ಮುಖಪುಟ /ನಮ್ಮ ದೇವಾಲಯಗಳು  

ಮೂಗೂರು ದೇಶೇಶ್ವರ ದೇವಾಲಯ

*ಟಿ.ಎಂ. ಸತೀಶ್

ತಿರುಮಕೂಡಲು ನರಸೀಪುರದಿಂದ 10 ಕಿಮೀ ದೂರದಲ್ಲಿರುವ ಪಟ್ಟಣವೇ ಮೂಗೂರು.  ಇಲ್ಲಿ ಆರು ದೇವಾಲಯಗಳಿವೆ.  ಇವುಗಳ ಪೈಕಿ ದೇಶೇಶ್ವರ ದೇವಾಲಯ ಪ್ರಮುಖವಾದ್ದು.

ದೇಶೇಶ್ವರ ದೇವಾಲಯವನ್ನು ಚೋಳರ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಇದರ ಉತ್ತರಕ್ಕೆ ತ್ರಿಪುರಾಂಬ, ತ್ರಿಪುರಸುಂದರಿ ದೇವಾಲಯವಿದೆ. ಹೊಯ್ಸಳರ ಕಾಲದಲ್ಲಿ ಈ ದೇವಾಲಯ ಪುನರ್ ನಿರ್ಮಾಣವಾಗಿದೆ ಅಥವಾ ಕೆಲವು ಭಾಗಗಳನ್ನು ಕಟ್ಟಲಾಗಿದೆ ಎಂದು ಇತಿಹಾಸ ತಜ್ಞರು ಹೇಳುತ್ತಾರೆ.

ಮಿಕ್ಕೆಲ್ಲ  ದೇವಾಲಯಗಳ ರೀತಿಯಲ್ಲೇ ಇಲ್ಲೂ ಸಹ ನವರಂಗ, ಮುಖಮಂಟಪ, ಮಹಾದ್ವಾರವಿದೆ. ವಿಜಯನಗರ ಕಾಲದಲ್ಲೂ ಇಲ್ಲಿ ಕೆಲವು ನಿರ್ಮಾಣಗಳಾಗಿವೆ.

ಮೂಗೂರಿನಲ್ಲಿರುವ ನಾರಾಯಣಸ್ವಾಮಿ ದೇವಾಲಯ ಹೊಯ್ಸಳರ ಕಾಲಕ್ಕೆ ಸೇರಿದ್ದಾಗಿದೆ.   ವಿಶಾಲವಾದ ಆವರಣದಲ್ಲಿರುವ  ದೇವಾಲಯದಲ್ಲಿ  ಗರ್ಭಗೃಹ, ಸುಕನಾಸಿ, ನವರಂಗ ಮತ್ತು ಮುಖಮಂಟಪವಿದೆ.

ಮೂಗೂರಿನ ತಿಬ್ಬಾದೇವಿ ದೇವಾಲಯದಲ್ಲಿ ಪ್ರತಿವರ್ಷ ಡಿಸೆಂಬರ್ ಅಥವಾ ಜನವರಿಯಲ್ಲಿ ಉತ್ಸವ ನಡೆಯುತ್ತದೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯ