|
ಮುಖಪುಟ
/ನಮ್ಮದೇವಾಲಯಗಳು
ಕಾರಂಜಿ ಆಂಜನೇಯಸ್ವಾಮಿ ದೇವಾಲಯ
*
ಟಿ.ಎಂ.ಸತೀಶ್
ಬಹಳ
ಹಿಂದೆ ಕಲ್ಯಾಣ ನಗರ ಎಂದು ಕರೆಸಿಕೊಂಡಿದ್ದ ಈ ಬೆಟ್ಟ ಪ್ರದೇಶದಲ್ಲಿ ದಟ್ಟವಾದ ಕಾನನ
ಹಾಗೂ ಮಾವು, ತೆಂಗು, ಕಂಗು ಹಾಗೂ ಬಾಳೆತೋಟಗಳಿದ್ದವು. ಬೆಟ್ಟದ ಮೇಲಿಂದ ಜಲಧಾರೆಯೂ
ಹರಿಯುತ್ತಿತ್ತು. ಹೀಗಾಗಿ ಇಲ್ಲಿ ಕೆರೆಯೊಂದನ್ನೂ ನಿರ್ಮಿಸಲಾಗಿತ್ತು. 1920ರವರೆಗೆ
ಇಲ್ಲಿ ಕಾರಂಜಿ ಕೆರೆ ಇತ್ತು ಎಂದು ಇತಿಹಾಸದಿಂದ ತಿಳಿದುಬರುತ್ತದೆ.
ಹೀಗೆ ಹರಿದು ಬಂದ ನೀರು ಚಿಲುಮೆಯಂತೆ ಉಕ್ಕುತ್ತಿದ್ದ ಪ್ರದೇಶದಲ್ಲಿ ಆಂಜನೇಯನ
ದೇವಾಲಯ ನಿರ್ಮಿಸಲಾಗಿದೆ. ಹೀಗಾಗೆ ಈ ದೇವಾಲಯ ಕಾರಂಜಿ ಆಂಜನೇಯ ದೇವಾಲಯ ಎಂದೇ
ಖ್ಯಾತವಾಗಿದೆ.
ಸರ್ಪಯಾಗ ಮಾಡಿದ ದೋಷ ನಿವಾರಣೆಗಾಗಿ ಇಲ್ಲಿಗೆ ಆಗಮಿಸಿ ತಪವನ್ನಾಚರಿಸಿದ್ದನೆಂದೂ
ಸ್ಥಳ ಪುರಾಣದಿಂದ
ದೇವಾಲಯದ ಮುಂದೆ ಅರಳಿಕಟ್ಟೆ ಇದ್ದು, ನಾಗರ ಕಲ್ಲುಗಳನ್ನು ಪ್ರತಿಷ್ಠಾಪಿಸಲಾಗಿದೆ.
ದೇವಾಲಯದ ಎದುರು ದೀಪಸ್ತಂಭವಿದೆ. ವಿಶಾಲ ಪ್ರಾಕಾರ ಇರುವ ದೇವಾಲಯದ ಗೋಪುರದಲ್ಲಿ
ಆಂಜನೇಯ, ಸೀತಾರಾಮರು ಹಾಗೂ ಗರುಡನ ಗಾರೆ ಶಿಲ್ಪಗಳಿವೆ.
ಪಕ್ಕದಲ್ಲಿ ಶ್ರೀ ಕೋದಂಡರಾಮಸ್ವಾಮಿ ದೇವಾಲಯವಿದೆ. ದೇವಾಲಯದ ಮುಂದೆ ಗರುಡಗಂಬವಿದೆ.
ದೇಗುಲದ ಮೇಲಿನ ಗೋಪುರದ ಸುತ್ತಲೂ ಗೂಡುಗಳಿದ್ದು, ಅವುಗಳಲ್ಲಿ ನಾರಾಯಣನ ವಿವಿಧ
ಲೀಲೆಗಳನ್ನು ಸಾರುವ ಗಾರೆ ಶಿಲ್ಪಗಳಿವೆ.
ಗರ್ಭಗೃಹದಲ್ಲಿ ಸುಂದರವಾದ ಸೀತಾರಾಮಲಕ್ಷ್ಮಣರ ವಿಗ್ರಹವಿದೆ. ನಿತ್ಯವೂ ಇಲ್ಲಿ
ಶ್ರೀವೈಷ್ಣವ ಸಂಪ್ರದಾಯದಂತೆ ಪೂಜಾ ವಿಧಿಗಳು ಜರುಗುತ್ತವೆ. ರಾಮನವಮಿ, ಹನುಮ
ಜಯಂತಿಯ ಕಾಲದಲ್ಲಿ ವಿಶೇಷ ಪೂಜೆ ಉತ್ಸವಗಳೂ ಜರುಗುತ್ತವೆ. | |||