|
ಮುಖಪುಟ
/ನಮ್ಮದೇವಾಲಯಗಳು
ಮಧುಗಿರಿಯ
ಮಲ್ಲಿನಾಥ ಬಸದಿ
*ಟಿ.ಎಂ.ಸತೀಶ್
ಮಧುಗಿರಿ ಒಂದು ಕಾಲದಲ್ಲಿ ಜೈನರ ಆವಾಸ ಸ್ಥಾನವೂ ಆಗಿತ್ತು. ಆಗ ಇಲ್ಲಿ ನಿರ್ಮಿಸಲಾದ
ಪುರಾತನ ಬಸದಿಯನ್ನೂ
ಇಂದಿಗೂ ಕಾಣಬಹುದು.
ಬೆಟ್ಟದ ಬುಡದಲ್ಲಿ, ತೆಂಗಿನ ಮರಗಳ ಸಾಲಿನ ನಡುವೆ ಇರುವ ಈ ಬಸದಿಯಲ್ಲಿ 19ನೇ
ತೀರ್ಥಂಕರರಾದ ಮಲ್ಲಿನಾಥರ ಮೂರ್ತಿಯಿದೆ.
ಮೇಲ್ಛಾವಣಿಗೆ ಆಧಾರವಾಗಿ ನಿಂತಿರುವ ಕಲಾತ್ಮಕ ಕಂಬಗಳಿಗೆ
ಬಣ್ಣಬಳಿದು ಅವುಗಳ ನೈಜ ಕಲಾಶ್ರೀಮಂತಿಕೆಯನ್ನು
ದೇವಾಲಯದ ಮೇಲಿನ ಗೋಪುರಗಳಲ್ಲಿ ಗಾರೆಯ ಗೂಡುಗಳನ್ನು
ನಿರ್ಮಿಸಲಾಗಿದ್ದು, ಆ ಗೂಡುಗಳಲ್ಲಿ ಧ್ಯಾನನಿರತ ತೀರ್ಥಂಕರರ ಗಾರೆ ಪ್ರತಿಮೆಗಳಿವೆ. ದೇವಾಲಯದ
ಹೊರಗಡೆ ಗರ್ಭಗೃಹಕ್ಕೆ ನೇರವಾಗಿ 15 ಅಡಿ ಎತ್ತರ ಇರುವ ಮಾನಸ್ತಂಭವಿದೆ.
ಮಾನಸ್ತಂಭದ ಕೆತ್ತನೆ, ವಿನ್ಯಾಸ ಮನಮೋಹಕವಾಗಿದೆ. ಈ ದೇವಾಲಯದ ವಿನ್ಯಾಸ ನೋಡಿದರೆ ಹಿಂದೆ ಇದು ಹಿಂದೂ
ದೇವಾಲಯ ಆಗಿದ್ದಿರಬಹುದು ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ.
ಸಂಪರ್ಕ: ನಿರ್ದೇಶಕರು,
ಪ್ರವಾಸೋದ್ಯಮ ಇಲಾಖೆ, ಖನಿಜ ಭವನ,
ರೇಸ್ಕೋರ್ಸ್ ರಸ್ತೆ, ಬೆಂಗಳೂರು.
ದೂರವಾಣಿ :080-22352901 /22352909 /22352903
Email : kstdc@vsnl.in | |||