ಮುಖಪುಟ /ನಮ್ಮದೇವಾಲಯಗಳು   

ನಗರ್ತಪೇಟೆಯ ನಗರೇಶ್ವರ ದೇವಾಲಯ

*ಟಿ.ಎಂ.ಸತೀಶ್

Nagareswara temple, ನಗರೇಶ್ವರ ದೇವಾಲಯ, kannadaratna.com, our temples, ourtemples.in, sharadhe, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು, ಬೆಂಗಳೂರು ಮಹಾನಗರದಲ್ಲಿ ಪುರಾತನವಾದ ನೂರಾರು ದೇವಾಲಯಗಳಿವೆ. ನಗರದ ಹಳೆಯ ಬಡಾವಣೆಗಳಲ್ಲಿ ಇಂಥ ದೇವಾಲಯಗಳು ಇಂದಿಗೂ ತಮ್ಮ ಪರಂಪರೆಯನ್ನು ಉಳಿಸಿಕೊಂಡಿವೆ. ಇಂಥ ದೇವಾಲಯಗಳ ಪೈಕಿ ಶ್ರೀ ಅನ್ನಪೂರ್ಣಾಂಬ ಶ್ರೀ ನಗರೇಶ್ವರ ಸ್ವಾಮಿ ದೇವಾಲಯವೂ ಒಂದು.

ಬೆಂಗಳೂರಿನ ಕರಗ ಖ್ಯಾತಿಯ ಧರ್ಮರಾಯನ ದೇವಾಲಯದ ಪಕ್ಕದ ರಸ್ತೆಯಲ್ಲಿ ಸಾಗಿದರೆ, ನಗರ್ತಪೇಟೆಯನ್ನು ನಾವು ಪ್ರವೇಶಿಸುತ್ತೇವೆ. ಈ ಮುಖ್ಯರಸ್ತೆಯಲ್ಲೇ ಭವ್ಯವಾದ ವಿಜಯನಗರ ಶೈಲಿಯ ರಾಯಗೋಪುರ ಸ್ವಾಗತಿಸುತ್ತದೆ. ಇದುವೇ ನಗರೇಶ್ವರ ದೇವಸ್ಥಾನ.

ಈ ದೇವಾಲಯವನ್ನು ಸುಮಾರು 250 ವರ್ಷಗಳ ಹಿಂದೆ ಕೆಂಪನಂಜುಂಡಪ್ಪ ಎಂಬ ನಗರ್ತ ಮುಖಂಡರು ನಿರ್ಮಿಸಿದರು ಎಂದು ತಿಳಿದುಬರುತ್ತದೆ. ಹೀಗೆ ನಗರ್ತರು ನಗರದಲ್ಲಿ ಸ್ಥಾಪಿಸಿದ ದೇವರಿಗೆ ನಗರೇಶ್ವರ ಎಂಬ   ಹೆಸರು ಬಂದಿದೆ.

Nagareswara temple, ನಗರೇಶ್ವರ ದೇವಾಲಯ, kannadaratna.com, our temples, ourtemples.in, sharadhe, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು, ಇಲ್ಲಿರುವ ಮೂರು ಹಂತದ ಈ ರಾಜಗೋಪುರದಲ್ಲಿ ಜಯವಿಜಯರು, ಗಣದೇವತೆಗಳು, ಶಿವಪಾರ್ವತಿಯೇ ಮೊದಲಾದ ಹಲವು ಗಾರೆಯ ಪ್ರತಿಮೆಗಳಿವೆ. ಈ ದ್ವಾರ ಪ್ರವೇಶಿಸುತ್ತಿದ್ದಂತೆ ಒಳಗೆ ಪುರಾತನವಾದ ದೇಗುಲ ಪ್ರಾಕಾರವಿದೆ.  ಸುಂದರ ಕೆತ್ತನೆಯ ಕಲ್ಲುಕಂಬಗಳ ಮೇಲಿನ ಛಾವಣಿಯಲ್ಲಿ ಇರುವ ಗೋಪುರಗಳಲ್ಲಿ ಗಣಪ, ಸುಬ್ರಹ್ಮಣ್ಯನ ಪ್ರತಿಮೆಗಳಿವೆ. ಮಧ್ಯದಲ್ಲಿರುವ ಗೂಡಿನಲ್ಲಿ ಗಿರಿಜಾಕಲ್ಯಾಣದ ದೃಶ್ಯಾವಳಿಗಳಿವೆ. ಇದರ ಕೆಳಗೆ 1884ರಲ್ಲಿ ದೇವಾಲಯವನ್ನು ಪುನರ್ನಿರ್ಮಾಣ ಮಾಡಿದ ಬಗ್ಗೆ ಉಲ್ಲೇಖವಿದೆ.

ಮೂಲಗರ್ಭಗೃಹದಲ್ಲಿ ನಗರೇಶ್ವರ ಲಿಂಗವಿದೆ. ಶಿವಲಿಂಗದ ಎದುರು ನಂದಿಯ ಮೂರ್ತಿಯಿದೆ. ಗರ್ಭಗೃಹದ ಹೊರ ಆವರಣದ ಕಲ್ಲಿನ ಬಾಗಿಲವಾಡದಲ್ಲಿ ದ್ವಾರಪಾಲಕರ ಉಬ್ಬುಶಿಲ್ಪವಿದೆ. ಮೇಲ್ಭಾಗದಲ್ಲಿ ನಂದಿ ಹಾಗೂ ಸರ್ಪಭೂಷಣನಾದ ಲಿಂಗದ ಮೂರ್ತಿಯಿದೆ.

ಲಿಂಗದ ಎಡ ಭಾಗದ ಗರ್ಭಗೃಹದಲ್ಲಿ ಸಾಲಿಗ್ರಾಮ ಶಿಲೆಯಲ್ಲಿ ನಿರ್ಮಿಸಲಾದ ತಾಯಿ ಅನ್ನಪೂರ್ಣೆಶ್ವರಿಯ ಸುಂದರ ಮೂರ್ತಿಯಿದೆ. ಬಲ ಭಾಗದಲ್ಲಿ ಗಣಪತಿಯ ವಿಗ್ರಹವಿದೆ. ಅದರ ಪಕ್ಕದಲ್ಲಿ ಇರುವ ಮತ್ತೊಂದು ಗರ್ಭಗೃಹದಲ್ಲಿ ವೀರಭದ್ರಮೂರ್ತಿ ಹಾಗೂ ಅದರ ಪಕ್ಕದ ಗುಡಿಯಲ್ಲಿ ಆರು ತಲೆಯ ಮಯೂರಾರೂಢ ಷಣ್ಮುಖನ ಮನೋಹರ ಪ್ರತಿಮೆಯಿದೆ. ಇದರ ಮಧ್ಯೆ ಪುರಾತನವಾದ ಉತ್ಸವಮೂರ್ತಿಯಿದೆ.

Nagareswara temple, ನಗರೇಶ್ವರ ದೇವಾಲಯ, kannadaratna.com, our temples, ourtemples.in, sharadhe, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು, ಪ್ರತಿ ವರ್ಷ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಬರುವ ಆರಿದ್ರಾ ನಕ್ಷತ್ರದಲ್ಲಿ ಈ ನಟರಾಜನ ಉತ್ಸವ ಮೂರ್ತಿಗೆ ಶಾಲ್ಯಾನಾಭಿಷೇಕ ನಡೆಯುತ್ತದೆ. ಇದು ಆರಿದ್ರೋತ್ಸವ ಎಂದೇ ಖ್ಯಾತವಾಗಿದ್ದು, ಶಿವ ಹುಟ್ಟಿದ ಆ ದಿನ ಶಿವದರ್ಶನ ಮಾಡಿದರೆ, ಸಪ್ತಜನ್ಮದಲ್ಲಿ ಮಾಡಿದ ಪಾಪವೂ ನಿವಾರಣೆ ಆಗುತ್ತದೆ ಎಂದು ನಂಬಿಕೆ. ಪ್ರತಿವರ್ಷ ವೈಶಾಖ ಶುದ್ಧ ಪೂರ್ಣಿಮೆಯ ದಿನ ದೇವಾಲಯದಲ್ಲಿ ಬ್ರಹ್ಮರಥೋತ್ಸವ ನಡೆಯುತ್ತದೆ.  

ಪ್ರಸ್ತುತ ದೇವಾಲಯದ ಪ್ರಧಾನ ಅರ್ಚಕರಾಗಿರುವ ಆಗಮ ಪಂಡಿತರಾದ ಜಿ. ಅರುಣಾಚಲ ದೀಕ್ಷಿತರು  ಶೈವಾಗಮ ಪದ್ಧತಿಯಂತೆ ಪೂಜಾ ಕೈಂಕರ್ಯಗಳನ್ನು ನಡೆಸುತ್ತಿದ್ದಾರೆ..

ನವರಾತ್ರಿಯಲ್ಲಿ ಇಲ್ಲಿ ಪದ್ಮಾಸನಸ್ಥಿತೆಯಾದ ಅನ್ನಪೂರ್ಣೆಶ್ವರಿಗೆ ನಾನಾ ವಿಧದ ಅಲಂಕಾರಗಳನ್ನು ಮಾಡಲಾಗುತ್ತದೆ. ಪ್ರಾಪ್ತ ವಯಸ್ಸಿಗೆ ಬಂದು ಬಹುಕಾಲ ಮದುವೆಯಾಗದವರು ಇಲ್ಲಿ ಬಂದು ತಾಯಿಗೆ ಹರಕೆ ಹೊರುತ್ತಾರೆ. ಹರಕೆ ಹೊತ್ತ ಕೆಲವೇ ದಿನದಲ್ಲಿ ಅವರಿಗೆ ಮದುವೆ ಆದ ನಿದರ್ಶನಗಳಿವೆ ಎನ್ನುತ್ತಾರೆ ಸ್ಥಳೀಯರು.

Nagareswara temple, ನಗರೇಶ್ವರ ದೇವಾಲಯ, kannadaratna.com, our temples, ourtemples.in, sharadhe, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು, ದೇವಾಲಯದ ಪ್ರಾಕಾರದಲ್ಲಿ ಪದ್ಮಾವತಿ, ಲಕ್ಷ್ಮೀ ಸಮೇತ ಶ್ರೀಮನ್ನಾರಾಯಣ, ನಾಗದೇವತೆ, ಆಂಜನೇಯ, ದುರ್ಗಾದೇವಿ, ಸೂರ್ಯನಾರಾಯಣ, ಕಾಲಭೈರವ ದೇವಾಲಯಗಳೂ ಇವೆ. ದೇವಾಲಯದ ಬಲ ಭಾಗದಲ್ಲಿ ಚಂಡಿಕೇಶ್ವರ ಹಾಗೂ ನವಗ್ರಹ ದೇವಾಲಯವಿದೆ. ಕಾರ್ತೀಕ ಮಾಸದಲ್ಲಿ ಈ ದೇವಾಲಯದಲ್ಲಿ ಲಕ್ಷಾರ್ಚನೆ ಹಾಗೂ ಶಿವದೀಪೋತ್ಸವ ನಡೆಯುತ್ತದೆ.

ಹಠ ಮಾಡುವ ಮಕ್ಕಳನ್ನು ಕರೆತಂದು ಇಲ್ಲಿ ಪೂಜೆ ಮಾಡಿಸಿದರೆ ಅವರು ಶಾಂತಸ್ವಭಾವದವರಾಗುತ್ತಾರೆ ಎಂಬುದು ಪ್ರತೀತಿ.

ಈ ಹಿಂದೆ ಇಲ್ಲಿ ಪ್ರಧಾನ ಅರ್ಚಕರಾಗಿದ್ದ ಡಾ.ಎನ್. ಗುಂಡಪ್ಪ ದೀಕ್ಷಿತರು, ಎಂ.ಎ. ಪಿ.ಎಚ್.ಡಿ. ಪದವಿ ಪಡೆದು ಧಾರ್ಮಿಕ ದತ್ತಿ ಇಲಾಖೆಯಲ್ಲಿ ಉನ್ನತಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ತಮ್ಮ ಸೇವೆಯನ್ನು ದೇವರಿಗೆ ಮುಡಿಪಾಗಿಟ್ಟಿದ್ದರು.

ಹೆಚ್ಚಿನ ಮಾಹಿತಿಗೆ, ಪೂಜಾ ಕೈಂಕರ್ಯಗಳಿಗೆ ಅರ್ಚಕರಾದ ಶ್ರೀ ಅರುಣಾಚಲ ದೀಕ್ಷಿತರನ್ನು ದೂರವಾಣಿ 9342826785 ಅಥವಾ 22279470 ಮೂಲಕ ಸಂಪರ್ಕಿಸಬಹುದು.

ಮುಖಪುಟ; /ನಮ್ಮದೇವಾಲಯಗಳು