|
ಲಕ್ಷ್ಮೇಶ್ವರದ ಮಹಂತರ ಮಠ
ಊರಿನ ಉತ್ತರಭಾಗದಲ್ಲಿರುವ ಈ ಮಠ ತನ್ನ ಶಿಲ್ಪ ಕಲಾವೈಭವದಿಂದ ಜನಾಕರ್ಷಣೆಯ ಕೇಂದ್ರಬಿಂದುವಾಗಿದೆ. ಮಠದ ಮುಂಭಾಗದಲ್ಲಿ ಶಿಲಾಸ್ಪಂಭವಿದೆ. ಹಿಂದೆ ಇಲ್ಲಿ ಶಿವಶರಣರ ಚಿಂತನಗೋಷ್ಠಿ, ಧರ್ಮೋಪದೇಶ, ದಾಸೋಹ, ಪೂಜಾವಿಧಿಗಳು ನಡೆಯುತ್ತಿದ್ದವು ಎಂದು ತಿಳಿದುಬರುತ್ತದೆ. ಮಠದ ಒಳಗೆ ವಿಶಾಲವಾದ ಪ್ರಾಂಗಣ, ಸಭಾಮಂಟಪ ಹಾಗೂ ದೇವಾಲಯವಿದೆ. ಭುವನೇಶ್ವರಿಯಲ್ಲಿ ಅರಳಿದ ಕಮಲದಂಥ ಸುಂದರ ಶಿಲ್ಪವಿದೆ. ಜೊತೆಗೆ ನಾಟ್ಯರಾಣಿಯ ಉಬ್ಬುಶಿಲ್ಪವೂ ಇದೆ. ಧ್ಯಾನಾರೂಢ ಶಿವನ ಮೂರ್ತಿಯ ಸುತ್ತಲೂ ಪ್ರಭಾವಳಿಯೋಪಾದಿಯಲ್ಲಿ ನೃತ್ಯಭಂಗಿಗಳಲ್ಲಿರುವ ಸ್ತ್ರೀ ವಿಗ್ರಹಗಳನ್ನು ಕಡೆಯಲಾಗಿದೆ. ಇಲ್ಲಿರುವ ಶಿಲಾಶಾಸನಗಳಲ್ಲಿ ನೃತ್ಯಮೇಳ, ಸಂಗೀತಗೋಷ್ಠಿ, ಶಿವನಮೂರ್ತಿಗಳಿವೆ. ಮಠದ ಹಿಂಭಾಗದಲ್ಲಿ ದೊಡ್ಡ ಕೆರೆ ಇದೆ. ಊರಿನಲ್ಲಿ ನೋಡಬೇಕಾದ ಸ್ಥಳಗಳು
ಧಾರವಾಡದಿಂದ ಲಕ್ಷ್ಮೇಶ್ವರಕ್ಕೆ ಕೇವಲ 72 ಕಿ.ಮೀ.
ಬಸ್ ಸೌಕರ್ಯ ಉತ್ತಮವಾಗಿದೆ. | |||