|
ಮುಖಪುಟ
/ನಮ್ಮದೇವಾಲಯಗಳು
ಮಧುಗಿರಿ
ವೆಂಕಟರಮಣ ದೇವಾಲಯ
ತುಮಕೂರು ಜಿಲ್ಲೆಯ ಮಧುಗಿರಿ
ಹರಿ ಹರಕ್ಷೇತ್ರ.
ತುಮಕೂರಿನಿಂದ 43 ಕಿಲೋ ಮೀಟರ್ ದೂರದಲ್ಲಿರುವ ಮಧುಗಿರಿ
ಹಳೆಯ ಕಲ್ಲು ಕಂಬಗಳಿಂದ ಕೂಡಿದ
ಈ ದೇವಾಲಯದ
ಕೆಲವು ಕಂಬಗಳಲ್ಲಿ ಸ್ತ್ರೀ,
ಪುರುಷ, ಪ್ರಾಣಿ, ಪಕ್ಷಿಗಳ ಸಾಧಾರಣ ಶಿಲ್ಪಗಳಿವೆ. ಎಲ್ಲ ಸ್ತಂಭಗಳಿಗೂ ಬಣ್ಣಬಳಿದು ಅದರ ನೈಜ ಸೌಂದರ್ಯ ಹಾಗೂ
ದೇವಾಲಯದ ಪ್ರವೇಶದಲ್ಲಿ ಶಂಖ, ಚಕ್ರ ಹಾಗೂ ತ್ರಿಪುಂಡರ ಇರುವ ಬಾಗಿಲವಾಡವಿದೆ. ಒಳ ಪ್ರಾಕಾರದಲ್ಲಿ ಮೂರು ದ್ವಾರಗಳಿದ್ದು ಎಲ್ಲ ದ್ವಾರಗಳ ಬಾಗಿಲವಾಡದಲ್ಲೂ ಜಯವಿಜಯರ ಉಬ್ಬುಶಿಲ್ಪಗಳಿವೆ. ಇವುಗಳಿಗೆ ಹಿತ್ತಾಳೆಯ ಕವಚಗಳನ್ನು ಹಾಕಲಾಗಿದೆ. ಗರ್ಭಗೃಹದಲ್ಲಿ ಶಂಖ, ಚಕ್ರ, ಗದೆ ಹಾಗೂ ವರದಮುದ್ರೆಯಲ್ಲಿರುವ ವೆಂಕಟರಮಣನ ಮೂರ್ತಿಯನ್ನು ರತ್ನಖಚಿತ ಅಲಂಕಾರದಲ್ಲಿ ನೋಡುವುದೇ ಒಂದು ಸೊಬಗು. ಇಲ್ಲಿ ವೈಷ್ಣವ ಪದ್ಧತಿಯಂತೆ ಪೂಜಾವಿಧಿಗಳು ಜರುಗುತ್ತವೆ. ನವರಾತ್ರಿ, ವೈಕುಂಠ ಏಕಾದಶಿ ಹಾಗೂ ಶ್ರಾವಣ ಮಾಸದಲ್ಲಿ ಹಾಗೂ ಪ್ರತಿ ಶನಿವಾರ ವಿಶೇಷ ಪೂಜೆಗಳು ನಡೆಯುತ್ತವೆ.
ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in | |||