|
ಮುಖಪುಟ
/ನಮ್ಮ
ದೇವಾಲಯಗಳು ಮಾಲೇಕಲ್ ತಿರುಪತಿ
ಸುರುಗುರು ವಸಿಷ್ಠ ಮಹರ್ಷಿಗಳು ಹಿರೇಕಲ್ ಬೆಟ್ಟ ಶ್ರೇಣಿಯ ಪ್ರಶಾಂತವಾದ ಈ ಪ್ರದೇಶದಲ್ಲಿ ನಾರಾಯಣ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಿ, ನೂರಾರು ವರ್ಷಗಳ ಕಾಲ ತಪವನ್ನಾಚರಿಸಿದರಂತೆ. ವಸಿಷ್ಠರಿಗೆ ಆಷಾಢ ಶುದ್ಧ ದ್ವಾದಶಿಯ ದಿನ ವಿಷ್ಣು ಇಲ್ಲಿ ದರ್ಶನವಿತ್ತನಂತೆ. ವಸಿಷ್ಠರು ತಪಸ್ಸಿದ್ಧಿ ಪಡೆದು ಹಿಂತಿರುಗಿದ ಬಳಿಕ, ಇಲ್ಲಿ ಅವರು ಪ್ರತಿಷ್ಠಾಪಿಸಿದ್ದ ವಿಗ್ರಹ ಪೂಜೆ, ಪುನಸ್ಕಾರವಿಲ್ಲದೆ ಹಲವು ವರ್ಷಗಳ ಕಾಲ ಇದ್ದು, ಕೊನೆಗೆ ಭೂಗರ್ಭ ಸೇರಿತಂತೆ.
ಸ್ವಾಮಿಯ ಆಣತಿಯಂತೆ ತಿಮ್ಮಪ್ಪನಾಯಕ ಕೈಯಲ್ಲಿ ತುಳಸಿ ಮಾಲೆ ಹಿಡಿದು ಸ್ವಾಮಿ ಕನಸಿನಲ್ಲಿ ಹೇಳಿದ ಮಾರ್ಗದಲ್ಲಿ ತೆರಳಿದಾಗ ಆತನ ಕೈಯಲ್ಲಿದ್ದ ತುಳಸಿ ಮಾಲೆ ಜಾರಿ ಕಲ್ಲಿನ ಮೇಲೆ ಬಿತ್ತು. ಆ ಸ್ಥಳದಲ್ಲಿ ವರಹ ಸ್ವಾಮಿಯ ವಿಗ್ರಹ ದೊರಕಿತಂತೆ. ಹೀಗಾಗೇ ಮಾಲೆ ಕಲ್ಲಿನ ಮೇಲೆ ಬಿದ್ದ ಈ ಕ್ಷೇತ್ರ ಮಾಲೇಕಲ್ ಎಂದು ಕರೆಸಿಕೊಂಡಿತು. ಇಲ್ಲಿ ಶ್ರೀನಿವಾಸದೇವರು ಇರುವ ಕಾರಣ ಇದು ಮತ್ತೊಂದು ತಿರುಪತಿಯಾಗಿ ಮಾಲೇಕಲ್ ತಿರುಪತಿಯಾಯ್ತು ಎನ್ನುತ್ತಾರೆ ಸ್ಥಳೀಯ ಹಿರಿಯರು.
ಬೆಂಗಳೂರು – ಹೊನ್ನಾವರ ಹೆದ್ದಾರಿಯಲ್ಲಿ ಅರಸೀಕೆರೆ ಪಟ್ಟಣದಿಂದ ಎರಡು ಕಿಲೋ ಮೀಟರ್ ದೂರದಲ್ಲಿರುವ ಮಾಲೇಕಲ್ ಗೆ ಹೋಗಲು ನೇರ ಬಸ್ ಸೌಕರ್ಯವಿದೆ. | |||