ಮುಖಪುಟ /ನಮ್ಮದೇವಾಲಯಗಳು  

ಕೋಟೆ ಬೆಟ್ಟ ವೆಂಕಟರಮಣ ದೇವಾಲಯ

Kotebetta Venkataramana swamy temple, Mandya, Nagamangala, Keresante Mahalakshmi,  kannadaratna.com our temples.in, temples of karnataka, hassan, namma devalayagalu, ಮಂಡ್ಯಜಿಲ್ಲೆಯ ನಾಗಮಂಗಲ ಬಳಿ ಇರುವ ಪವಿತ್ರ ಪುಣ್ಯಕ್ಷೇತ್ರ ಕೋಟೆ ಬೆಟ್ಟ. ಈ ಬೆಟ್ಟ ಶ್ರೀ ವೆಂಕಟರಮಣನ ನೆಲೆವೀಡು. ವಿಶಾಲವಾದ ಪ್ರಾಕಾರವಿರುವ ಈ ದೇವಾಲಯದ ಸುತ್ತಲೂ ಕೋಟೆಯಂತೆ ಆವರಣ ಗೋಡೆ ಕಟ್ಟಿರುವ ಕಾರಣ ಇದಕ್ಕೆ ಕೋಟೆ ಬೆಟ್ಟ ಎಂದು ಹೆಸರು ಬಂದಿದೆ ಎನ್ನುತ್ತಾರೆ ಹಿರಿಯರು.

ಕೋಟೆ ಬೆಟ್ಟ ಪರಶುರಾಮಕ್ಷೇತ್ರ ಎಂದೇ ಖ್ಯಾತವಾಗಿದೆ. ತಂದೆ ಜಮದಗ್ನಿ ಮಹರ್ಷಿಗಳ ಮಾತನ್ನು ಮೀರಲಾರದೆ ತಾಯಿ ರೇಣುಕಾ ಮಾತೆಯ ತಲೆ ಕಡಿದು ಮತ್ತೆ ತಂದೆಯಿಂದಲೇ ವರ ಪಡೆದು ತಾಯಿಯನ್ನು ಬದುಕಿಸಿಕೊಂಡ ಪರಶುರಾಮ, ಮಾತೃಹತ್ಯಾ ದೋಷದ ಪಾಪ ಪ್ರಾಯಶ್ಚಿತ್ತಾರ್ಥವಾಗಿ ಈ ಬೆಟ್ಟಕ್ಕೆ ಬಂದು ಇಲ್ಲಿನ ಗುಹೆಯಲ್ಲಿ ಬ್ರಹ್ಮದೇವರ ಸಮ್ಮುಖದಲ್ಲಿ ನಾರಾಯಣನನ್ನು ಪೂಜಿಸಿದನೆಂದು ಐತಿಹ್ಯದಿಂದ ತಿಳಿದುಬರುತ್ತದೆ.

ಇಲ್ಲಿನ ಗರ್ಭಾಂಕಣ ಗುಹೆಯಲ್ಲಿದ್ದು, ಇಲ್ಲಿಂದ ಸುರಂಗಮಾರ್ಗವೂ ಇದೆ ಎಂದು ಹೇಳಲಾಗುತ್ತದೆ. ಇಲ್ಲಿರುವ ವೆಂಕಟರಮಣಸ್ವಾಮಿ ವಿಗ್ರಹ ನಿಂತಿರುವ ಭಂಗಿಯಲ್ಲಿದ್ದು ಶಂಖ, ಚಕ್ರ, ಗದೆ ಹಾಗೂ ವರದ ಮುದ್ರೆಯಲ್ಲಿದೆ. ಪ್ರಭಾವಳಿಯಲ್ಲಿ ಸುಂದರವಾದ ಕಲಾತ್ಮಕ ಕೆತ್ತನೆ ಇದೆ.

Kotebetta Venkataramana swamy temple, Mandya, Nagamangala, Keresante Mahalakshmi,  kannadaratna.com our temples.in, temples of karnataka, hassan, namma devalayagalu, ಬೆಳ್ಳಿಯ ಕವಚದಲ್ಲಿ ಹಾಗೂ ಪಟ್ಟೆ ಪೀತಾಂಬರದಲ್ಲಿ ದೇವರ ವಿಗ್ರಹದ ಚೆಲುವು ನೂರ್ಮಡಿಗೊಳ್ಳುತ್ತದೆ.

ಈ ದೇವಾಲಯವನ್ನು 1577ರಲ್ಲಿ ವಿಜಯನಗರದ ಅರಸರ ಕಾಲದಲ್ಲಿ ಜಗದೇವರಾಯರು ಕಟ್ಟಿಸಿದರೆಂದು ಹೇಳಲಾಗುತ್ತದೆ. ನಂತರ ಅವರ ವಂಶಜರಾದ ಅಂಕುಶರಾಯರ ಕಾಲದಲ್ಲಿ ದೇವಾಲಯ ಮತ್ತಷ್ಟು ಅಭಿವೃದ್ಧಿ ಹೊಂದಿದೆ ಎಂದು ತಿಳಿದುಬರುತ್ತದೆ. ಅಂಕುಶರಾಯನೇ ಮಹಾದ್ವಾರ, ರಾಜಗೋಪುರ ಕಟ್ಟಿಸಿದ್ದೆಂದು ಇತಿಹಾಸ ತಜ್ಞರು ಅಭಿಪ್ರಾಯಪಡುತ್ತಾರೆ.

ಪುರಾತನವಾದ ಈ ದೇವಾಲಯ ಹಲವಾರು ವರ್ಷ ಜನರಿಂದ ಮರೆಯಾಗಿತ್ತು. ಈಗ್ಗೆ 150 ವರ್ಷಗಳ ಹಿಂದೆ ಸಂಪಿಗೆಯಿಂದ Kotebetta Venkataramana swamy temple, Mandya, Nagamangala, Keresante Mahalakshmi,  kannadaratna.com our temples.in, temples of karnataka, hassan, namma devalayagalu, ಇಲ್ಲಿಗೆ ಬಂದು ನೆಲೆಸಿದ ನರಸಿಂಹಯ್ಯನವರು ದೇವಾಲಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಈಗಲೂ ಅವರ ವಂಶಜರೇ ಇಲ್ಲಿ ಪೂಜೆ ನಡೆಸುತ್ತಾ ಬಂದಿದ್ದಾರೆ. ದೇವಾಲಯದಲ್ಲಿ ಪಾಂಚರಾತ್ರಾಗಮ ರೀತ್ಯ ನಿತ್ಯ ಪೂಜಾ ವಿಧಿಗಳು ಜರುಗುತ್ತವೆ.

ಪ್ರತಿವರ್ಷ ಮಾಘ ಮಾಸದ ವ್ಯಾಸ ಪೌರ್ಣಿಮೆಯ ದಿನ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ನಡೆಯುತ್ತದೆ. ಧನಗಳ ಜಾತ್ರೆಯೂ ಜರುಗುತ್ತದೆ. ದೇವಾಲಯದ ಪಕ್ಕದಲ್ಲಿ ವಿಶಾಲವಾದ ದೊಡ್ಡ ಕೆರೆ ಇದೆ.

ಮುಖಪುಟ /ನಮ್ಮದೇವಾಲಯಗಳು