ಮುಖಪುಟ /ನಮ್ಮದೇವಾಲಯಗಳು   

ಕೂಡಲ ಸಂಗಮದ ಸಂಗಮೇಶ್ವರ ದೇವಾಲಯ

ಬಸವಣ್ಣನವರ ಆರಾಧ್ಯ ದೈವವಿರುವ ಕ್ಷೇತ್ರ

*ಟಿ.ಎಂ.ಸತೀಶ್

koodalasangama, ಕೂಡಲ ಸಂಗಮ, our temples.in, T.M.Satish, Kannadaratna.com ಕನ್ನಡರತ್ನ.ಕಾಂ, kannadaratna.com, ourtemples.in, Templs in karnataka, Temples of Karnataka, karnataka templesಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮ ಪವಿತ್ರ ಪುಣ್ಯಸ್ಥಳ. ಅಂತಾರಾಷ್ಟ್ರೀಯ ಖ್ಯಾತಿಯ ಪ್ರವಾಸಿ ತಾಣ.  ಕೃಷ್ಣಾ ಹಾಗೂ ಮಲಪ್ರಭಾ ನದಿಗಳು ಕೂಡುವ  ಸಂಗಮ ಸ್ಥಳ. ಹೀಗಾಗಿ ಇದು ಕೂಡಲ ಸಂಗಮವೆಂದೇ ಖ್ಯಾತವಾಗಿದೆ.

12ನೆಯ ಶತಮಾನದಲ್ಲಿ ಜಾತವೇದ ಮುನಿಗಳು ಇಲ್ಲಿ ವಿದ್ಯಾ ಕೇಂದ್ರ ಸ್ಥಾಪಿಸಿದ್ದರು ಎಂದು ಇತಿಹಾಸ ಹೇಳುತ್ತದೆ. ಕ್ರಾಂತಿಯೋಗಿ ಬಸವೇಶ್ವರುಚೆನ್ನಬಸವಣ್ಣಅಕ್ಕ ನಾಗಮ್ಮ ಮೊದಲಾದ ಮಹಾ ಮಹಿಮರ ಶಿಕ್ಷಣವಾಗಿದ್ದು ಈ ಕ್ಷೇತ್ರದಲ್ಲೇ ಎಂದು ಇತಿಹಾಸ ಸಾರುತ್ತದೆ.

ಉಳ್ಳವರು ಶಿವಾಲಯವ ಮಾಡುವರು
ನಾನೇನು ಮಾಡಲಿ ಬಡವನಯ್ಯ,
ಎನ್ನ ಕಾಲೇ ಕಂಬ, ದೇಹವೇ ದೇಗುಲ,

ಶಿರವೇ ಹೊನ್ನ ಕಳಶವಯ್ಯ

ಕೂಡಲಸಂಗಮ ದೇವ ಕೇಳಯ್ಯ

ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ..

koodalasangama, ಕೂಡಲ ಸಂಗಮ, our temples.in, T.M.Satish, Kannadaratna.com ಕನ್ನಡರತ್ನ.ಕಾಂ, kannadaratna.com, ourtemples.in, Templs in karnataka, Temples of Karnataka, karnataka templesಎಂದ ವೀರಶೈವ ಮತೋದ್ಧಾರಕ ಭಕ್ತಿಭಂಡಾರಿ ಬಸವಣ್ಣನವರು ವಿದ್ಯಾಭ್ಯಾಸ ಮಾಡಿದ ಈ ಕ್ಷೇತ್ರದಲ್ಲಿ ಬಸವೇಶ್ವರರ ಆರಾಧ್ಯ ದೈವ ಕೂಡಲ ಸಂಗಮ ದೇವರ ದೇವಾಲಯವಿದೆ. ಬಸವಣ್ಣನವರು ತಮ್ಮ  ಎಲ್ಲ ವಚನಗಳನ್ನೂ ಈ ಕೂಡಲಸಂಗಮದೇವನಿಗೇ ಅಂಕಿತ ಮಾಡಿದ್ದಾರೆ.

ಕಲ್ಯಾಣದಲ್ಲಿ ಬಿಜ್ಜಳನ  ಪ್ರಧಾನಿಯಾಗಿದ್ದ ಬಸವಣ್ಣನವರು ಕಲ್ಯಾಣ ಕ್ರಾಂತಿಯ ಬಳಿಕ  ಸಂಗಮಕ್ಕೆ ಮರಳಿ ಇಲ್ಲಿಯೇ ಐಕ್ಯರಾದರೆಂದೂ ಇತಿಹಾಸ ತಿಳಿಸುತ್ತದೆ. ಹೀಗಾಗಿಯೇ ಈ ಕ್ಷೇತ್ರ ಶಿವಶರಣರಿಗೆ ಪರಮ ಪವಿತ್ರವಾದ ಪುಣ್ಯಕ್ಷೇತ್ರವಾಗಿದೆ.

ಮಹಾಮಹಿಮ ಸಂಗನ ಬಸವಣ್ಣನ ಪಾದಸ್ಪರ್ಶದಿಂದ ಅವಿಮುಕ್ತ ಕ್ಷೇತ್ರವಾಯಿತೆಂದು ಅಕ್ಕ ಮಹಾದೇವಿ ನುಡಿದ ಪ್ರಕಾರ ಕೂಡಲ ಸಂಗಮವು ಬಸವಣ್ಣನವರ ವಿದ್ಯಾಭೂಮಿಯಾಗಿ, ತಪೋಭೂಮಿಯಾಗಿ, ಐಕ್ಯಭೂಮಿಯಾಗಿ ಇಂದು ಪರಮ ಪವಿತ್ರ ಪುಣ್ಯಭೂಮಿಯಾಗಿದೆ.

ಇಷ್ಟು ಪವಿತ್ರವಾದ ಪುಣ್ಯಭೂಮಿಯಲ್ಲಿ ಚಾಳುಕ್ಯ ಶೈಲಿಯ ಸಂಗಮೇಶ್ವರ ದೇವಸ್ಥಾನವಿದೆ. ನದಿಯ ದಡದಲ್ಲಿರುವ ಕಲ್ಲು ಕಟ್ಟಡದ ಈ ದೇವಾಲಯದ ಮೇಲೆ ಗಾರೆಗಚ್ಚಿನ ಗೋಪುರಗಳಿವೆ. ಪ್ರತಿ ಗೋಪುರದ ಮೇಲೂ ಕಳಶವಿದೆ. ವಿಶಾಲವಾದ ಪ್ರಾಕಾರವುಳ್ಳ ದೇವಾಲಯ ನಯನ ಮನೋಹರವಾಗಿದೆ. ಇಲ್ಲಿನ ಪ್ರಧಾನ ಗರ್ಭಗೃಹದಲ್ಲಿ ಸುಂದರ ಶಿವಲಿಂಗವಿದೆ.

ನಿತ್ಯ ಪೂಜೆ ಹಾಗೂ ವರ್ಷಕ್ಕೊಮ್ಮೆ ದೊಡ್ಡ ಜಾತ್ರೆ ನಡೆಯುತ್ತದೆ. ಕೂಡಲ ಸಂಗಮದಲ್ಲಿ ಬಸವ ಧರ್ಮಪೀಠ, ಐಕ್ಯ ಮಂಟಪವೂ ಇದೆ. ಅಲ್ಲದೆ ಗುಮ್ಮಟಾಕಾರದ ಬೃಹತ್ ಸಭಾಭವನ, ಅಷ್ಟಕೋನಾಕಾರದ ಬಸವ ಅಂತಾರಾಷ್ಟ್ರೀಯ ಕೇಂದ್ರ, ಉತ್ಕೃಷ್ಟ ಗ್ರಂಥಾಲಯ ಮತ್ತು ಶರಣ ಲೋಕವೂ ಇದೆ.

koodalasangama, ಕೂಡಲ ಸಂಗಮ, our temples.in, T.M.Satish, Kannadaratna.com ಕನ್ನಡರತ್ನ.ಕಾಂ, kannadaratna.com, ourtemples.in, Templs in karnataka, Temples of Karnataka, karnataka templesಇಲ್ಲಿ ಪ್ರಮುಖವಾದ ಎರಡು ತಾಣಗಳೆಂದರೆ ಒಂದು ಐಕ್ಯ ಮಂಟಪ ಮತ್ತೊಂದು ಕೂಡಲ ಸಂಗಮದೇವನ ದೇವಾಲಯ. ಕೃಷ್ಣ ಮೇಲ್ದಂಡೆ ಯೋಜನೆಯಿಂದ ಈ ಎರಡೂ ತಾಣಗಳು ಮುಳುಗಡೆಯಾಗುವ ಭೀತಿ ಎದುರಿಸಿದ್ದವು. ದೇವಾಲಯವನ್ನು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆಯೂ ಆಗ ಸರ್ಕಾರ ಚಿಂತಿಸಿತ್ತು. ಆದರೆ ರಾಜ್ಯದಾದ್ಯಂತ ನಡೆದ ವ್ಯಾಪಕ ಹೋರಾಟದಿಂದಾಗಿ ಸರ್ಕಾರ ತನ್ನ ನಿರ್ಧಾರ ಕೈಬಿಟ್ಟು, ಕೂಡಲ ಸಂಗಮ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಈ ಕ್ಷೇತ್ರವನ್ನು ಆಕರ್ಷಣೀಯ ತಾಣ ಮಾಡಲು ನಿರ್ಧರಿಸಿತು. ಹೀಗಾಗಿ 1994ರಿಂದೀಚೆಗೆ ಇಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆದಿದೆ. ನಡೆಯುತ್ತಲಿದೆ.

ಹೋಗುವುದು ಹೇಗೆ- ಬಾಗಲಕೋಟೆ ಜಿಲ್ಲಾ ಕೇಂದ್ರದಿಂದ 12 ಕಿ.ಮೀ. ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದರೆ ಸಂಗಮ ಕ್ರಾಸ್ ನಿಂದ 7 ಕಿ.ಮೀ. ದೂರದಲ್ಲಿ ಈ ಪವಿತ್ರ ಪುಣ್ಯ ತಾಣವಿದ್ದು, ಮಾರ್ಗದಲ್ಲಿ ಭವ್ಯವಾದ ಮಹಾದ್ವಾರ ಸ್ವಾಗತಿಸುತ್ತದೆ. 100 ಅಡಿ ಎತ್ತರ ಇರುವ ಈ ಮಹಾ ದ್ವಾರದ ಮೂಲಕ ಸಾಗಿದರೆ ಸಂಗಮೇಶ್ವರನ ದೇವಾಲಯ ತಲುಪಬಹುದು.

 ಮುಖಪುಟ /ನಮ್ಮದೇವಾಲಯಗಳು