|
ಮುಖಪುಟ
/ನಮ್ಮದೇವಾಲಯಗಳು
ನದಿ ನರಸಿಂಹಸ್ವಾಮಿ ದೇವಾಲಯ
ಕಣ್ವ
ಮಹರ್ಷಿಗಳು ಪ್ರತಿಷ್ಠಾಪಿಸಿದ ಈ ನರಸಿಂಹಸ್ವಾಮಿ ನದಿಯ ಪಕ್ಕದಲ್ಲಿರುವ ಕಾರಣ ನದಿ
ನರಸಿಂಹ ಎಂದೇ ಖ್ಯಾತನಾಗಿದ್ದಾನೆ. ಈಗ ಊರಿನ ಹೊರಗೆ ದೇವಾಲಯವಿದೆ. ಆದರೆ, ಹಿಂದೆ
ಊರೇ ಇಲ್ಲಿತ್ತು ಎನ್ನುತ್ತಾರೆ ಊರ ಹಿರಿಯರು.
ಒಮ್ಮೆ ಪ್ರವಾಹ ಬಂದು ಊರಿಗೆ ಊರೇ ಮುಳುಗಿಹೋಯಿತು. ಆಗ ಇಲ್ಲಿ ಉಳಿದಿದ್ದೆಲ್ಲಾ ಬರಿ
ಮರಳು. ಹೀಗಾಗಿ ಊರು ಮರಳೂರು ಎಂದು ಹೆಸರಾಯ್ತು. ಚಿಕ್ಕ ಮರಳೂರು, ದೊಡ್ಡ ಮರಳೂರು
ಎಂಬ ಭಾಗವೂ ಆಯ್ತು. ದೊಡ್ಡ ಮರಳೂರು ಅಪ್ರಮೇಯನ ದೇವಾಲಯದಿಂದ ಖ್ಯಾತವಾದರೆ,
ಚಿಕ್ಕಮರಳೂರು ನರಸಿಂಹಸ್ವಾಮಿಯಿಂದ ಖ್ಯಾತವಾಯ್ತು.
ಒಮ್ಮೆ ಕಣ್ವ ಮಹರ್ಷಿಗಳ ಕನಸಿನಲ್ಲಿ ಬಂದ ಲಕ್ಷ್ಮೀನಾರಾಯಣ, ಕಾವೇರಿಯ ತಟದಲ್ಲಿ
ತನ್ನನ್ನು ಪ್ರತಿಷ್ಠಾಪಿಸಿ ಪೂಜಿಸುವಂತೆ ಸೂಚಿಸಿದನಂತೆ. ಅಂದು ಕಣ್ವರು
ಪ್ರತಿಷ್ಠಾಪಿಸಿದ ಈ ನರಸಿಂಹ ಅಲ್ಲಿಯೇ ನೆಲೆಸಿ ತನ್ನ ಬಳಿಗೆ ಬರುವ ಭಕ್ತರನ್ನು
ಪೊರೆಯುತ್ತಿದ್ದಾನೆ ಎನ್ನುತ್ತಾರೆ ಅರ್ಚಕರು.
ಪಾಂಚರಾತ್ರಾಗಮ ರೀತ್ಯ ನಿತ್ಯ ಪೂಜೆ, ಅಭಿಷೇಕ ಜರುಗುತ್ತದೆ. ಪ್ರತಿ ಮಂಗಳವಾರ
ದೇವಾಲಯದಲ್ಲಿ ವಿಶೇಷ ಪೂಜೆ ಇರುತ್ತದೆ. ನದಿ
ನರಸಿಂಹನ ದೇವಾಲಯ ಸಾಧಾರಣ ಕಗ್ಗಲಿನಿಂದ ನಿರ್ಮಿಸಲಾಗಿದೆ. ದೇವಾಲಯದ ಬಿತ್ತಿಗಳಲ್ಲಿ
ಯಾವುದೇ ವಿಶೇಷ ಕೆತ್ತನೆಗಳಿಲ್ಲ. ಆದರೆ, ದೇವಾಲಯದ ಗರ್ಭಗೃಹದಲ್ಲಿರುವ ಮೂರ್ತಿ
ಮನಮೋಹಕವಾಗಿದೆ. ಲಕ್ಷ್ಮೀನರಸಿಂಹಸ್ವಾಮಿಯ
ದೇವಾಲಯದ ಸುತ್ತಲೂ ಪ್ರಹ್ಲಾದ, ಧ್ರುವ, ಹನುಮಂತ, ಹಯಗ್ರೀವ, ಪರಾಶರ ಮೊದಲಾದ
ಕೆತ್ತನೆಗಳಿವೆ. | |||