ಮುಖಪುಟ /ನಮ್ಮ ದೇವಾಲಯಗಳು  

ಅಘೋರೇಶ್ವರನ ನೆಲೆವೀಡು ಇಕ್ಕೇರಿ
ಕೆಳದಿಯ ಅರಸರ ರಾಜಧಾನಿ..

* ಟಿ.ಎಂ.ಸತೀಶ್

Ikkeri Temple, ಇಕ್ಕೇರಿ ದೇವಾಲಯ, jyotirlinga, ಜ್ಯೋತಿರ್ಲಿಂಗ, ಕನ್ನಡರತ್ನ.ಕಾಂ, ದೇವಾಲಯಗಳ ಮಾಹಿತಿ, ಕರ್ನಾಟಕದ ದೇವಾಲಯಗಳು, kannadaratna.com,  ourtemples.in,ಇಕ್ಕೇರಿ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಒಂದು ಪುಟ್ಟ ಗ್ರಾಮ. ಊರು ಚಿಕ್ಕದಾದರೂ ಇದರ ಕೀರ್ತಿ ಮಾತ್ರ ದೊಡ್ಡದು. ಇಕ್ಕೇರಿ 16 ಮತ್ತು 17ನೇ ಶತಮಾನದಲ್ಲಿ ಕೆಳದಿ ಅರಸರ ರಾಜಧಾನಿಯಾಗಿ ವೈಭವದಿಂದ ಮೆರೆದದ್ದು ಈಗ ಇತಿಹಾಸ.

ಸಹ್ಯಾದ್ರಿಯ ಸೆರಗಿನಲ್ಲಿ, ಸುಂದರ ಸಸ್ಯರಾಶಿಯ ನಡುವಿನಲ್ಲಿರುವ ಈ ಗ್ರಾಮ, ವೀರಭದ್ರನಾಯಕನ ಆಡಳಿತ ಕಾಲದಲ್ಲಿ ವಿಜಯನಗರ ಅರಸರ ಅಧೀನದಿಂದ ಬಿಡುಗಡೆಗೊಂಡು ಸ್ವತಂತ್ರ ಸಂಸ್ಥಾನವಾಯಿತು.

ನಂತರದ ಕಾಲದಲ್ಲಿ ಇಕ್ಕೇರಿ ರಾಜಧಾನಿಯ ಪಟ್ಟ ಕಳೆದುಕೊಂಡಿತು. ನಾಯಕರು ತಮ್ಮ ರಾಜಧಾನಿಯನ್ನು ಬಿದನೂರಿಗೆ ವರ್ಗಾಯಿಸಿದರು. ಆದರೂ ಇಕ್ಕೇರಿಗೆ ಇಂದಿಗೂ ಕೆಳದಿ ಅರಸರ ರಾಜಧಾನಿ ಎಂಬ ಹೆಮ್ಮೆಯಿದೆ.

ಇಕ್ಕೇರಿಯ ಸುತ್ತಲೂ ಮೂರು ಸುತ್ತಿನ ವಿಶಾಲವಾದ ಕೋಟೆಯಿತ್ತು ಎಂಬುದನ್ನು ಈಗಲೂ ಅಳಿದುಳಿದ ಅವಶೇಷಗಳು ಸಾರುತ್ತವೆ. ಕೋಟೆಯಲ್ಲಿ ಅರಮನೆ ಮತ್ತು ಭವ್ಯ ಕಟ್ಟಡಗಳಿದ್ದುವು ಎಂಬುದಕ್ಕೂ ಕುರುಹುಗಳಿವೆ.

ಇಂದು ಇಕ್ಕೇರಿಯ ವೈಭವ ಕಾಣಲು ಸಾಧ್ಯವಿಲ್ಲವಾದರೂ, ರಾಜರಾಳ್ವಿಕೆಯ ಗತವೈಭವದ ಕುರುಹಾಗಿ ಅಘೋರೇಶ್ವರ ದೇವಾಲಯ ಉಳಿದುಕೊಂಡಿದೆ.

ಸುಂದರವೂ, ವಿಶಾಲವೂ ಆದ ಪುರಾತನ ದೇವಾಲಯದಲ್ಲಿ ಅಘೋರೇಶ್ವರನ ಸುಂದರ ಮೂರ್ತಿಯಿದೆ.

ಕೆಳದಿಯನ್ನಾಳಿದ ದೊಡ್ಡ ಸಂಕಣ್ಣನಾಯಕನ ಕಾಲದಲ್ಲಿ ಇಲ್ಲಿ ಅಘೋರೇಶ್ವರನ ದೊಡ್ಡ ದೇವಾಲಯವನ್ನು ಕಟ್ಟಿದನೆನ್ನುತ್ತದೆ ಇತಿಹಾಸ. ಮಲೆನಾಡಿನ ಜನ ಈ ದೇವರ ಬಗ್ಗೆ ಭಕಿಯಿಂದ ನಡೆದುಕೊಳ್ಳುತ್ತಾರೆ.  ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ.  ಶಿಲ್ಪಕಲಾ ದೃಷ್ಟಿಯಿಂದಲೂ ದೇವಾಲಯ ಭವ್ಯವಾಗಿದೆ.  ಸೂಕ್ಷ್ಮ ಕೆತ್ತನೆಯಿಂದ ಕೂಡಿದ ದೇವಾಲಯ ಅಧ್ಯಯನಿಗಳಿಗೆ ಆಕರವಾಗಿದೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮ ದೇವಾಲಯಗಳು