ಮುಖಪುಟ /ನಮ್ಮ ದೇವಾಲಯಗಳು  

 

Sir,

I appreciate your efforts to reach in kannada.  It is very beautiful and useful, informative site.

subramanya

 

ಕನ್ನಡರತ್ನ.ಕಾ ಸಂಪಾದಕರಿಗೆ, ನನ್ನ ನಮಸ್ಕಾರಗಳು.
ಸೆ.೧.ರಂದು ಆರಂಭಗೊಂಡ ದೇವಾಲಯ ಮಾಹಿತಿಯ ನೂತನ ಅಂರ್ಜಾಲಕ್ಕೆ ನನ್ನ ಶುಭಾಶಯಗಳು ಕನ್ನಡರತ್ನ. ಕಾಂ ರಾಜ್ಯ ಹಾಗೂ ಪ್ರಮುಖ ದೇವಾಲಯಗಳ ಸಮಗ್ರ ಮಾಹಿತಿಯನ್ನು ನೀಡುವ ನಿಟ್ಟಿನಲ್ಲಿ ಮುಂದಾಗಿರುವುದು ಅತೀವ ಸಂತೋಷ ತಂದಿದೆ. ನಾನು ಹೊಸಪೇಟೆಯಲ್ಲಿ ಹಲವು ವರ್ಷಗಳಿಂದ ಸುದ್ದಿ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದೇನೆ. ನನಗೆ ಸಿಕ್ಕ ಮಾಹಿತಿ ಆಧರಿಸಿ, ಹಂಪಿ ಮತ್ತು ಸುತ್ತಮುತ್ತಲಿನ ಐತಿಹಾಸಿಕ ಸ್ಥಳಗಳ ಕುರಿತು ನಾನು ಲೇಖನಗಳನ್ನು ಬರೆದು ಕಳುಹಿಸುವೆ ತಮ್ಮ ಅಂರ್ತಜಾಲ ವಾಹಿನಿ ಲೇಖನಗಳನ್ನು ಪ್ರಕಟಿಸಲು ಕೋರಿಕೆ.

ಪಿ.ಸತ್ಯನಾರಾಯಣ, ಹೊಸಪೇಟೆ
__________

ಶ್ರೀ ಸತೀಶ್ ಅವರಿಗೆ ಆತ್ಮೀಯ ನಮಸ್ಕಾರಗಳು.
ನಿಮ್ಮ ಹೊಸ ಸಾಹಸದ ಬಗ್ಗೆ ತಿಳಿಯಿತು. ಕನ್ನಡರತ್ನ.ಕಾಂ ರಾಜ್ಯದ ಎಲ್ಲ ದೇವಾಲಯಗಳ ಸಚಿತ್ರ ಮಾಹಿತಿ ಇರುವ
ourtemples.in ವೆಬ್ ಸೈಟ್ ನಿರ್ಮಿಸುತ್ತಿರುವುದು ನಿಜಕ್ಕೂ ಮಹತ್ವದ ಕಾರ್ಯವೇ ಸರಿ.

ಒಂದು ಸರ್ಕಾರ ಮಾಡಬೇಕಾದ ಕಾರ್ಯವನ್ನು ಕನ್ನಡರತ್ನ.ಕಾಂ ಏಕಾಂಗಿಯಾಗಿ ಮಾಡುತ್ತಿದೆ. ourtemples.in ನಲ್ಲಿರುವ ಲೇಖನಗಳು ಬಹಳ ಸುಂದರ ಸುಲಲಿತ ಬರವಣಿಗೆಯಿಂದ ಕೂಡಿದ್ದು ಉಪಯುಕ್ತ ಹಾಗೂ ಮಾಹಿತಿ ಪೂರ್ಣವಾಗಿದೆ. ನಿಮ್ಮ ಸತ್ಕಾರ್ಯಕ್ಕೆ ನನ್ನ ಶುಭಾಶಯಗಳು. ಇದರೊಂದಿಗೆ 1,000 ರೂಪಾಯಿ ಮೊತ್ತದ ಚೆಕ್ ಕಳುಹಿಸಿರುತ್ತೇನೆ. ದಯಮಾಡಿ   ಅರಳುಗುಪ್ಪೆ ಕಲ್ಲೇಶ್ವರ ದೇವಾಲಯದ ಪ್ರಾಯೋಜಕತ್ವಕ್ಕೆ ಬಳಸಲು ಸವಿನಯ ಪ್ರಾರ್ಥನೆ. ಇಂತಿ ನಿಮ್ಮ ವಿಶ್ವಾಸಿ
ಟಿ.ಎಸ್. ರವಿಶಂಕರ್, ಬೆಂಗಳೂರು. 

ಮುಖಪುಟ /ನಮ್ಮ ದೇವಾಲಯಗಳು