|
ಬೆಂಗಳೂರಿನ ಕಾಡುಮಲ್ಲೇಶ್ವರ *ಟಿ.ಎಂ.ಸತೀಶ್
ಐತಿಹ್ಯ :
ಬಹಳ ಹಿಂದೆ ಈ ಪ್ರದೇಶದಲ್ಲಿ ದಟ್ಟವಾದ ಕಾಡಿತ್ತು. ಮಧ್ಯದಲ್ಲಿ ದೊಡ್ಡ ಗುಡ್ಡವೂ
ಇತ್ತು. ಗುಡ್ಡ ಹತ್ತಿ ನೋಡಿದರೆ ಸುತ್ತಲ ಪ್ರದೇಶ ಕಾಣುತ್ತಿತ್ತು. ಈಗಿನ ಸ್ಯಾಂಕಿ
ಕೆರೆಯಿಂದ ಸ್ವಲ್ಪ ದೂರದಲ್ಲಿ ಮಲ್ಲಪುರ ಎಂಬ ಕುಗ್ರಾಮವೂ ಇತ್ತು. ಬೆಂಗಳೂರಿಗೆ
ಬರುವ ಮತ್ತು ಹೋಗುವ ಪ್ರಯಾಣಿಕರು ರಾತ್ರಿಯ ವೇಳೆ ಈ ಗುಡ್ಡದ ಮೇಲೆ ಬೀಡು
ಬಿಡುತ್ತಿದ್ದರು. 500 ವರ್ಷಗಳ ಹಿಂದೆ ಪ್ರಯಾಣಿಕರ ತಂಡವೊಂದು ಸಂಜೆ ಇಲ್ಲಿ
ಪ್ರಯಾಣಿಕರು ಈ ವಿಷಯವನ್ನು ಮಲ್ಲಪುರದ ಜನರಿಗೆ ತಿಳಿಸಿದರು. ಊರ ಜನ ಶಿವಲಿಂಗವಿದ್ದ ಜಾಗದಲ್ಲಿ ಮಂಟಪ ಕಟ್ಟಿ ದೇವಾಲಯ ನಿರ್ಮಿಸಿದರು ಮಲಪುರದ ಮಲ್ಲಿಕಾರ್ಜುನ ಎಂದು ಕರೆದರು. ಜಾನಪದರು ಇದನ್ನು ಮಲ್ಲೇಶ್ವರ ಎಂದರು. ಕಾಡಿನ ಪ್ರದೇಶದಲ್ಲಿ ದೇವಾಲಯವಿದ್ದ ಕಾರಣ ಇದು ಕಾಡು ಮಲ್ಲೇಶ್ವರವಾಯ್ತು. ಮುಂದೆ ಈ ದೇವಾಲಯವನ್ನು ಕೊಡುಗೈ ದೊರೆ ರಾಯಬಹದ್ದೂರ್ ಎಲೆ ಮಲ್ಲಪ್ಪ ಶೆಟ್ಟರು 1898ರಲ್ಲಿ ಜೀರ್ಣೋದ್ಧಾರ ಮಾಡಿದರು.
ಈಗ ಗುಡ್ಡದ ಮೇಲಿರುವ ಈ ದೇವಾಲಯಕ್ಕೆ
40ಮೆಟ್ಟಿಲು, ರಾಯಗೋಪುರ, ವಿಶಾಲವಾದ ದೇವಾಲಯ ನಿರ್ಮಿಸಲಾಗಿದೆ.
ಮಲ್ಲಿಕಾರ್ಜುನ ದೇವರ ಬಲಭಾಗದಲ್ಲಿ ಗಣೇಶ ಹಾಗೂ ಕಾಶಿ ವಿಶ್ವನಾಥನನ್ನು ಪ್ರತಿಷ್ಠಾಪಿಸಲಾಗಿದೆ. ಕಾಡು ಮಲ್ಲೇಶನ ಸನ್ನಿಧಾನದ ಮೂಲ ವಿಗ್ರಹದ ಎಡಭಾಗದಲ್ಲಿಯೂ ಎರಡು ಗರ್ಭಗೃಹವಿದ್ದು ಅಲ್ಲಿ ಭ್ರಮರಾಂಬಾ ಹಾಗೂ ಮಹಾವಿಷ್ಣು ಮೂರ್ತಿ ಇದೆ. ಎರಡೂ ಕೈಗಳಲ್ಲಿ ಕಮಲ ಹಿಡಿದು, ಅಭಯ ಮತ್ತು ವರದಹಸ್ತೆಯಾಗಿರುವ ಭ್ರಮರಾಂಭಾ ದೇವಿಯ ವಿಗ್ರಹ ಸುಂದರವಾಗಿದೆ. ಅಮ್ಮನವರ ಮೂರ್ತಿಯ ಮುಂಭಾಗದಲ್ಲಿ ಶ್ರೀಚಕ್ರವಿದೆ. ಶ್ರೀಚಕ್ರ ಸಹಿತ, ಭ್ರಮರಾಂಭೆಯನ್ನು ಪೂಜಿಸಿದರೆ ಸಕಲ ಅಭಿಷ್ಟಗಳು ಈಡೇರುತ್ತವೆ ಎಂಬುದು ಭಕ್ತರ ನಂಬಿಕೆ. ಪ್ರತಿ ಶುಕ್ರವಾರ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ದೇವಿಗೆ ಕುಂಕುಮಾರ್ಚನೆ ಮಾಡಿಸಲು ಭಕ್ತರು ಸಾಲುಗಟ್ಟಿ ನಿಲ್ಲುತ್ತಾರೆ. ನವರಾತ್ರಿಯ ಸಮಯದಲ್ಲಿ 9 ದಿನವೂ ದೇವಿಗೆ ವಿಶೇಷ ಪೂಜೆ ನಡೆಯುತ್ತದೆ.
ದೇವಾಲಯದ ಪ್ರಾಕಾರದಲ್ಲಿ ದಕ್ಷಿಣಾಮೂರ್ತಿ, ಸುಬ್ರಹ್ಮಣ್ಯ ಹಾಗೂ ಚಂಡಿಕೇಶ್ವರ, ನವಗ್ರಹ ಗುಡಿಗಳೂ ಇವೆ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in |
![]() |
||