|
ಮುಖಪುಟ
/ನಮ್ಮದೇವಾಲಯಗಳು
ಪವಿತ್ರ ಶೈವಕ್ಷೇತ್ರ ಮಹಾಕೂಟ
ಚಾಲುಕ್ಯರ
ಕಾಲದ ಪ್ರಸಿದ್ಧ ಪುಣ್ಯಕ್ಷೇತ್ರ ಬಾದಾಮಿಯ ಪೂರ್ವಕ್ಕೆ ಸುಮಾರು 5 ಕಿಲೋ ಮೀಟರ್
ದೂರದ ವಿರಳ ಹಾಗೂ ಬಹು ಅಪರೂಪದ ಗಿಡಮರಗಳಿಂದ ಕೂಡಿದ ಕಾನನ ಪ್ರದೇಶದಲ್ಲಿ ಅಚ್ಛಾದಿತವಾದ ನಸುಗೆಂಪು ಮರಳು ಕಲ್ಲಿನ ಎರಡು ಬೆಟ್ಟಗಳ ನಡುವೆ ಇರುವುದೇ ಮಹಾಕೂಟವೆಂಬ ಪುಣ್ಯಕ್ಷೇತ್ರ. ಇಲ್ಲಿ ಮಹಾಕೂಟೇಶ್ವರ ಮತ್ತು ಮಲ್ಲಿಕಾರ್ಜುನ ದೇಗುಲಗಳಿವೆ. ಈ ಎರಡು ದೇವಾಲಯಗಳ ಮಧ್ಯೆ ಸುಂದರವಾದ ಪುಷ್ಕರಣಿಯಿದ್ದು ಇದರ ಸುತ್ತಲೂ ಹಲವಾರು ಸಣ್ಣ ಪುಟ್ಟ ದೇವಾಲಯಗಳಿವೆ. ಹಲವು ಭಿನ್ನ ವಿಗ್ರಹಗಳನ್ನು ಪುಷ್ಕರಣಿಯ ಸುತ್ತಲೂ ಜೋಡಿಸಿಡಲಾಗಿದೆ.
ಮಹಾಕೂಟೇಶ್ವರ ಹಾಗೂ ಮಲ್ಲಿಕಾರ್ಜುನನ ದರ್ಶನಕ್ಕೆ ಬರುವ ಭಕ್ತರು, ಪುಷ್ಕರಣಿಯಲ್ಲಿ ಮೊದಲು ಸ್ನಾನ ಮಾಡಿ ನಂತರ ದೇವರ ಮಾಡುತ್ತಾರೆ.
ಮಹಾಕೂಟೇಶ್ವರ
ಹಾಗೂ ಮಲ್ಲಿಕಾರ್ಜುನ ದೇವರ ದೇವಾಲಯಗಳನ್ನು ಒಂದೇ ಮಾದರಿಯಲ್ಲಿ ನಿರ್ಮಿಸಲಾಗಿದೆ.
ಬೆಟ್ಟಗಳ
ಈ ದೇಗುಲಗಳಲ್ಲಿ ಚೌರಸ ಗರ್ಭಗೃಹವಿದೆ. ಇದಕ್ಕಿಂತ ಅಗಲವಾದ ಸಭಾ ಮಂಟಪ ಹಾಗೂ ಕಿರಿದಾದ ಮುಖಮಂಟಪವಿದೆ. ಗರ್ಭಗುಡಿಯ ಮೇಲೆ ದ್ರಾವಿಡ ಶೈಲಿಯ ಶಿಖರವಿದೆ. ಎತ್ತರದ ಅಷ್ಠಾನ ಅಡ್ಡ ಪಟ್ಟಿಕೆಗಳಲ್ಲಿ ಹೆಚ್ಚಾಗಿ ಶಿವಪುರಾಣಗಳಿಗೆ ಸಂಬಂಧಿಸಿದ ಲೌಕಿಕ ವಿಷಯದ ಶಿಲ್ಪಗಳಿವೆ. ಹೊರ ಬಿತ್ತಿಗಳಲ್ಲಿ ಜಾಲಂದ್ರವಿದೆ. ಅರ್ಧನಾರೀಶ್ವರನ ಸುಂದರ ಕೆತ್ತನೆ ಮನಮೋಹಕವಾಗಿದೆ.
ಗಣಪನ ಡೊಳ್ಳುಹೊಟ್ಟೆಯಲ್ಲಿ ಹೊಕ್ಕುಳ ಜಾಗದಲ್ಲಿ ದೊಡ್ಡದೊಂದು ರಂದ್ರವಿದೆ. ಭಕ್ತರು ಈ ರಂದ್ರದಲ್ಲಿ ಎಣ್ಣೆ ಸುರಿಯುತ್ತಾರೆ.
ಪ್ರಮುಖ ದೇಗುಲದ ಹೊರಬಿತ್ತಿಯ ಮೇಲೆ ವಿಷ್ಣು, ಸ್ಥಾನಕಬ್ರಹ್ಮ, ಅರ್ಧ ನಾರೀಶ್ವರ, ಪರಶುಧರ ಶಿವ, ತ್ರಿಶೂಲಧಾರಿ ಶಿವ ಮೊದಲಾದ ಕೆತ್ತನೆ ಇದೆ. ಕೆಳ ಪಟ್ಟಿಕೆಗಳಲ್ಲಿ ಸುಂದರ ಶಿಲ್ಪಕಲಾ ಕೆತ್ತನೆ ಇದೆ. ಇಲ್ಲಿ ಸೂಕ್ಷ್ಮ ಕೆತ್ತನೆ ಇಲ್ಲದಿದ್ದರೂ ಮನೋಹರವಾದ ಶಿಲ್ಪಕಲಾ ಸೌಂದರ್ಯವಿದೆ. ಬಾದಾಮಿ ಚಾಲುಕ್ಯರ ನಾಡಿನಲ್ಲಿ ಶಿಲೆಗಳೂ ಸಂಗೀತವನ್ನು ಹಾಡುತ್ತವೆ. ವಿಶೇಷ ವಾಸ್ತು ಶೈಲಿಯ ಸುಂದರ ದೇವಾಲಯಗಳು ಆಸ್ತಿಕರಿಗೆ ಭಕ್ತಿಭಾವ ಮೂಡಿಸಿದರೆ, ನಾಸ್ತಿಕರನ್ನು ತಮ್ಮ ಕಲಾಶ್ರೀಮಂತಿಕೆಯಿಂದ ಕೈಬೀಸಿ ಕರೆಯುತ್ತವೆ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2 2352901 /22352909 /22352903 Email : kstdc@vsnl.in | |||