|
ನಾಗಮಂಗಲ ಯೋಗಾನರಸಿಂಹಸ್ವಾಮಿ ದೇವಾಲಯ
ಲೋಹಿತ ವಂಶದವನೊಬ್ಬನಿಗೆ ದೇವರು ಕನಸಿನಲ್ಲಿ ಬಂದು ತಾನು ಹುತ್ತದಲ್ಲಿ ಇರುವುದಾಗಿ ತಿಳಿಸಿದನಂತೆ. ಆ ಹುತ್ತವನ್ನು ಹುಡುಕುತ್ತಾ ಬಂದ ಆತ ಈ ಸ್ಥಳದಲ್ಲಿ ನರಸಿಂಹದೇವರು ಆವಿರ್ಭವಿಸಿರುವುದನ್ನು ನೋಡಿನಂತೆ. ಈ ಹುತ್ತಕ್ಕೆ ನಾಗರ ಹಾವು ಸುತ್ತಿಕೊಂಡಿದ್ದನ್ನು ನೋಡಿ ವಿಸ್ಮಯಗೊಂಡನಂತೆ. ಇಲ್ಲಿ ದೇವಾಲಯ ನಿರ್ಮಿಸಿದರಂತೆ. ನಾಗರಹಾವು ಮಂಡಲಾಕಾರವಾಗಿ ಸುತ್ತಿದ್ದ ಈ ಊರು ನಾಗಮಂಡಲವಾಯಿತು. ಕಾಲಾನಂತರದಲ್ಲಿ ಇದು ನಾಗಮಂಗಲ ಎಂದು ಕರೆಸಿಕೊಂಡಿತೆನ್ನುತ್ತಾರೆ ಊರ ಹಿರಿಯರು. ಒಂದು ಕಾಲದಲ್ಲಿ ಇಲ್ಲಿ ನಾಲ್ಕು ವೇದಗಳನ್ನು ಓದುವ ಹಲವು ಋತ್ವಿಕರಿದ್ದರಂತೆ. ಹೀಗಾಗಿ ಈ ಊರಿಗೆ ಚತುರ್ವೇದ ಭಟ್ಟಾರಕ ರತ್ನ ಅಗ್ರಹಾರವೆಂಬ ಹೆಸರೂ ಇತ್ತು ಎಂದು ತಿಳಿದುಬರುತ್ತದೆ.
ಲೋಹಿತವಂಶದ ಪಾಳೆಯಗಾರರು ಇಲ್ಲಿ 17ನೆಯ ಶತಮಾನದವರೆಗೂ ಆಳುತ್ತಿದ್ದರು. ಅವರ ಕಾಲದಲ್ಲಿ ಇಲ್ಲಿ ಕೋಟೆ ಹಾಗೂ ದೇವಾಲಯದ ಜೀರ್ಣೋದ್ಧಾರ ಮಾಡಿದ ದಾಖಲೆ ದೊರಕುತ್ತದೆ.
ಇಲ್ಲಿರುವ ಯೋಗಾನರಸಿಂಹ ದೇವರ
ದೇವಾಲಯ ಅತ್ಯಂತ ಪ್ರಾಚೀನವಾದ್ದು. ವಿಶಾಲವಾದ ಪ್ರಾಕಾರವನ್ನು ಒಳಗೊಂಡ ದೇವಾಲಯದ
ಗರ್ಭಗೃಹದಲ್ಲಿ ಯೋಗಮುದ್ರೆಯಲ್ಲಿರುವ ನರಸಿಂಹದೇವರ ಸುಂದರ ವಿಗ್ರಹವಿದೆ.
ನರಸಿಂಹನಾಯಕನೆಂಬ
ದೇವಾಲಯದಲ್ಲಿ ಲಕ್ಷ್ಮೀ, ಆಂಜನೇಯ ಹಾಗೂ ನವಗ್ರಹಗಳ ಗುಡಿ ಇದೆ. ವೈಖಾನಸಾಗಮದ ರೀತ್ಯ ಇಲ್ಲಿ ನಿತ್ಯ ಪೂಜೆ, ಮಾಸೋತ್ಸವ, ಬ್ರಹ್ಮೋತ್ಸವ ನಡೆಯುತ್ತದೆ. ವಂಶಪಾರಂಪರ್ಯವಾಗಿ ಇಲ್ಲಿನ ಅರ್ಚಕರು ನರಸಿಂಹದೇವರ ಸೇವೆ ಮಾಡುತ್ತಾ ಬಂದಿದ್ದಾರೆ. ವೈಶಾಖ ಶುದ್ಧ ಪೌರ್ಣಿಮೆಯ ದಿನ ಇಲ್ಲಿ ಬ್ರಹ್ಮೋತ್ಸವ ಜರುಗುತ್ತದೆ. ಏಪ್ರಿಲ್ ತಿಂಗಳಿನಲ್ಲಿ ಗರುಡೋತ್ಸವ, ಗಜಾರೋಹಣೋತ್ಸವ ಇತ್ಯಾದಿಗಳು ನಡೆಯುತ್ತವೆ. ವಿಜಯದಶಮಿ, ಆಯುಧಪೂಜೆಯ ದಿನಗಳಂದು ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಕಲ್ಯಾಣೋತ್ಸವ, ಸುದರ್ಶನ ಹೋಮ ಇತ್ಯಾದಿ ಕೈಂಕರ್ಯಗಳೂ ದೇವಾಲಯದಲ್ಲಿ ನಡೆಯುತ್ತವೆ. | |||