|
ಮುಖಪುಟ
/ನಮ್ಮದೇವಾಲಯಗಳು
ಯೋಗನಂದೀಶ್ವರ, ಭೋಗನಂದೀಶ್ವರರ
ನೆಲೆವೀಡು
*ಟಿ.ಎಂ.
ಸತೀಶ್
ಕನ್ನಡನಾಡಿನ ಹೆಸರಾಂತ ಗಿರಿಧಾಮಗಳಲ್ಲಿ ಒಂದಾದ ನಂದಿ, ಪವಿತ್ರ ಪುಣ್ಯ ಕ್ಷೇತ್ರವೂ ಹೌದು. ಯೋಗನಂದೀಶ್ವರ,
ಭೋಗನಂದೀಶ್ವರರ ಹಾಗೂ ಅರುಣಾಚಲೇಶ್ವರನ ನೆಲೆವೀಡಾದ ನಂದಿಯಲ್ಲಿ ಪ್ರಾಚೀನ ಹಾಗೂ
ಪುರಾಣ ಪ್ರಸಿದ್ಧ ಶಿವದೇವಾಲಯಗಳಿವೆ.
ನಂದಿಬೆಟ್ಟದ ಕೆಳಗಿರುವ ಹಳೆಯ ನಂದಿ ಗ್ರಾಮದಲ್ಲಿ ಚೋಳರ ಕಾಲದ ವಿಶಾಲವಾದ ಸುಂದರ
ದೇವಾಲಯವಿದೆ. ಇಲ್ಲಿ ಅರುಣಾಚಲೇಶ್ವರ ಹಾಗೂ ಭೋಗನಂದೀಶ್ವರ - ಪಾರ್ವತಿ ಸಮೇತನಾಗಿ
ಪೂಜೆಗೊಳ್ಳುತ್ತ, ಗ್ರಾಮಸ್ಥರನ್ನೂ ಹಾಗೂ ತನ್ನ ದರ್ಶನಕ್ಕೆ ಬರುವ ಭಕ್ತರನ್ನೂ
ಹರಸುತ್ತಿದ್ದಾನೆ.
ಈ ದೇವಾಲಯ
ವಿಶಾಲವಾದ ಪ್ರಾಕಾರವನ್ನೂ,
ಮುಖ್ಯದ್ವಾರವನ್ನೂ, ರಾಜಗೋಪುರವನ್ನೂ ಒಳಗೊಂಡಿದೆ. 370 ಅಡಿ ಉದ್ದ ಹಾಗೂ 240 ಅಡಿ ಅಗಲವಿರುವ
ಜೋಳರ ಕಾಲದ ದೇವಾಲಯ ಕಲಾತ್ಮಕವಾಗಿಯೂ ಶ್ರೀಮಂತವಾಗಿದೆ.
ಭಿತ್ತಿಗಳ ಮೇಲೆ ನಾಟ್ಯವಿಗ್ರಹಗಳನ್ನು ಜಾಲಂದ್ರವಾಗಿ ಬಳಕೆ ಮಾಡಿಕೊಂಡಿರುವ
ಶಿಲ್ಪಿಯ ಚಾತುರ್ಯ ಮೆಚ್ಚುವಂತಿದೆ.
ಹೊರ ಭಿತ್ತಿಗಳಲ್ಲಿ ಹಲವು ಆಕರ್ಷಕ ಸುಂದರ
ಉಬ್ಬು ಶಿಲ್ಪಗಳಿವೆ. ದೇವಾಲಯದಲ್ಲಿರುವ ಛತ್ರಿಯಾಕಾರದ 10 ಅಡಿ ಎತ್ತರದ ಕಲ್ಲಿನ
ಕಂಬವೂ ಮನಮೋಹಕವಾಗಿದೆ.
ಈ ದೇವಾಲಯದ ಗರ್ಭಗುಡಿಯ
ಮುಂದಿರುವ ಮಂಟಪದ ಕಂಬಗಳು ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ್ದು ನೋಡುಗರ
ಮನಸೆಳೆಯುತ್ತವೆ. ನವರಂಗದಲ್ಲಿರುವ ಜಾಲಂದ್ರದಲ್ಲಿ ದೇವಾನುದೇವತೆಗಳ ಉಬ್ಬು
ಶಿಲ್ಪವಿದೆ.
1770ರಲ್ಲಿ ಇದನ್ನು ಹೈದರ್ ಅಲಿ ಬೆಟ್ಟವನ್ನು ಮರಾಠರಿಂದ ವಶಪಡಿಸಿಕೊಂಡ. ಟಿಪ್ಪೂ
ಸುಲ್ತಾನ್ ಇಲ್ಲಿನ ರಣ್ಯತೆಗೆ ಮನಸೋತು ಅಭಿವೃದ್ಧಿ ಪಡಿಸಿದ. ಈಗ ಜೀರ್ಣವಾಗಿರುವ
ಕೋಟೆಯನ್ನು ಕಟ್ಟಿಸಿದ್ದೂ ಹೈದರಲಿ ಹಾಗೂ ಟಿಪ್ಪೂ ಎಂದು ಇತಿಹಾಸ ಹೇಳುತ್ತದೆ.
ಬೆಟ್ಟದ ಮೇಲೆ ಕೋಟೆ ಬಂದ ಬಳಿಕ ಇದು ನಂದಿದುರ್ಗವಾಯ್ತು.
ಐತಿಹ್ಯ: ನಂದಿ ಎಂದರೆ
ಬಸವ, ಬಸವನಿಗೂ
ಈ ಬೆಟ್ಟಕ್ಕೂ ಏನು ಸಂಬಂಧ? ಈ ಪ್ರಶ್ನೆ ಸಹಜವಾಗೇ
ಉದ್ಭವಿಸುತ್ತದೆ. ನಂದಿಬೆಟ್ಟ ಎಂಬ ಹೆಸರು ಹೇಗೆ ಬಂತು ಎಂಬ ಬಗ್ಗೆಯೇ ಜಿಜ್ಞಾಸೆ
ಇದೆ. ಈ ಪ್ರದೇಶ ಚೋಳರ
ಆಳ್ವಿಕೆಗೆ ಒಳಪಡುವ ಮುನ್ನ ಆನಂದಗಿರಿ,
ಕೂಷ್ಮಾಂಡಗಿರಿ ಎಂದು ಕರೆಯಲ್ಪಡುತ್ತಿತ್ತು.
ಕೂಷ್ಮಾಂಡ ಋಷಿಗಳು ಇಲ್ಲಿ ತಪಸ್ಸು ಮಾಡಿದನೆಂದು ಸ್ಥಳ ಪುರಾಣ ಹೇಳುತ್ತದೆ.
ಆದ್ದರಿಂದಲೇ ಈ ಬೆಟ್ಟಕ್ಕೆ ಕೂಷ್ಮಾಂಡಗಿರಿ ಎಂಬ ಹೆಸರೂ ಬಂದಿತ್ತಂತೆ.
ಬೇಸಿಗೆಯಲ್ಲಿ ತಂಪಾಗಿರುವ ಈ ಸ್ಥಳ ಆನಂದ ತರುತ್ತಿದ್ದ ಕಾರಣ ಇದನ್ನು ಆನಂದ ಗಿರಿ
ಎನ್ನುತ್ತಿದ್ದರು ಎಂಬುದು ಊರಿನ ಹಿರೀಕರ ಹೇಳಿಕೆ.
ರಮ್ಯ ತಾಣ : ಕರುನಾಡು. ಕುಲು ಮನಾಲಿ, ಮಸ್ಸೂರಿ ಎಂದೇ ಖ್ಯಾತವಾದ ಗಿರಿಧಾಮ ನಂದಿಬೆಟ್ಟ. ಬೆಂಗಳೂರಿನಿಂದ 6೦ ಕಿ.ಮಿ. ದೂರು ಇರುವ ನಂದಿ ಬೆಟ್ಟ. ಸಮುದ್ರಮಟ್ಟದಿಂದ 4851 ಅಡಿ ಎತ್ತರದಲ್ಲಿರುವ ನಂದಿಬೆಟ್ಟ ಬೇಸಿಗೆಯಲ್ಲಿ ತಂಪಾಗಿರುವುದರಿಂದಲೇ ಮೈಸೂರು ಹುಲಿ ಟಿಪ್ಪೂ ಸುಲ್ತಾನರು ಈ ತಾಣಕ್ಕೆ ಮನಸೋತಿದ್ದು. ಹೀಗಾಗೇ ಟಿಪ್ಪೂ ಸಂಸಾರ ಸಮೇತ ಬಿರು ಬೇಸಿಗೆಯಲ್ಲಿ ನಂದಿಗೆ ಬಂದು ಬಿಡಾರ ಹೂಡುತ್ತಿದ್ದರು ಎನ್ನುತ್ತದೆ ಇತಿಹಾಸ. ಟಿಪ್ಪೂ ಬೇಸಿಗೆ ಬಂಗಲೆ, ಟಿಪ್ಪೂ ಕಾಲದ ರಕ್ಷಣಾ ಗೋಡೆಗಳು ಇಂದಿಗೂ ಇಲ್ಲಿ ಅದಕ್ಕೆ ಸಾಕ್ಷಿಯಾಗಿವೆ. ಬ್ರಿಟಿಷರೂ ಇದನ್ನು ಗಿರಿಧಾಮವೆಂದೇ ಪರಿಗಣಿಸಿ ಇಲ್ಲಿ ವಿಶ್ರಾಂತಿ ಬಂಗಲೆಗಳನ್ನೂ ನಿರ್ಮಿಸಿದ್ದಾರೆ.
ನೋಡಬೇಕಾದ ತಾಣಗಳು: ಧುಮ್ಮಿಕ್ಕುವ ಜಲಧಾರೆ, ಚಿಕ್ಕ ಚಿಕ್ಕ ಝರಿ, 6೦೦ ಮೀಟರ್ ಆಳದ ಟಿಪ್ಪೂ ಡ್ರಾಪ್ (ಪ್ರಪಾತ), ತಿಳಿನೀರಿನಿಂದ ತುಂಬಿದ ಸುಂದರ ಕೊಳ - ಅಮೃತ ಸರೋವರ, ಅರಸರು ಶತ್ರುಗಳಿಂದ ತಪ್ಪಿಸಿಕೊಳ್ಳಲು ನಿರ್ಮಿಸಿದ್ದ ಗುಪ್ತದಾರಿ, ವಿಶಾಲವಾದ ಮಕ್ಕಳ ಆಟದ ಮೈದಾನ, ಟಿಪ್ಪು ಕೋಟೆ, ಯೋಗನಂದೀಶ್ವರ ಹಾಗೂ ಭೋಗ ನಂದೀಶ್ವರ ದೇವಾಲಯ ಇಲ್ಲಿನ ಪ್ರಮುಖ ಆಕರ್ಷಣೆ. ಆದರೆ ಬೆಟ್ಟದ ಮೇಲಿರುವ ಕೋಟೆಯ ಗೋಡೆಗಳು ಹಲವೆಡೆ ಬಿದ್ದು ಹೋಗಿವೆ. ಹತ್ತಿರ ಹೋಗುವುದು ಬಲು ಅಪಾಯಕಾರಿ. ಇಲ್ಲಿ ತಿಂಡಿ ತಿನಿಸುಗಳು ಬಲು ದುಬಾರಿ. ಎಲ್ಲ ಅಂಗಡಿಗಳಲ್ಲೂ ತಂಪು ಪಾನೀಯ, ಪ್ಯಾಕ್ ಮಾಡಿದ ತಿನಿಸುಗಳಿಗೆ ಎಂ.ಆರ್.ಪಿ.ಗಿಂತ ಹೆಚ್ಚಿನ ಹಣ ಸುಲಿಯುತ್ತಾರೆ. ಕಾನೂನು ರೀತ್ಯ ಇದು ಅಪರಾಧವಾದರೂ ಇಲ್ಲಿ ನಿರಂತರವಾಗಿ ನಡೆದಿದೆ.
ಹೆಚ್ಚಿನ ಮಾಹಿತಿಗೆ ಹಾಗೂ ಕೊಠಡಿ ಕಾಯ್ದಿರಿಸಲು ಸಂಪರ್ಕಿಸಬೇಕಾದ ವಿಳಾಸ: ನಿರ್ದೇಶಕರು, ತೋಟಗಾರಿಕೆ ಇಲಾಖೆ, ಲಾಲ್‌ಬಾಗ್, ಬೆಂಗಳೂರು. ದೂರವಾಣಿ ೦೮೦-೨೬೫೭೯೨೩೧ ಅಥವಾ ವಿಶೇಷಾಧಿಕಾರಿ, ನಂದಿಗಿರಿಧಾಮ, ಚಿಕ್ಕಬಳ್ಳಾಪುರ ತಾಲೂಕ್, ಕೋಲಾರ ಜಿಲ್ಲೆ. ದೂರವಾಣಿ :೦೮೧೫೬-೨೬೭೮೬೨೧ ಮುಖಪುಟ / ನಮ್ಮದೇವಾಲಯಗಳು | |||