|
ಮುನೇಶ್ವರ ಬ್ಲಾಕ್ ಕಾಶಿ ಈಶ್ವರಸ್ವಾಮಿ ದೇವಾಲಯ *ಟಿ.ಎಂ.ಸತೀಶ್
ಪುಟ್ಟದಾದ ದೇವಾಲಯದಲ್ಲಿ ಮೂರು ಗರ್ಭಗುಡಿಗಳಿವೆ. ಪ್ರವೇಶ ದ್ವಾರಕ್ಕೆ ನೇರವಾಗಿ ಇರುವ ಪ್ರಧಾನ ಗರ್ಭಗುಡಿಯಲ್ಲಿ ಸುಂದರವಾದ ಶಿವಲಿಂಗ ಹಾಗೂ ಅದರ ಎಡಭಾಗದಲ್ಲಿ ತಾಯಿ ಪಾರ್ವತಿಯ ಸುಂದರವಾದ ಕೃಷ್ಣಶಿಲಾ ಮೂರ್ತಿಯಿದೆ. ಶಿವನ ಎದುರು ಸುಂದರವಾದ ನಂದಿಯ ವಿಗ್ರಹ ಇದೆ.
ಪ್ರತಿ ತಿಂಗಳು ಸಂಕಷ್ಟ ಹರ ಚತುರ್ಥಿಯಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಪ್ರತಿ ಪೂರ್ಣಿಮಿಯ ದಿನ ಇಲ್ಲಿ ಶ್ರೀಸತ್ಯನಾರಾಯಣ ಪೂಜೆ ವಿಜೃಂಭಣೆಯಿಂದ ಜರುಗುತ್ತದೆ. ಭಾದ್ರಪದ ಶುಕ್ಲ ಚೌತಿಯಂದು ಗಣಪನಿಗೆ ವಿಶೇಷ ಪೂಜೆ ನಡೆದರೆ, ಶಿವರಾತ್ರಿ ಹಾಗೂ ಕಾರ್ತೀಕ ಮಾಸದಲ್ಲಿ ಇಲ್ಲಿ ವಿಜೃಂಭಣೆಯಿಂದ ಪೂಜೆ ಪುನಸ್ಕಾರಗಳು ಜರುಗುತ್ತವೆ. ದೇವಾಲಯದ ಈಶಾನ್ಯ ಮೂಲೆಯಲ್ಲಿ ನವಗ್ರಹ ಪ್ರತಿಷ್ಠಾಪಿಸಲಾಗಿದೆ. | |||