ಮುಖಪುಟ /ನಮ್ಮದೇವಾಲಯಗಳು 

ಪ್ರಕೃತಿಯ ಮಡಿಲ ಸೌಂದರ್ಯ ಲಹರಿ ಅನ್ನಪೂರ್ಣೆಯ ಹೊರನಾಡು
ಆಸ್ತಿಕರಿಗೆ ಆದಿಶಕ್ತ್ಯಾತ್ಮಿಕೆಯ ನೆಲೆವೀಡಾದ ಹೊರನಾಡು,
ನಾಸ್ತಿಕರಿಗೆ ಪ್ರಕೃತಿ ಸೌಂದರ್ಯದ ಸಿರಿಬೀಡು

*ಎನ್. ಶೋಭಾ

Horanadu Temple enteranceಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣವಲ್ಲಭೆ |
್ಞಾನವೈರಾಗ್ಯ ಸಿಧ್ಯರ್ಥಂ ಭಿಕ್ಷಾಂದೇಹೀಚ ಪಾರ್ವತಿ||

ಭವತಿ ಭಿಕ್ಷಾಂ ದೇಹಿ ಎಂದು ಕೈನೀಡಿ ಬೇಡಿದ ಕೈಲಾಸನಾಥನಾದ ಶಂಕರನಿಗೇ ಭಿಕ್ಷೆ ನೀಡಿದ ತಾಯಿ ಅನ್ನಪೂರ್ಣೇಶ್ವರಿಯನ್ನು ಸ್ತುತಿಸುವುದೇ ಹೀಗೆ. ಇಂತಹ ಮಂಗಳಮಯಳಾದ ತಾಯಿಯು ಕರ್ನಾಟಕದ ನಿತ್ಯಹರಿದ್ವರ್ಣದ ಕಾನನದ ಗಿರಿ ಪ್ರದೇಶವಾದ ಮಲೆನಾಡ ಮಡಿಲ ಸೌಂದರ್ಯ ಲಹರಿ ಹೊರನಾಡಿನಲ್ಲಿ ನೆಲೆಸಿದ್ದಾಳೆ.

ಭಕ್ತಿಭಾವ ಉಕ್ಕಿಸುವ ಆರು ಅಡಿ ಎತ್ತರದ ಸುಂದರವಾದ ವಿಗ್ರಹ ರೂಪದಲ್ಲಿ ಹೊರನಾಡಿನಲ್ಲಿ ನೆಲೆ ನಿಂತಿರುವ ಆದಿಶಕ್ತ್ಯಾತ್ಮಿಕೆಯಾದ ತಾಯಿ ಅನ್ನಪೂರ್ಣೆಶ್ವರಿಯನ್ನು ನೋಡುವುದೇ ಒಂದು ಸೌಭಾಗ್ಯ. ಹೀಗಾಗೆ ಕವಿ.. ಕಣ್ಣು ನೂರು ಸಾಲದು ಅನ್ನಪೂರ್ಣೆಯ ನೋಡಲು, ನಾಲಿಗೆ ಸಾವಿರ ಸಾಲದು.. ಈಶ್ವರಿ ನಿನ್ನನು ಹೊಗಳು... ಎಂದು ಹಾಡಿರುವುದು.

annapurneswariಚಿಕ್ಕಮಗಳೂರು ಜಿಲ್ಲೆಯ ಸಮೃದ್ಧ ಸಸ್ಯ ಶ್ಯಾಮಲೆಯ ಮಡಿಲಲ್ಲಿ ಝುಳುಝುಳು ಹರಿವ ಜಲಲ ಜಲಧಾರೆಗಳ ನಡುವೆ ಅನಂತ ಪ್ರಕೃತಿಯ ಅನನ್ಯತೆಯಿಂದ ಮನಸ್ಸಿಗೆ ಮುದನೀಡುವ ಸುಂದರ ಘಟ್ಟಪ್ರದೇಶದಲ್ಲಿ ಇರುವ ಪವಿತ್ರ ಪುಣಕ್ಷೇತ್ರದಲ್ಲಿ ತಾಯಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು ೧೯೭೩ ರಲ್ಲಿ . ಶಂಖ, ಚಕ್ರ, ಶ್ರೀಚಕ್ರ ಹಿಡಿದ ಚತುರ್ಭುಜೆಯಾದ ಈ ತಾಯಿಯ ಮೂರ್ತಿಯನ್ನು ತಮಿಳುನಾಡಿನ ಶಂಕೋಟೆಯಿಂದ ತಂದು ಪ್ರತಿಷ್ಠಾಪಿಸಲಾಗಿದೆ. ಆರು ಅಡಿ ಎತ್ತರದ ವಿಗ್ರಹದ ಕೆಳಭಾಗದಲ್ಲಿ ಮೂಲದೇವಿಯ ಮೂರ್ತಿ ಇದೆ. ಇಲ್ಲಿ ನಿತ್ಯವೂ ಬೆಳಗ್ಗೆ ಏಳರಿಂದ ರಾತ್ರಿ ಒಂಭತ್ತರವರೆಗೂ ದೇವಿಯ ದರುಶನ ಪಡೆಯಬಹುದು.

ದೇವಿಯ ಪಾದದ ಬಳಿಯೇ ನಿಂತು ಅತಿ ಹತ್ತಿರದಿಂದ ತಾಯಿ ಅನ್ನಪೂರ್ಣೆಯ ದರ್ಶನ ಪಡೆವ ಅವಕಾಶವೂ ಇಲ್ಲುಂಟು. ಹೊರನಾಡಿನ ದೊಡ್ಡಮನೆ ಪಾಳೆಗಾರ ಮನೆತನದ ಕುಲದೇವತೆ ಎಂದೂ ಹೇಳಲಾಗುವ ಈ ತಾಯಿ ಹೊರನಾಡಿನ ಸುತ್ತಮುತ್ತಲ ಪ್ರದೇಶದ ಜನರ ಅದೇವತೆ. ಆರಾಧ್ಯ ದೇವತೆ. ಹೀಗಾಗೇ ಇಲ್ಲಿನ ರೈತರು ತಾವು ಬೆಳೆದ ಮೊದಲ ಫಸಲನ್ನು ತಾಯಿಯ ಸನ್ನಿಗೆ ಒಪ್ಪಿಸಿ ತಮ್ಮನ್ನು ರಕ್ಷಿಸೆಂದು ಕೋರುತ್ತಾರೆ.

ಉಚಿತ ಊಟ- ವಸತಿ : ರಾಜ್ಯದ ರಾಜಧಾನಿ ಬೆಂಗಳೂರಿನಿಂದ ೩೩೦ ಕಿಮೀ ದೂರದಲ್ಲಿರುವ ಹೊರನಾಡಿಗೆ ಹೋಗಲು ನೇರ ಬಸ್ ಸೌಕರ್ಯವಿದೆ. ಹೊರನಾಡಿನಿಂದ ಶಾರದಾಪೀಠ- ವಿದ್ಯಾಶಂಕರ ದೇವಾಲಯಗಳಿರುವ ಶೃಂಗೇರಿಗೆ ಕೇವಲ ೭೫ ಕಿಮೀ. ಕರ್ನಾಟಕದ ಕಾಫಿಯ ಕಣಜ ಚಿಕ್ಕಮಗಳೂರಿನಿಂದ ೧೦೦ ಕಿಮೀ. 

Anapurneಅನ್ನದೇವಿಯ ತಾಣವಾದ ಇಲ್ಲಿ ಊಟ -ವಸತಿಯ ಸಮಸ್ಯೆ ಇಲ್ಲ. ಆದಿ ಶಕ್ತ್ಯಾತ್ಮಿಕೆ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ ಆಡಳಿತ ಮಂಡಳಿಯೇ ಊಟ -ವಸತಿಯ ವ್ಯವಸ್ಥೆ ಮಾಡಿದೆ. ಇಲ್ಲಿ ಸುಸಜ್ಜಿತವಾದ ಪಾಕಶಾಲೆ, ವಸತಿ ಗೃಹಗಳೂ ಇವೆ. ಭಕ್ತಾದಿಗಳಿಗೆ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿಯ ಭೋಜನದ ವ್ಯವಸ್ಥೆ ಇದೆ. ಒಪ್ಪೊತ್ತು ಊಟ ಮಾಡುವವರಿಗೆ ರಾತ್ರಿ ಫಲಹಾರದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ.

ತಾಯಿ ಆದಿ ಶಕ್ತ್ಯಾ ತ್ಮಕೆ ಶ್ರೀಅನ್ನಪೂರ್ಣೇಶ್ವರಿ ಅಮ್ಮನವರ ದೇವಾಲಯದ ಧರ್ಮಕರ್ತರಾದ ಜಿ.ಭೀಮೇಶ್ವರ ಜೋಶಿ, ಅವರು ದೇವಾಲಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ದೇವಾಲಯದ ವತಿಯಿಂದ ಉಚಿತ ಶಿಕ್ಷಣವನ್ನೂ ನೀಡುತ್ತಿದ್ದಾರೆ. ಮೂತ್ರಕೋಶ ತೊಂದರೆ, ಹೃದ್ರೋಗ ಮೊದಲಾದ ಕಾಯಿಲೆಯಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಧನ್ವಂತರಿ ಯೋಜನೆಯಡಿ ಆರ್ಥಿಕ ನೆರವನ್ನೂ ದೇವಾಲಯದಿಂದ ನೀಡಲಾಗುತ್ತದೆ. ಸಪ್ತಪದಿ ಯೋಜನೆಯಡಿ ಪ್ರತಿವರ್ಷ ದೇವಿಯ ಸನ್ನಿಯಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವೂ ಜರುಗುತ್ತದೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯಗಳು