|
ಮುಖಪುಟ
/ನಮ್ಮದೇವಾಲಯಗಳು
ವಕ್ಕಲೇರಿಯ
ಮಾರ್ಕಂಡೇಶ್ವರಸ್ವಾಮಿ
ವಕ್ಕಲೇರಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರ ಆರಾಧ್ಯ ದೈವವಾಗಿ ಹಾಗೂ ಪದ್ಮಶಾಲಿ ಜನಾಂಗದ ಕುಲದೈವವಾದ ಮಾರ್ಕಂಡೇಶ್ವರಸ್ವಾಮಿ ಅವತಾರದ ಬಗ್ಗೆ ಪುರಾಣದಲ್ಲಿ ಒಂದು ಕಥೆಯಿದೆ. ಐತಿಹ್ಯ: ಬ್ರಹ್ಮ ಮಾನಸ ಪುತ್ರನಾದ ಭೃಗು ಮಹರ್ಷಿಯ ವಂಶಸ್ಥನಾದ ಮೃಕಂಡು ಮಹಾಮುನಿ ಹಾಗೂ ಮರುಧ್ವತಿ ದೇವಿ ದಂಪತಿಗೆ ಬಹಳ ಕಾಲ ಮಕ್ಕಳಿಲ್ಲದಿದ್ದರಿಂದ ಮೃಕಂಡು ಪುತ್ರಾರ್ಥಿಯಾಗಿ ಪರಮೇಶ್ವರನನ್ನು ಕುರಿತು ತಪಸ್ಸು ಮಾಡಿದ. ತಪಸ್ಸಿಗೆ ಮೆಚ್ಚಿದ ಈಶ್ವರ ಪ್ರತ್ಯಕ್ಷನಾಗಿ ಜ್ಞಾನಿಯೂ ದೈವಭಕ್ತನೂ ಆದ ಅಲ್ಪಾಯುಷಿ ಮಗ ಬೇಕೋ ಅಥವಾ ದೀರ್ಘಾಯುಷಿಯಾದ ಲೋಕಕಂಟಕನಾದ ಮಗ ಬೇಕೋ ಎಂದು ಕೇಳಿದಾಗ, ಮೃಕಂಡು ಅಲ್ಪಾಯುಷಿಯಾದರೂ ಜ್ಞಾನಿಯಾದ ಮಗನೇ ಬೇಕೆನ್ನುತ್ತಾನೆ. ಹೀಗೆ ಅಲ್ಪಾಯುಷಿಯಾಗಿ ಜನಿಸಿದವನೇ ಮಾರ್ಕಂಡೇಯ.
ಯಮನನ್ನು ಗೆದ್ದು ಚಿರಂಜೀವಿಯಾದ ಮಾರ್ಕಂಡೇಯನನ್ನು ರಕ್ಷಿಸಲು ಭುವಿಯಲ್ಲಿ ಅವತರಿಸಿದ ಶಿವ ಇದೇ ಬೆಟ್ಟದಲ್ಲಿ ಮಾರ್ಕಂಡೇಶ್ವನಾಗಿ ಬೆಟ್ಟವೇರಿ ಬರುವ ಭಕ್ತರನ್ನು ಸಲಹುತ್ತಿದ್ದಾನೆ.
ಈ ದೇವಾಲಯವು ವಿಶಾಲವಾದ ಏಕಶಿಲಾ ಬೆಟ್ಟದ ಮೇಲೆ ನಿರ್ಮಿತವಾಗಿದ್ದು, ಈ ಬೃಹತ್ ವಿಶಾಲವಾದ ಬಂಡೆಯಲ್ಲಿ ಒಂದು ಅಡಿ ಅಗಲದ ಸುಮಾರು ಉದ್ದವಾದ ಕಪ್ಪಾದ ಪಟ್ಟಿಯು ಬಂಡೆಯ ದಕ್ಷಿಣ ಪಾರ್ಶ್ವದಿಂದ ಗರ್ಭಾಂಕಣದವರೆಗೆ ಬಂಡೆಯಲ್ಲಿ ಮೂಡಿ ಬಂದಿದೆ. ಇದರ ಬಗ್ಗೆ ಯಮಧರ್ಮರಾಯನು ಮಾರ್ಕಂಡೇಯನಿಗೆ ಯಮಪಾಶವನ್ನು ಹಾಕಿ ಎಳೆದ ಕುರುಹುಗಳು ಬೆಟ್ಟದ ಮೇಲಿರುವ ಬಾವಿಯಲ್ಲಿ ಇಂದಿಗೂ ಕಾಣಿಸುತ್ತದೆ ಎನ್ನಲಾಗುತ್ತದೆ. ಯಮ ಬಂದು ಎಳೆದಾಗ ಮಾರ್ಕಂಡೇಯ ಶಿವಲಿಂಗವನ್ನು ಕೈಗಳಿಂದ ತಬ್ಬಿ ಹಿಡಿದಾಗ ಮೂಡಿತೆನ್ನಲಾದ ಉಗುರಿನ ಗುರುತುಗಳು ಶಿವಲಿಂಗದ ಮೇಲಿವೆ.
1988ರಲ್ಲಿ ದೇವಾಲಯಕ್ಕೆ
ಗೋಪುರ ನಿರ್ಮಾಣ ಕಾರ್ಯ ಆರಂಭವಾಗಿ, 1990ರಲ್ಲಿ ಅನಾವರಣಗೊಂಡಿತು. ಈ ಸಮಾರಂಭದಲ್ಲಿ
ಭಾರತದ ಮಾಜಿ ರಾಷ್ಟ್ರಪತಿಗಳಾದ ನೀಲಂ ಸಂಜಿವರೆಡ್ಡಿ ಮತ್ತಿತರರು ಪಾಲ್ಗೊಂಡಿದರು.
1987ರಲ್ಲಿ
ಕೆಲವು ಕಿಡಿಗೇಡಿಗಳು ಇಲ್ಲಿದ್ದ ಪುರಾತನ ಸುಬ್ರಮಣ್ಯ,
ಪಾರ್ವತಿ,
ಗಣಪತಿ ಹಾಗೂ ಶ್ರೀವಳ್ಳಿ ವಿಗ್ರಹಗಳನ್ನು
ಭಗ್ನಗೊಳಿಸಿದಾಗ,
ವೇಮಗಲ್ ಶಾಸಕರಾಗಿದ್ದ ಶ್ರೀ ಬೈರೇಗೌಡರು ಹೊಸ
ವಿಗ್ರಹಗಳನ್ನು
ಕೆತ್ತನೆ ಮಾಡಿಸಿ,
1990ರಲ್ಲಿ
ಪುನರ್ ಪ್ರತಿಷ್ಠೆ ಮಾಡಿಸಿದರು.
ಈ ದೇವಸ್ಥಾನಕ್ಕೆ ಮಹಾದ್ವಾರ,
ಬಹೃತ್ ವಿಶಾಲವಾದ ಪ್ರಾಕಾರ,
ಬಸವಮಂಟಪ, ಕಲ್ಯಾಣ ಪ,ಮುಖ
ಮಂಟಪ, ಸುಖನಾಸಿ, ನವರಂಗ,
ಯಾಗ ಮಂಟಪ, ಗರ್ಭಾಂಕಣವಿದೆ. ವಿಶಾಲ
ಪ್ರಾಕಾರದಲ್ಲಿ ಮಾರ್ಕಂಡೇಶ್ವರ ಸ್ವಾಮಿಯವರ ಮೂಲಸ್ಥಾನದ ಸುತ್ತಲೂ ವೀರಭದ್ರಸ್ವಾಮಿ,
ಸಪ್ತಮಾತೃಕೆಯರು, ವಿಘ್ನೇಶ್ವರಸ್ವಾಮಿ,
ಸುಬ್ರಹ್ಮಣ್ಯೇಸ್ವಾಮಿ, ಪ್ರಸನ್ನ ಪಾರ್ವತಾದೇವಿ
ಅಮ್ಮನವರು, ಚಂಡಿಕೇಶ್ವರಸ್ವಾಮಿ,
ವೆಂಕಟರಮಣ ಸ್ವಾಮಿ, ಕಾಲಭೈರವಸ್ವಾಮಿ ದೇವರುಗಳ
ನವರಂಗದಲ್ಲಿರುವ ದ್ವಾರ ಪಾಲಕರ ವಿಗ್ರಹಗಳು ಗಮನಸೆಳೆಯುವಂತಿವೆ. ಈ ದೇವಾಲಯದ ಕಲ್ಯಾಣ ಮಂಟಪ ಹಾಗೂ ನವರಂಗದಲ್ಲಿರುವ ಕಂಬಗಳು ಅತಿ ಸುಂದರವಾದ ಸೂಕ್ಷ್ಮ ಕೆತ್ತನೆಯಿಂದ ಮನಸೂರೆಗೊಳ್ಳುತ್ತವೆ. ಮಹಾ ಶಿವರಾತ್ರಿ ದಿನ ಎರಡು ದಿನ ಬೆಟ್ಟದ ಮೇಲೆ ಜಾತ್ರೆ ನಡೆಯುತ್ತದೆ. ಜಾತ್ರೆಯ ಸಂದರ್ಭದಲ್ಲಿ ಮಾರ್ಕಂಡೇಶ್ವರ ಸ್ವಾಮಿಯವರ ಬ್ರಹರಥೋತ್ಸವ ಹಾಗೂ ಪದ್ಮಶಾಲಿ ಸಮಾಜರವರಿಂದ ಧ್ವಜಾರೋಹಣ, ಪರಮೇಶ್ವರನಿಗೆ ನಡೆಯುವ ಹತ್ತು ತಲೆ ಇಪ್ಪತ್ತು ಕೈಗಳ ರಾವಣ ವಾಹನೋತ್ಸವ ವಕ್ಕಲೇರಿ ಗ್ರಾಮದಲ್ಲಿ ನೆರವೇರುತ್ತದೆ. ಇದನ್ನು ನೋಡಲು ಎರಡು ಕಣ್ಣು ಸಾಲದು. ಎಂದರೆ ಅತಿಶಯೋಕ್ತಿಯಲ್ಲ. ಆಷಾಡ ಶುದ್ಧ ತದಿಗೆಯಂದು ಬೆಟ್ಟದ ಮೇಲೆ ಶ್ರೀ ಮಾರ್ಕಂಡೇಯಸ್ವಾಮಿಯ ಜಯಂತಿ ನಡೆಯುತ್ತದೆ. ಈ ದೇವಾಲಯದ ಬೆಟ್ಟದ ಸುತ್ತಲೂ 1730 ಎಕರೆ ಜಮೀನು ಅರಣ್ಯ ಇಲಾಖೆಯ ಸ್ವಾಧೀನದಲ್ಲಿದ್ದು, ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿದೆ. ಈಗ ಶ್ರೀ ಮಾರ್ಕಂಡೇಶ್ವರ ದೇವಾಲಯ ಅಭಿವೃದ್ದಿ ದತ್ತಿ (ರಿ) ರವರು ದೇವಾಲಯದ ಅಭಿವೃದ್ದಿ ಕಾರ್ಯಗಳು ಹಾಗೂ ನಿತ್ಯ ಪೂಜೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಬಿಳಿಬೆಟ್ಟ ಶ್ರೀ ಮಾರ್ಕಂಡೇಯ ನದಿಯ ಉಗಮ ಸ್ಥಾನವಾಗಿದ್ದು, ಬಂಗಾರಪೇಟೆ ತಾಲ್ಲೂಕು ಬೂದಿಕೋಟ ಬಳಿ ಶ್ರೀ ಮಾರ್ಕಂಡೇಯ ಜಲಾಶಯವೇ ಇದೆ. ಸೋಮವಾರ ಬೆಳಗ್ಗೆ 10.೦೦ ರಿಂದ ಸಂಜೆ 4.30ರವರೆಗೆ ದೇವಾಲಯ ತೆರೆದಿರುತ್ತದೆ. ಮಂಗಳವಾರದಿಂದ ಭಾನುವಾರದವರೆಗೆ ಬೆಟ್ಟಕ್ಕೆ ಬರುವ ಭಕ್ತರು, ಟ್ರಸ್ಟ್ ಖಜಾಂಚಿಯವರಾದ ಸಿ.ಎಂ.ಮಾರ್ಕಂಡಪ್ಪ ಅವರಿಗೆ 9449619980 ಅಥವಾ ಅರ್ಚಕರಾದ ಸಿ. ರವಿಶಂಕರ್ ಅವರನ್ನು 9448641948, 08152-237575 ದೂರವಾಣಿ ಮೂಲಕ ಸಂಪರ್ಕಿಸಿ ಹೋದರೆ, ದೇವರ ದರ್ಶನ ಮಾಡಬಹುದು. ಮಾರ್ಗ : ಬೆಂಗಳೂರು ನಗರದಿಂದ ಮಾಲೂರಿನ ಮುಖಾಂತರ ಹೋದರೆ 65 ಕಿಲೋಮೀಟರ್ (ಮಾಲೂರಿನ ಬಾಲಾಜಿ ಥಿಯೇಟರ್ ಸರ್ಕಲ್ ಬಳಿ ಎಡಕ್ಕೆ ತಿರುಗಿ ಹೋಗಬೇಕು), ಕೋಲಾರದ ಮುಖಾಂತರ ಹೋದರೆ 75 ಕಿಲೋಮೀಟರ್ (ಕೋಲಾರಕ್ಕೆ 2 ಕಿ.ಮೀ. ಮೊದಲು ಕೃಷಿ ಉತ್ಪನ್ನ ಮಾರುಕಟ್ಟೆ ಅಲ್ಲಿ ಬಲಕ್ಕೆ ತಿರುಗಿ ಹೋಗಬೇಕು) ಕೋಲಾರ ಹಾಗೂ ಮಾಲೂರು ಎರಡು ಕಡೆಯಿಂದ 13 ಕಿ.ಲೋ.ಮೀಟರ್ ಮಧ್ಯದಲ್ಲಿರುವ ವಕ್ಕಲೇರಿ ಗ್ರ್ರಾಮದಿಂದ 3 ಕಿ.ಮೀ. ದೂರದಲ್ಲಿ ದೇವಾಲಯವಿದೆ. ಬಸ್ಸಿನಲ್ಲಿ ಬರುವವರು ಮಾಲೂರು ಇಲ್ಲವೆ ಕೋಲಾರ ದಿಂದ ವಕ್ಕಲೇರಿ ಗ್ರಾಮಕ್ಕೆ ಹೋಗುವ ಬಸ್ಸಿನಲ್ಲಿ ಬಂದು ವಕ್ಕಲೇರಿಯಲ್ಲಿ ಇಳಿದು ಆಟೋ ಹಿಡಿದು ಬೆಟ್ಟದ ತಪ್ಪಲಿಗೆ ಬರಬಹುದು. ಶಕ್ತಿ ಇರುವವರು ಮೆಟ್ಟಿಲು ಹತ್ತಿ ಬರಬಹುದು. ಸ್ವಂತ ವಾಹನ ಇರುವವರು ರಸ್ತೆ ಮಾರ್ಗದಲ್ಲಿ ಬೆಟ್ಟದ ಮೇಲೆ ಹೋಗಲು ಅವಕಾಶವಿದೆ. ಗ್ರಾಮದ ಹೊಟೆಲ್ ದೂರವಾಣಿ -೯೯೦೧೮೮೩೨೫೨, ಮನೆ:೯೩೪೨೨೬೮೧೨೫-೦೮೧೫೨-೨೩೭೫೭೦). ಹೆಚ್ಚಿನ ಮಾಹಿತಿಗೆ ದೇವಾಲಯದ ಕನ್ವೀನರ್ ಆದ ವಿ. ವೇಣುಗೋಪಾಲಗೌಡ ಅವರನ್ನು 94491 87049, 08152-237621 ಮೂಲಕ ಸಂಪರ್ಕಿಸಬಹುದು.
ಹತ್ತಿರದಲ್ಲಿ ನೋಡಬಹುದಾದ ಸ್ಥಳಗಳು
ಚಿತ್ರ ಹಾಗೂ ಲೇಖನ :
ಎಸ್.ಗೋವಿಂದರಾಜ್, ಪದ್ಮಶಾಲಿ,ಸಮಾಜ
ಸೇವಕರು, |
![]() ![]() |
||