ಸುಖನಾಸಿ, ಗರ್ಭಗೃಹವಿದೆ. ಪ್ರಧಾನ ಗರ್ಭಗೃಹದಲ್ಲಿ ಸದಾಶಿವನ ಲಿಂಗವಿದೆ. ನಕ್ಷತ್ರಾಕಾರದ ಜಗತಿಯ ಮೇಲೆ ಬಳಪದಕಲ್ಲುಗಳಿಂದ ಕಟ್ಟಲಾದ ಈ ಸುಂದರ ದೇವಾಲಯದ ಹೊರಭಿತ್ತಿಯ ಪಟ್ಟಿಕೆಗಳಲ್ಲಿ ಅರೆ ಕಂಬಗಳ ಹೊರತಾಗಿ ಸೂಕ್ಷ್ಮ ಕೆತ್ತನೆಗಳಿಲ್ಲದಿದ್ದರೂ, ಅರೆ ಗೋಪುರಗಳಿಂದ ಕೂಡಿದ ಗೋಪುರ ವಿಶಿಷ್ಟವಾದ್ದಾಗಿದೆ. ನವರಂಗದ ಭುವನೇಶ್ವರಿಗಳಲ್ಲಿರುವ ಕಲಾತ್ಮಕತೆ ಮನಸೆಳೆಯುತ್ತದೆ. ಸಂಪರ್ಕ: ಉಪ ನಿರ್ದೇಶಕರು ಮತ್ತು ಅಧ್ಯಕ್ಷರು, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ, ಹಾಸನ, ದೂರವಾಣಿ 08172-267345. ಅಥವಾ ಸಹಾಯಕ ನಿರ್ದೇಶಕರು, ಪ್ರದಾಶಿಕ ಪ್ರವಾಸೋದ್ಯಮ ಅಧಿಕಾರಿಗಳ ಕಾರ್ಯಾಲಯ, ಹಾಸನ. 08172-268862. | |||