ಮುಖಪುಟ /ನಮ್ಮದೇವಾಲಯಗಳು  

ಮುರುಗಾಮಲ್ಲ ಮುಕ್ತೀಶ್ವರ

Murugamalla, Mukteswara temple, ಮುರುಗಮಲೆ ಮುಕ್ತೀಶ್ವರ ದೇವಾಲಯ,  kannadaratna.com, ourtemples.in, ಕನ್ನಡರತ್ನ.ಕಾಂ, ನಮ್ಮದೇವಾಲಯಗಳುಚಿಂತಾಮಣಿ ತಾಲೂಕಿಗೆ ಸೇರಿದ ಮುರುಗಾಮಲ್ಲ ಮುಕ್ತೀಶ್ವರ ಸ್ವಾಮಿ ನೆಲೆಸಿಹ ಪವಿತ್ರವಾದ ಪುಣ್ಯಕ್ಷೇತ್ರ. ಮುರುಗಮಲೆ ಎಂಬ ಈ ಪುಣ್ಯಕ್ಷೇತ್ರ ಜನರ ಬಾಯಲ್ಲಿ ಮುರುಗಮಲ್ಲ ಆಗಿದೆ.

ಈ ಬೆಟ್ಟದ ಮೇಲೆ ಸುಂದರವಾದ ಮುಕ್ತೇಶ್ವರ  ದೇವಾಲಯವಿದೆ.   ದೇವಾಲಯದ ಗೋಪುರದಲ್ಲಿ ಶಿವಪಾರ್ವತಿಯರು ವೃಷಭನ ಮೇಲೆ ಕುಳಿತಿರುವ ಸುಂದರ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಈ ಗೋಪುರದ ಕೆಳಗೆ ಸುಂದರ ಕೆತ್ತನೆಯ ಮಹಾದ್ವಾರವಿದೆ.

ಎಲ್ಲ ಶಿವದೇವಾಲಯಗಳಲ್ಲೂ ಒಂದೇ ಒಂದು ನಂದಿ ವಿಗ್ರಹ ಇದ್ದರೆ. ಇಲ್ಲಿ ಮಹಾದ್ವಾರದ ಬಳಿ ಎರಡು ನಂದಿ ವಿಗ್ರಹಗಳಿವೆ. ಇದರಲ್ಲಿ ಒಂದನ್ನು ನಂದಿಯೆಂದೂ ಮತ್ತೊಂದನ್ನು ಬೃಂಗಿ ಎಂದು ಕರೆಯುತ್ತಾರೆ.

Murugamalla, Mukteswara temple, ಮುರುಗಮಲೆ ಮುಕ್ತೀಶ್ವರ ದೇವಾಲಯ,  kannadaratna.com, ourtemples.in, ಕನ್ನಡರತ್ನ.ಕಾಂ, ನಮ್ಮದೇವಾಲಯಗಳುದೇವಾಲಯದ ಒಳಗೆ ಪ್ರವೇಶದ್ವಾರದ ಎದುರು ಲಿಂಗರೂಪಿಯಾದ ಮುಕ್ತೀಶ್ವರ ಇದ್ದರೆ ಎಡಬಲಗಳಲ್ಲಿ ಶಿವಪುತ್ರ ಗಣಪ ಹಾಗೂ ಪಾರ್ವತಿದೇವಿಯವರ ಗುಡಿಗಳಿವೆ. ಇಲ್ಲಿ ನಿತ್ಯ ಪೂಜೆ ನಡೆಯುತ್ತದೆ. ಶಿವರಾತ್ರಿ ಹಾಗೂ ಕಾರ್ತೀಕ ಮಾಸದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.ಏಳು ಹೆಡೆಯ ನಾಗಾಭರಣವನ್ನು ತೊಡಿಸಿದಾಗ ಮುಕ್ತೀಶ್ವರನ ಕಾಣುವುದೇ ಒಂದು ಸೊಗಸು.

ಇಲ್ಲಿಗೆ ಬರುವ ಭಕ್ತರಿಗೆ ಅನ್ನದಾನಕ್ಕೂ ವ್ಯವಸ್ಥೆ ಮಾಡಲಾಗಿದೆ. ದೇವಾಲಯದ ಎದುರು ಇರುವ ಆಲದ ಮರದ ಪಕ್ಕದಲ್ಲಿ ನವಗ್ರಹ ಮಂಟಪ ನಿರ್ಮಿಸಲಾಗಿದೆ. ಪಕ್ಕದಲ್ಲಿಯೇ ಶ್ರೀಮುಕ್ತಿ ಕುಟೀರ ನಿರ್ಮಿಸಲಾಗಿದೆ. ಇಲ್ಲಿಗೆ ಬರುವ ಭಕ್ತರು ಮುಕ್ತಿ ಕುಟೀರದಲ್ಲಿ ಕುಳಿತು ಓಂಕಾರ ಸ್ವರೂಪನಾದ ಶಿವನ ಧ್ಯಾನ ಮಾಡುತ್ತಾರೆ.

Murugamale Muktiswara swamy temple, ಮುರಗಮಲೆ ಮುಕ್ತೀಶ್ವರ ಸ್ವಾಮಿ ದೇವಾಲಯ,  kannadaratna.com, ourtemples.in, ಕನ್ನಡರತ್ನ.ಕಾಂ, ನಮ್ಮದೇವಾಲಯಗಳುಬೆಟ್ಟದ ಮೇಲೆ ಅತಿಥಿಗೃಹ ಹಾಗೂ ಸಿಬ್ಬಂದಿಗಳ ವಸತಿಗೃಹವೂ ಇದೆ. ದೇವಾಲಯದ ಎದುರು ಇರುವ ವಿಶಾಲ ಮೈದಾನದ ಅಂಚಿನಲ್ಲಿರುವ ಹಚ್ಚಹಸುರಿನ ಪ್ರದೇಶದಲ್ಲಿ ಇರುವ ಕೆಲವು ಮೆಟ್ಟಿಲು ಇಳಿದರೆ ಅಲ್ಲಿ ಒಂದು ಕುಂಡಿಕೆ ಇದೆ.

ಈ ಕುಂಡಿಕೆಯಲ್ಲಿ ಸದಾ ಜಲಧಾರೆ ಹರಿಯುತ್ತದೆ. ಇದು ಸಾಕ್ಷಾತ್ ಕಾಶಿಯ ಗಂಗೆ ಎಂಬುದು ಜನರ ನಂಬಿಕೆ. ಇದಕ್ಕೆ ಪುಷ್ಟಿ ನೀಡುವ ಒಂದು ಕಥೆ ಇದೆ.

ಐತಿಹ್ಯ : ಗುಂಡುಕಲ್ಲುಗಳ ಬೆಟ್ಟದಿಂದ ಕೂಡಿದ ಇಲ್ಲಿ ಹಿಂದೆ ದಟ್ಟವಾದ ಕಾನನವಿತ್ತು. ಈ ಕಾಡಿನಲ್ಲಿ ಭರದ್ವಾಜ ಮಹಾಮುನಿಗಳು ಅನೇಕ ವರ್ಷಗಳ ಕಾಲ ತಪವನ್ನಾಚರಿಸಿದ್ದರಂತೆ.

Murugamalla, Mukteswara temple, ಮುರುಗಮಲೆ ಮುಕ್ತೀಶ್ವರ ದೇವಾಲಯ,  kannadaratna.com, ourtemples.in, ಕನ್ನಡರತ್ನ.ಕಾಂ, ನಮ್ಮದೇವಾಲಯಗಳುಇಲ್ಲಿನ ಪ್ರಶಾಂತ ಪರಿಸರದಲ್ಲಿ ತಪವನ್ನಾಚರಿಸುತ್ತಿದ್ದ ಅವರು, ಪ್ರತಿನಿತ್ಯ ಗಂಗಾಸ್ನಾನ ಮಾಡಲು ಕಾಶಿಗೆ ಹೋಗುತ್ತಿದ್ದರಂತೆ. ಗೌತಮರ ಭಕ್ತಿಗೆ ಒಲಿದ ಗಂಗಾದೇವಿ ಗೌತಮರು ತಪವನ್ನಾಚರಿಸುತ್ತಿದ್ದ ಮುರುಗಮಲೆಯಲ್ಲೇ ತಾನು ಆವಿರ್ಭವಿಸುವುದಾಗಿ ಹೇಳಿ, ಗೋಮುಖದಿಂದ ಉದ್ಭವಿಸಿದಳಂತೆ. ಇಂದಿಗೂ ಮುರುಗಮಲೆಯಲ್ಲಿರುವ ಕುಂಡಿಕೆಯಲ್ಲಿ ಗಂಗೆ ನಿರಂತರವಾಗಿ ಹರಿಯುತ್ತಾಳೆ. ಭಕ್ತರು ಇಲ್ಲಿ ಗಂಗೆಯಲ್ಲಿ ಮಿಂದು ತಮ್ಮ ಪಾಪ ಕಳೆದುಕೊಳ್ಳುತ್ತಾರೆ.

ಬೆಟ್ಟದ ಮೇಲಿನ ಬಂಡೆಯೊಂದರಲ್ಲಿ 500 ವರ್ಷಗಳಷ್ಟು ಹಳೆಯ ಶಾಸನವೂ ಇದೆ.

ಮುಖಪುಟ /ನಮ್ಮದೇವಾಲಯಗಳು