|
ಮಲ್ಲೇಶ್ವರದ ಲಕ್ಷ್ಮೀನರಸಿಂಹ *ಟಿ.ಎಂ.ಸತೀಶ್
16ನೇ ಶತಮಾನದಲ್ಲಿ ಇಲ್ಲಿ ಗರ್ಭಗುಡಿ ಮಾತ್ರವಿದ್ದು ಪುಟ್ಟ ಆಲಯವಿತ್ತು. ಮಲ್ಲಪುರದ ಜನ ಇಲ್ಲಿ ಬಂದು ದೇವರ ಪೂಜೆ ಸಲ್ಲಿಸುತ್ತಿದ್ದರು. ಕಾಲಾನಂತರದಲ್ಲಿ ಈ ದೇವಾಲಯ ಜೀರ್ಣೋದ್ಧಾರ ಮಾಡಿ, ವಿಮಾನ ಗೋಪುರ, ದೊಡ್ಡ ಪ್ರಾಕಾರ ನಿರ್ಮಿಸಲಾಗಿದೆ. ಮೇಲ್ನೋಟಕ್ಕೆ ಈ ದೇಗುಲ ಆಂಧ್ರಪ್ರದೇಶದ ಅಹೋಬಲ ನರಸಿಂಹ ಸ್ವಾಮಿ ದೇವಾಲಯದ ಮಾದರಿಯಲ್ಲೇ ಇದೆ. ದೇವಾಲಯದಲ್ಲಿ ರಾಮಾನುಜಾಚಾರ್ಯರು ಮತ್ತು ವೇದಾಂತ ದೇಶಿಕರರ ವಿಗ್ರಹಗಳೂ ಇವೆ. ಪ್ರತಿ ವರ್ಷ ಮಾಘ ಬಹುಳ ಸಪ್ತಮಿಯಂದು ಇಲ್ಲಿ ಬೆಳ್ಳಿರಥದಲ್ಲಿ ಸ್ವಾಮಿಯ ರಥೋತ್ಸವ ಜರುಗುತ್ತದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ದೊಡ್ಡ ಬೆಳ್ಳಿರಥ ನಿರ್ಮಾಣ ಮಾಡಿಸಿದ್ದು ಈ ದೇವಾಲಯ ಹಿರಿಮೆ ಎನ್ನುತ್ತಾರೆ ಪ್ರದಾನ ಅರ್ಚಕರಾದ ಬಿ.ಆರ್. ಪಟ್ಟಾಭಿರಾಮ ಭಟ್ಟರು.
ನರಸಿಂಹ ಜಯಂತಿ, ವರಮಹಾಲಕ್ಷ್ಮೀ ಹಬ್ಬದ ದಿನಗಳಂದು ಹಾಗೂ ಶ್ರಾವಣ ಶನಿವಾರಗಳಂದು ಇಲ್ಲಿ ವಿಶೇಷ ಪೂಜೆ ಜರುಗುತ್ತದೆ. ಆಷಾಢ ಮಾಸದಲ್ಲಿ 5 ದಿನಗಳ ಕಾಲ ಇಲ್ಲಿ ಉಯ್ಯಾಲೆ ಉತ್ಸವ ನಡೆಯುವುದು ವಿಶೇಷ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in |
![]() |
||