|
ಮುಖಪುಟ
/ನಮ್ಮ
ದೇವಾಲಯಗಳು ಮಹಾಲಕ್ಷ್ಮೀ ಲೇಔಟ್ ಶ್ರೀನಿವಾಸ ದೇವಾಲಯ *ಟಿ.ಎಂ.ಸತೀಶ್
ಇಲ್ಲಿನ ನಿವಾಸಿಗಳು ಸರ್ಕಾರದ ನೆರವಿನಿಂದ ನಿರ್ಮಿಸಿದ ಶ್ರೀನಿವಾಸದೇವರ ದೇವಾಲಯದ ಪ್ರಾರಂಭೋತ್ಸವ 1976ರ ಜೂನ್ 7ರಂದು ಪೇಜಾವರ ಮಠಾಧೀಶರಾದ ಶ್ರೀವಿಶ್ವೇಶತೀರ್ಥ ಶ್ರೀಪಾದಂಗಳವರ ಅಮೃತಹಸ್ತದಿಂದ ನೆರವೇರಿತು. ಅದೇ ಸಂದರ್ಭದಲ್ಲಿ ವರಹಸ್ವಾಮಿಯ ಪ್ರತಿಷ್ಠಾಪನೆಯೂ ದೇವಾಲಯದಲ್ಲಿ ನೆರವೇರಿತು.
ಭವ್ಯವಾಗಿರುವ ಈ ದೇವಾಲಯ ವಾಸ್ತು ವಿನ್ಯಾಸದಲ್ಲೂ ಮೋಹಕವಾಗಿದೆ. ದೇವಾಲಯದ ಪ್ರವೇಶ
ದ್ವಾರದ ಬಳಿ ಜಯವಿಜಯರ ಸಹಿತನಾದ ಶೇಷ ಶಯನ ನಾರಾಯಣನ ಗಾರೆಯ ಮೂರ್ತಿಯಿದೆ. ಮತ್ತೊಂದು
ಭಿತ್ತಿಯಲ್ಲಿ ಎರಡು ಆನೆಗಳ ನಡುವೆ ಕಮಲದಲ್ಲಿ ಕುಳಿತಿರುವ ಧನದೇವತೆ ಮಹಾಲಕ್ಷ್ಮೀಯ
ಮೂರ್ತಿಯೂ ಇದೆ. ಮರಿ ತಿರುಪತಿ ಎಂದೇ ಖ್ಯಾತವಾದ ಈ ಶ್ರೀನಿವಾಸದೇವರ ದೇವಾಲಯದಲ್ಲಿ ತಿರುಪತಿ ತಿಮ್ಮಪ್ಪನ
ಸನ್ನಿಧಿಯಲ್ಲಿ ನಡೆಯುವಂತೆಯೇ
ದೇವಾಲಯದ ಆವರಣದಲ್ಲಿ ದೊಡ್ಡ ಸಭಾಂಗಣವಿದ್ದು, ವಿಶೇಷ ದಿನಗಳಲ್ಲಿ ಇಲ್ಲಿ ಭಜನೆ, ಹರಿಕಥೆ, ಸಂಗೀತೋತ್ಸವಗಳು ನಡೆಯುತ್ತವೆ. ದೇಗುಲದಲ್ಲಿ ಪದ್ಮಾವತಿ, ಲಕ್ಷ್ಮೀ ಅಮ್ಮನವರ ದೇವಾಲಯಗಳೂ ಇವೆ. ಸುಂದರವಾದ ಗರುಡಗಂಬವನ್ನೂ ಸ್ಥಾಪಿಸಲಾಗಿದೆ. ಹಬ್ಬ ಹರಿದಿನ, ವೈಕುಂಠ ಏಕಾದಶಿಯಂದು ಹಾಗೂ ಶ್ರಾವಣ ಶನಿವಾರಗಳಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ.
ದೇವಾಲಯದಲ್ಲಿ 150 ಅಡಿಗಳ ಚರಣಗೋಪುರ ನಿರ್ಮಿಸಲಾಗಿದೆ. ದೇವಾಲಯ ವಿನೂತನ ಶೈಲಿಯಲ್ಲಿದ್ದು, ಮನಮೋಹಕವಾಗಿದೆ. ಶ್ರೀ ಶ್ರೀನಿವಾಸ ದೇವಸ್ಥಾನದ ಸೇವಾ ಸಮಿತಿ ಟ್ರಸ್ಟ್ ದೇವಾಲಯದ ನಿರ್ವಹಣೆಯ ಜೊತೆ, ಸಮಾಜ ಸೇವೆಯಲ್ಲೂ ತನ್ನನ್ನು ತೊಡಗಿಸಿಕೊಂಡಿದೆ., ಸರಳ ಸಾಮೂಹಿಕ ವಿವಾಹಗಳನ್ನೂ ನಡೆಸುವ ಟ್ರಸ್ಟ್ ದೇಗುಲ ಆವರಣದಲ್ಲಿ ಆಸ್ಪತ್ರೆಯನ್ನೂ ನಿರ್ಮಿಸಿದ್ದು, ಬಡ ರೋಗಿಗಳಿಗೆ ಇಲ್ಲಿ ಉಚಿತ ಚಿಕಿತ್ಸೆಯನ್ನೂ ನೀಡಲಾಗುತ್ತದೆ. | |||