|
ಮುಖಪುಟ
/ನಮ್ಮ
ದೇವಾಲಯಗಳು
ಕುಂಡಿನಿ - ಕಪಿಲೆ ಸಂಗಮ ಸ್ಥಳದ ಗರಳಪುರಿಯೆಂಬ ಶ್ರೀಕಂಠನ ನೆಲೆವೀಡು *ಟಿ.ಎಂ.ಸತೀಶ್
ಪುರಾಣ -ಪುಣ್ಯಕಥೆಗಳ ರೀತ್ಯ ಅಮೃತವನ್ನು ಪಡೆಯಲೋಸುಗ ದೇವ-ದಾನವರು, ಮಂದರ ಪರ್ವತವನ್ನು ಕಡೆಗೋಲನ್ನಾಗಿಯೂ, ವಾಸುಕಿ ಎಂಬ ಮಹಾ ಸರ್ಪವನ್ನು ಹಗ್ಗವನ್ನಾಗಿಯೂ ಮಾಡಿಕೊಂಡು ಕ್ಷೀರಸಮುದ್ರವನ್ನು ಕಡೆದಾಗ, ಲಕ್ಷ್ಮೀಯೂ, ಕಲ್ಪವೃಕ್ಷವೂ, ಕಾಮಧೇನುವೂ, ಅಮೃತವೂ ಜೊತೆಗೆ ಭಯಂಕರ ಹಾಲಾಹಲವೂ ಹೊರ ಬಂದಿತು. ಈ ಮಹಾ ಹಾಲಾಹಲವು ಇಡೀ ಭೂಮಂಡಲವನ್ನೇ ಆವರಿಸಿ ಸಕಲ ಜೀವರಾಶಿಗಳನ್ನೂ ಬಲಿತೆಗೆದುಕೊಳ್ಳುವುದೆಂಬ ಭೀತಿಯಿಂದ ಎಲ್ಲರೂ ಥರಥರ ನಡುಗುತ್ತಲಿರುವಾಗ, ಲೋಕರಕ್ಷಕನಾದ ಮಹಾಶಿವನು ಆ ಕಾರ್ಕೋಟಕ ವಿಷವನ್ನು ನುಂಗಿದನಂತೆ. ಆದರೆ ಶಿವೆಯು ವಿಷವು ಉದರಸೇರದಂತೆ ಗಂಟಲಲ್ಲೇ ತಡೆದಳಂತೆ. ಹೀಗಾಗೇ ಶಿವ ನೀಲಕಂಠನಾದ. ನಂಜುಂಡನಾದ.
ಶ್ರೀಕಂಠಮುಡಿ : ಮೈಸೂರಿಗೆ ಸಮೀಪದಲ್ಲೇ ಇರುವ ಈ ದೇವಾಲಯವನ್ನು ಮೈಸೂರು ಅರಸರಾದ ಮುಮ್ಮಡಿ ಕೃಷ್ಣರಾಜ ಒಡೆಯರು ಜೀರ್ಣೋದ್ಧಾರಗೊಳಿಸಿದರು. ಶ್ರೀಕಂಠಮುಡಿಯನ್ನೂ ನೀಡಿದರು. ದೇಗುಲದ ಗೋಪುರ ನಿರ್ಮಾಣ ಆಗಿದ್ದೂ ಇವರ ಕಾಲದಲ್ಲೇ.
ಜಾತ್ರೆ: ಪ್ರತಿವರ್ಷ ಫಾಲ್ಗುಣ ಅಥವಾ ಚೈತ್ರ ಮಾಸದಲ್ಲಿ ಇಲ್ಲಿ ಪಂಚರಥೋತ್ಸವ ಜರುಗುತ್ತದೆ. ನಂಜನಗೂಡಿನಲ್ಲಿ ಶ್ರೀಕಂಠಮುಡಿ, ಜಾತ್ರೆ ನಡೆಯುತ್ತದೆ. ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ, ತಮ್ಮ ಮುಡಿಯನ್ನು ನೀಡಿ, ಕಪಿಲೆಯಲ್ಲಿ ಮಿಂದು ದೇವರ ದರ್ಶನ ಪಡೆಯುತ್ತಾರೆ.
ಮಹಾಶಿವರಾತ್ರಿ,
ಮಾಸಶಿವರಾತ್ರಿ,
ಹಬ್ಬ
ಹರಿದಿನಗಳು ಹಾಗೂ ಆಷಾಢದಲ್ಲಿ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಶಾಲ್ಯಾನ್ನ
ಅಭಿಷೇಕ ಇಲ್ಲಿನ ವಿಶೇಷ. ನಂಜನಗೂಡಿನ ಶ್ರೀಕಂಠನ ದೇಗುಲದಲ್ಲಿ ಚಂಡಿಕೇಶ್ವರ,
ಉದ್ಭವ ಗಣಪ,
ನವಗ್ರಹ,
ಪಾರ್ವತಿ
ಅಮ್ಮನವರ ದೇಗುಲಗಳಿವೆ.
ಎಲ್ಲ ಶಿವ ದೇವಾಲಯಗಳಲ್ಲಿಯೂ ನಂದಿ ಈಶ್ವರನಿಗೆ ಎದುರು, ಲಿಂಗದತ್ತ ಮುಖಮಾಡಿದ್ದರೆ,
ಪಕ್ಕದಲ್ಲಿ ತುಲಾಭಾರದ ಮಂಟಪವಿದೆ. ಹರಕೆ ಹೊತ್ತವರು ಅಲ್ಲಿ ತುಲಾಭಾರ ಮಾಡಿಸಿ, ತೂಕದಷ್ಟು ಬೆಲ್ಲ, ಅಕ್ಕಿ ಇತ್ಯಾದಿಯನ್ನು ದೇವಾಲಯಕ್ಕೆ ದಾನ ಮಾಡುತ್ತಾರೆ. ಪ್ರತಿವರ್ಷ ಕಾರ್ತೀಕದಲ್ಲಿ ಚಿಕ್ಕ ರಥೋತ್ಸವ ಜರುಗುತ್ತದೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ ಪಟ್ಟಣಗಳಿಂದ ನೇರ್ ಬಸ್ ಸೌಲಭ್ಯವಿದೆ. ಮೈಸೂರಿಗೆ ಬಂದು ಅಲ್ಲಿಂದ ನಂಜನಗೂಡಿಗೆ ಹೋಗಬಹುದು. ರೈಲು ಸೌಲಭ್ಯವೂ ಉಂಟು. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in |
![]() ![]() |
||