|
ಮುಖಪುಟ
/ನಮ್ಮದೇವಾಲಯಗಳು
ನೊಣವಿನಕೆರೆ ವೇಣುಗೋಪಾಲ
ದೇವಾಲಯ
*ಟಿ.ಎಂ.ಸತೀಶ್
ಈ ದೇವಾಲಯಗಳ ಪೈಕಿ
ಗೋಪಾಲಸ್ವಾಮಿ ದೇವಾಲಯ ಪ್ರಮುಖವಾದದ್ದು. ಹೊಯ್ಸಳರ ಆಳ್ವಿಕೆಯ ಅವಧಿಯಲ್ಲಿ
ನಿರ್ಮಿತವಾದ ಈ ದೇವಾಲಯ ತ್ರಿಕೂಟಾಚಲ ವಿನ್ಯಾಸ ಒಳಗೊಂಡಿದೆ. ಮಹಾದ್ವಾರ,
ಮುಖಮಂಟಪ, ನವರಂಗವನ್ನು ಇದು ಒಳಗೊಂಡಿದೆ.
ಈ ದೇವಸ್ಧಾನದಲ್ಲಿರುವ ಮೂರು
ಗರ್ಭಗುಡಿಗಳಲ್ಲಿ ಕೇಶವ,
ಯೋಗಾನರಸಿಂಹ ಮತ್ತು ವೇಣುಗೋಪಾಲ ವಿಗ್ರಹಗಳಿವೆ.
ನೊಣವಿನಕೆರೆ ಬೇಟೆರಾಯಸ್ವಾಮಿ
ದೇವಸ್ಧಾನ ಮತ್ತೊಂದು ಪ್ರಮುಖ ಮಂದಿರ. 16ನೆಯ ಶತಮಾನದಲ್ಲಿ ಈ ದೇವಾಲಯವನ್ನು
ಕೊನೇರಿ ಅಯ್ಯಂಗಾರ್ಯರು ಕಟ್ಟಿಸಿದರೆಂದು ತಿಳಿದುಬಂದಿದೆ. ನವರಂಗದ ಕಂಬದ ಮೇಲೆ ಇವರ
ಭಕ್ತವಿಗ್ರಹವಿದೆ. ಈ ದೇವಸ್ಧಾನಕ್ಕೂ ಗೋಪುರವಿಲ್ಲದ ಮಹಾದ್ವಾರವಿದೆ.
ಗರ್ಭಗೃಹ,
ಸುಕನಾಸಿ ಮತ್ತು ನವರಂಗ ಇದೆ. ಗರ್ಭಗೃಹದಲ್ಲಿ
ಕಪ್ಪುಕಲ್ಲಿನಲ್ಲಿ ಕೆತ್ತಿದ ಸುಂದರವಾದ ಬೇಟೆರಾಯನ ವಿಗ್ರಹವಿದೆ.
ಪ್ರವಾಸ ಮಾಹಿತಿ:
ಹೆಚ್ಚಿನ ಮಾಹಿತಿಗೆ ನಿರ್ದೇಶಕರು,
ಪ್ರವಾಸೋದ್ಯಮ ಇಲಾಖೆ, ಖನಿಜ ಭವನ,
ರೇಸ್ಕೋರ್ಸ್ ರಸ್ತೆ, ಬೆಂಗಳೂರು.
ದೂರವಾಣಿ :080-2352901 /2352909 /2352903
| |||