ಮುಖಪುಟ /ನಮ್ಮದೇವಾಲಯಗಳು  

ಕೆರೆಸಂತೆ ಮಹಾಲಕ್ಷ್ಮೀ ದೇವಾಲಯ

Keresante Mahalakshmi,  kannadaratna.com our temples.in, temples of karnataka, hassan, namma devalayagalu, ಡೂರು ತಾಲೂಕಿನಲ್ಲಿರುವ ಕೆರೆ ಸಂತೆ ಪ್ರಸಿದ್ಧ ಮಹಾಲಕ್ಷ್ಮೀ ಕ್ಷೇತ್ರ. ಈ ಊರಿಗೆ ಕೆರೆ ಸಂತೆ ಎಂಬ ಹೆಸರು ಬರಲು ಕಾರಣ ದೊರೆ ವಿಷ್ಣುವರ್ಧನ ಕಟ್ಟಿಸಿದ ಕೆರೆ ಕಾರಣ. ಈ ಪ್ರದೇಶದ ಜನರಿಗೆ ಪೈರಿಗೆ ನೀರೊದಗಿಸುವ ಈ ದೊಡ್ಡ ಕೆರೆ ವಿಷ್ಣು ಸಮುದ್ರ ಎಂದೇ ಖ್ಯಾತವಾಗಿದೆ.

ಈ ಕೆರೆಯ ಸಮೀಪದಲ್ಲಿ  ತನ್ನ ಪತ್ನಿ ಶಾಂತಲೆಯ ಕೋರಿಕೆಯ ಮೇರೆಗೆ ಕ್ರಿ.ಶ. 1117ರಲ್ಲಿ ರಾಜ ವಿಷ್ಣುವರ್ಧನ ಮಹಾಲಕ್ಷ್ಮೀ ದೇವಾಲಯ ಕಟ್ಟಿಸಿದನಂತೆ.  ದೇವಾಲಯದ ಪೂರ್ವ ದಿಕ್ಕಿನಲ್ಲಿ ಲಕ್ಷ್ಮೀ ನಾರಾಯಣ ಹಾಗೂ ಲಕ್ಷ್ಮೀ ನರಸಿಂಹ ಮತ್ತು ಗಣೇಶ ಗುಡಿಗಳಿವೆ.

ಸುಂದರವಾದ ಈ ದೇವಾಲಯದಲ್ಲಿರುವ ಗರ್ಭಗೃಹದಲ್ಲಿ ಸುಮಾರು 4 ಅಡಿ ಎತ್ತರದ ಮಹಾಲಕ್ಷ್ಮೀ ವಿಗ್ರಹವಿದೆ. ವಿಗ್ರಹದ ಹಿಂಬದಿಯಲ್ಲಿ ಸುಂದರ ಪ್ರಭಾವಳಿ ಇದೆ.

(ಹೆಚ್ಚಿನ ಮಾಹಿತಿ ನಿರೀಕ್ಷಿಸಿ)

ಮುಖಪುಟ /ನಮ್ಮದೇವಾಲಯಗಳು