ಮುಖಪುಟ /ನಮ್ಮ ದೇವಾಲಯಗಳು  

ಕನ್ನಂಬಾಡಿ ವೇಣುಗೋಪಾಲಸ್ವಾಮಿ ದೇವಾಲಯ

ನಿರ್ಮಾಣ ಹಂತದಲ್ಲಿರುವ ಬೃಹತ್ ಭವ್ಯ ದೇಗುಲ

k.R.S. Venugopalaswamy temple, ಕನ್ನಂಬಾಡಿ ವೇಣುಗೋಪಾಲಸ್ವಾಮಿ ದೇವಾಲಯ, our temples.in, T.M.Satish, Journalist, temples in and around Bangalore, temples of karnataka*ಟಿ.ಎಂ. ಸತೀಶ್

ಕರುನಾಡ ಶಾಲಿಮಾರ್ ಎಂದೇ ಖ್ಯಾತವಾದ ಬೃಂದಾವನ ಉದ್ಯಾನ ಹಾಗೂ ಕೃಷ್ಣರಾಜ ಸಾಗರ ಅಣೆಕಟ್ಟು ಕಟ್ಟಿದ ಬಳಿಕ ಈ ಪ್ರದೇಶ ಕೆ.ಆರ್.ಎಸ್. ಎಂದೇ ಖ್ಯಾತವಾಗಿದೆ. ಆದರೆ, ಅಣೆಕಟ್ಟು ಕಟ್ಟುವ ಮುನ್ನ ಇಲ್ಲಿ ಕನ್ನಂಬಾಡಿ ಎಂಬ ಊರಿತ್ತು. ಹಿಂದೆ ಇಲ್ಲಿ ಕಣ್ವ ಮಹರ್ಷಿಗಳು ಘೋರ ತಪವನ್ನಾಚರಿಸಿದ್ದ ಕಾರಣ ಈ ಪ್ರದೇಶ ಕಣ್ವಪುರಿ ಎಂದೂ ಕರೆಸಿಕೊಂಡಿತ್ತೆಂದು ತಿಳಿದುಬರುತ್ತದೆ.

ಅಣೆಕಟ್ಟೆಯ ಹಿನ್ನೀರಿನಲ್ಲಿ ಮುಳುಗಡೆಯಾದ ಪ್ರದೇಶದಲ್ಲಿ ಕಣ್ವೇಶ್ವರ, ಲಕ್ಷ್ಮೀದೇವಿ ಹಾಗೂ ವೇಣುಗೋಪಾಲಸ್ವಾಮಿ ದೇವಸ್ಥಾನಗಳಿದ್ದವು ಎಂದು ಇತಿಹಾಸ ಸಾರುತ್ತದೆ. ಈ ದೇವಾಲಯಗಳ ಪೈಕಿ ಕಣ್ವೇಶ್ವರ ದೇವಸ್ಥಾನ ತುಂಬಾ ಪ್ರಾಚೀನವಾದುದಾಗಿತ್ತು ಮತ್ತು ಇದನ್ನು ಕ್ರಿ.ಶ. 8ನೇ ಶತಮಾನದಲ್ಲಿ ರಾಷ್ಟ್ರಕೂಟರ ದೊರೆ ಒಂದನೇ ಕೃಷ್ಣ ಕಟ್ಟಿಸಿದ್ದನೆಂದೂ ಹೇಳಲಾಗುತ್ತದೆ. 

k.R.S. Venugopalaswamy temple, ಕನ್ನಂಬಾಡಿ ವೇಣುಗೋಪಾಲಸ್ವಾಮಿ ದೇವಾಲಯ, our temples.in, T.M.Satish, Journalist, temples in and around Bangalore, temples of karnatakaಈ ಪ್ರದೇಶದಲ್ಲಿದ್ದ ಮತ್ತೊಂದು ಭವ್ಯ ದೇವಾಲಯ ವೇಣುಗೋಪಾಲಸ್ವಾಮಿಯದು. ಈ  ದೇವಸ್ಥಾನವನ್ನು ಕ್ರಿ.ಶ.1300ರಲ್ಲಿ ತಲಕಾಡು ಗಂಗರು ನಿರ್ಮಿಸಿದ್ದರೆಂದೂ ಬಳಿಕ,  ವಿಜಯನಗರಸರು ಮತ್ತು ಮೈಸೂರು ಒಡೆಯರು ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿದ್ದರು ಎಂದೂ ಇತಿಹಾಸದಿಂದ ತಿಳಿದುಬರುತ್ತದೆ. ದೇವಾಲಯದ ಹೊರಬಿತ್ತಗಳಲ್ಲಿ ಅಮೃತಾಪುರದಲ್ಲಿರುವಂತೆ ಅರೆಗೋಪುರಗಳ ಕೆತ್ತನೆಗಳಿವೆ.

ಅಣೆಕಟ್ಟೆ ನಿರ್ಮಾಣವಾದ ನಂತರ ವೇಣುಗೋಪಾಲಸ್ವಾಮಿಯ ಸುಂದರ ದೇವಸ್ಥಾನ ಹಿನ್ನೀರಿನಲ್ಲಿ ಸಂಪೂರ್ಣ ಮುಳುಗಿ ಹೋಯಿತು. ರಾಜ್ಯ ಭೀಕರ ಬರ ಪರಿಸ್ಥಿತಿ ಎದುರಿಸಿ, ಕಾವೇರಿ ನದಿಯ ಪ್ರಮುಖ ಅಣೆಕಟ್ಟೆ ಕೆ.ಆರ್.ಎಸ್. ನಲ್ಲಿ ನೀರಿನ ಮಟ್ಟ ಕಡಿಮೆ ಆದಾಗ, ಮೊದಲಿಗೆ 1958ರಲ್ಲಿ ದೇವಾಲಯ ಗೋಚರಿಸಿತ್ತು. ಆದಾದ ಬಳಿಕ  2000ದ ಮೇ 24ರಂದು ದೇವಾಲಯ ಗೋಚರಿಸಿತ್ತು ಮತ್ತೆ 2004ರಲ್ಲಿ k.R.S. Venugopalaswamy temple, ಕನ್ನಂಬಾಡಿ ವೇಣುಗೋಪಾಲಸ್ವಾಮಿ ದೇವಾಲಯ, our temples.in, T.M.Satish, Journalist, temples in and around Bangalore, temples of karnatakaಈ ದೇವಾಲಯ ಸಂಪೂರ್ಣ ಗೋಚರವಾಯಿತು. ಮುಳುಗಡೆಯಾಗಿದ್ದ ದೇವಾಲಯ ದರ್ಶನಕ್ಕಾಗಿ ಲಕ್ಷಾಂತರ ಜನರು ಮುಗಿಬಿದ್ದಿದ್ದರು. ದ್ರಾವಿಡ ಶೈಲಿಯಲ್ಲಿದ್ದ ಈ ದೇಗುಲದ ಸುತ್ತ ಎತ್ತರವಾದ ಆವರಣಗೋಡೆಗಳು, ದೊಡ್ಡ ಪ್ರಾಕಾರ ಎಲ್ಲವೂ ಹಿಂದೆ ಇಲ್ಲಿ ಊರಿತ್ತು ಎಂಬುದನ್ನು ಸಾಕ್ಷೀಕರಿಸಿದವು.

ಇಷ್ಟು ಭವ್ಯ ದೇವಾಲಯ ಮುಳುಗಿ ಹೋಗಿರುವುದನ್ನು ನೋಡಿದ ಉದ್ಯಮಿ ಹರಿ ಖೋಡೆ ಅವರು ದೇವಾಲಯವನ್ನು ಜಲಾಶಯ ಪ್ರದೇಶದಿಂದ ಹೊರಕ್ಕೆ ತೆಗೆದು ಹಿನ್ನೀರಿನ ದಡದಲ್ಲಿ ಪುನರ್ ನಿರ್ಮಿಸಲು ಮುಂದಾದರು. ಈಗ ದೇವಾಲಯ ಬಹುತೇಕ ಮೂಲ ಸ್ವರೂಪದಲ್ಲೇ ಪುನರ್ ನಿರ್ಮಾಣವಾಗಿದ್ದು, ದೇವರ ಪ್ರತಿಷ್ಠಾಪನೆಯಷ್ಟೇ ಆಗಬೇಕಾಗಿದೆ. ದೇವಾಲಯ ಮುಂದೆ ಮುಖ ಮಂಟಪವಿದ್ದು, ದುಂಡಾಕಾರದ ಕಂಬಗಳಿಂದ ನಿರ್ಮಿಸಲಾಗಿದೆ. ದೇವಾಲಯದ ಪ್ರಧಾನ ದ್ವಾರದ ಎಡ ಬಲದಲ್ಲಿ ಸಹ ದ್ವಾರಪಾಲಕರ ಬದಲಾಗಿ ಅರೆಗೋಪುರಗಳನ್ನೇ ಕೆತ್ತಲಾಗಿದೆ.

ಈಗ ದೇವಾಲಯ ಅತ್ಯಂತ ಸುಂದರವಾಗಿ ಪುನರ್ ನಿರ್ಮಾಣಗೊಂಡಿದೆ. ದೇವಾಲಯದ ಪ್ರವೇಶದಲ್ಲಿ ಸುಂದರ ಮಂಟಪವಿದೆ. ಎದುರು ಗರುಡಗಂಬವಿದೆ. ತ್ರಿಕೂಟಾಚಲ ದೇವಾಲಯವು ಸುಖನಾಸಿ, ಮಂಟಪ, ಮಹಾಮಂಟಪಗಳಿಂದ ಕೂಡಿದೆ. ಹಿಂದೆ ಈ ದೇಗುಲ 18 ಕಂಬಗಳಿಂದ ಕೂಡಿ ಸುಭದ್ರವಾಗಿತ್ತು. ಈಗ ಹೆಚ್ಚುವರಿ ಕಂಬಗಳನ್ನೂ ಸೇರಿಸಿ ಬೃಹತ್ ದೇವಾಲಯ ನಿರ್ಮಿಸಲಾಗಿದೆ. ಪ್ರತಿಷ್ಠಾಪನೆಗೆ ಮುನ್ನವೇ ಈ k.R.S. Venugopalaswamy temple, ಕನ್ನಂಬಾಡಿ ವೇಣುಗೋಪಾಲಸ್ವಾಮಿ ದೇವಾಲಯ, our temples.in, T.M.Satish, Journalist, temples in and around Bangalore, temples of karnatakaದೇವಾಲಯ ನೋಡಲು ಈಗಲೂ ವಾರಾಂತ್ಯದಲ್ಲಿ ಹಾಗೂ ರಜಾ ದಿನಗಳಲ್ಲಿ ನೂರಾರು ಜನ ಆಗಮಿಸುತ್ತಾರೆ.

ಕಣ್ಣು ಹಾಯಿಸಿದಷ್ಟು ದೂರದವರೆಗೆ ಕಾಣುವ ಕಾವೇರಿ ನದಿಯ ದಂಡೆಯಲ್ಲೇ ಇರುವ ಈ ಭವ್ಯ ದೇವಾಲಯ ನೋಡಿ ನಿಬ್ಬೆರಗಾಗುತ್ತಾರೆ.  ಮಳೆಗಾಲದಲ್ಲಿ ಸಾಗರದ ಅಲೆಯಂತೆ ದಡಕ್ಕೆ ಅಪ್ಪಳಿಸುವ ಕಾವೇರಿ ನದಿಯ ನೀರಿನ ಅಬ್ಬರ, ಕೆರೆಯ ಮೇಲೆ ಬೀಸುವ ಕುಳಿರ್ಗಾಳಿ, ಸೂರ್ಯಾಸ್ತದ ಸಂದರ್ಭದಲ್ಲಿ ನದಿಯ ನೀರಿನ ಬೀಳುವ ಬಿಂಬ ಸುತ್ತಲೂ ಇರುವ ಹಚ್ಚ ಹಸಿರು ರಮಣೀಯವಾಗಿದೆ.

k.R.S. Venugopalaswamy temple, ಕನ್ನಂಬಾಡಿ ವೇಣುಗೋಪಾಲಸ್ವಾಮಿ ದೇವಾಲಯದೇವಾಲಯದ ಪ್ರಧಾನ ದ್ವಾರ ದಾಟಿ ಒಳ ಹೋದರೆ ಸುತ್ತಲೂ ಮಂಟಪಗಳಿವೆ. ಮಂಟಪದಲ್ಲಿ ಪರಿವಾರ ದೇವತೆಗಳ ಪುಟ್ಟ ಪುಟ್ಟ ಗುಡಿಗಳಿವೆ. ಈ ಎಲ್ಲ ಗುಡಿಗಳಲ್ಲೂ ದೇವತಾಮೂರ್ತಿಗಳನ್ನು ಪ್ರತಿಷ್ಠಾಪಿಸಲು ದೇವರ ವಿಗ್ರಹಗಳನ್ನು ಸಿದ್ಧಪಡಿಸಿ ಭತ್ತದ ತೊಟ್ಟಿಗಳಲ್ಲಿಡಲಾಗಿದೆ. ದೇವಾಲಯದಲ್ಲಿ ದೇವತಾಮೂರ್ತಿಗಳ ಪ್ರತಿಷ್ಠಾಪನೆ ಆದರೆ ಇದೊಂದು ಜನಪ್ರಿಯ ಯಾತ್ರಾಸ್ಥಳ ಆಗುವುದರಲ್ಲಿ ಸಂದೇಹವಿಲ್ಲ. ಕೊನೆಯ ಚಿತ್ರ ನೀರಿನಲ್ಲಿ ಮುಳುಗಡೆ ಆಗಿದ್ದ ದೇವಾಲಯ

ಮುಖಪುಟ /ನಮ್ಮದೇವಾಲಯ