ಮುಖಪುಟ /ನಮ್ಮದೇವಾಲಯಗಳು   

ಹೇಮಕೂಟದ ಕಡಲೆಕಾಳು, ಸಾಸಿವೆಕಾಳು ಗಣಪ

*ಚಿತ್ರ ಲೇಖನ: ಪಿ.ಸತ್ಯನಾರಾಯಣ

Hemakuta kadalekalu Ganapathi, Sasive kalu Ganapati, ಹೇಮಕೂಟ ಕಡಲೆಕಾಳು, ಸಾಸಿವೆ ಕಾಳು ಗಣಪತಿಗಣಪತಿ ಬಪ್ಪ ಮೋರಿಯ, ನಮ್ಮಯ ಮನೆಗೆ ನೀ ಬಾರಯ್ಯ ಎಂದು ಪ್ರತಿವರ್ಷ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ ದಿನ ಗಣೇಶನನ್ನು ಪ್ರತಿಷ್ಠಾಪಿಸಿ, ಪೂಜಿಸಿ ನಂತರ ವಿಸರ್ಜನೆ ಮಾಡಿ ಮುಂದಿನ ವರ್ಷ ಬಾರಯ್ಯ ಎಂದು ಕಳಿಸುತ್ತೇವೆ.

ಆದರೆ ಹಂಪಿಯ ಹೇಮಕೋಟ ಬೆಟ್ಟದಲ್ಲಿರುವ ಸಾಸಿವೆ ಕಾಳು, ಕಡಲೆಕಾಳು ಗಣೇಶಮೂರ್ತಿಗಳು ಮಾತ್ರ ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತಾ ಅಲ್ಲೆ ಕುಳಿತಿವೆ. ಸಾಸಿವೆಕಾಳಿಗೂ ಹಾಗೂ ಕಡಲೆಕಾಳಿಗೂ ಗಾತ್ರದಲ್ಲಿ ಎಷ್ಟು ವ್ಯಾತ್ಯಾಸವಿದೆಯೊ ಅಷ್ಟೆ ವ್ಯಾತ್ಯಾಸ ಈ ಗಣೇಶ ಮೂರ್ತಿಗಳಿಗೆ ಇದೆ. ಇನ್ನೂಂದು ಕಲ್ಪನೆಯ ಪ್ರಕಾರ ಸಾಸುವೆಕಾಳು ಹಾಗೂ ಕಡಲೆಕಾಳು ವ್ಯಾಪಾರಿಗಳು ಈ ವಿಗ್ರಹಗಳನ್ನು ಕಟ್ಟಿಸಿರುವುದರಿಂದ ಈ ಅಣುಕು ಹೆಸರುಗಳು ಬಂದಿರುಬಹುದು ಎಂದು ಹೇಳಲಾಗುತ್ತದೆ.

ಏಕಶಿಲೆಯ ಚರ್ತುಭುಜ ಸಾಸಿವೆ ಗಣೇಶನನ್ನು ಹೇಮಕೋಟದ ಈಶಾನ್ಯ ದಿಕ್ಕಿನ ಒಂದು ಸ್ತಂಭಗಳ ಮಂಟಪದಲ್ಲಿ ಕಾಣಬಹುದು. ೨.೪ಮೀಟರ್ ಎತ್ತರದ ಅರ್ಧ ಪದ್ಮಸಾನದಲ್ಲಿ ಕುಳಿತಿರುವ ಈ ಮೂರ್ತಿಯು ದಂತ, ಅಂಕುಶ, ಮೋದಕ ಪಾತ್ರೆಗಳನ್ನು ಧರಿಸಿದ್ದಾನೆ. ಈ ವಿನಾಯಕ ಮಂಟಪವನ್ನು ಹೇಮಕೂಟ ಗುಡ್ಡದ ಮೇಲೆ ಕ್ರಿ.ಶ೧೫೦೬ರಲ್ಲಿ ಸಾಳವ ವಂಶ ಇಮ್ಮಡಿ ನರಸಿಂಹನ ನೆನಪಿಗಾಗಿ ತಿರುಪತಿ ಸಮೀಪದ ಚಂದ್ರಗಿರಿಯ ಒಬ್ಬ ವ್ಯಾಪಾರಿ ನಿರ್ಮಸಿದನೆಂದು ಶಾಸನಗಳಿಂದ ತಿಳಿದುಬರುತ್ತದೆ.

Hemakuta kadalekalu Ganapathi, Sasive kalu Ganapati, ಹೇಮಕೂಟ ಕಡಲೆಕಾಳು, ಸಾಸಿವೆ ಕಾಳು ಗಣಪತಿಭಗ್ನಗೊಂಡ ಕಡಲೆಕಾಳು ಗಣೇಶ ವಿಗ್ರಹದ ಉದರ ಭಾಗವು ನೋಡಲು ಕಡಲೆಕಾಳಿನಂತೆ ಕಾಣುವುದರಿಂದ ಸ್ಥಳೀಯವಾಗಿ ಈ ಏಕಶಿಲೆ ವಿಗ್ರಹವನ್ನು ಕಡಲೆಕಾಳು ಗಣಪತಿ ಎಂದು ಕರೆಯಲಾಗುತ್ತದೆ.

ಹೇಮಕೂಟ ಈಶಾನ್ಯ ಅಂಚಿನಲ್ಲಿರುವ ೪.೫ ಮೀಟರ್ ಚರ್ತುಭುಜ ಆಸೀನ ಗಣಪತಿಯು ದಂತ, ಅಂಕುಶ, ಪಾಶ, ಮೋದಕ ಹಸ್ತಗಳನ್ನು ಒಳಗೊಂಡಿದೆ. ಈ ಗಣೇಶ ಕುಳಿತಿರುವ ಮಂಟಪ ಅತ್ಯಂತ ಸುಂದರವಾಗಿದೆ. ಮಂಟಪದ ಕಂಬಗಳು ಸುಂದರಮೂರ್ತಿಗಳಿಂದ ಅಲಂಕರಿಸಲ್ಪಟ್ಟಿದೆ. ಹಂಪಿಯ ಮೊದಮೊದಲು ನಿರ್ಮಾಣಗೊಂಡ ಮಂಟಪಗಳಲ್ಲಿ ಒಂದಾದ ಇಲ್ಲಿಂದ ವಿರೂಪಾಕ್ಷಪುರುದ ಮನಮೋಹಕ ನೋಟಗಳನ್ನು ನೋಡಬಹುದು. ಈ ಮಂಟಪವನ್ನು ನೋಡಿದ ಅನೇಕ ಕಲಾವಿಮರ್ಶಕರು ವಾಸ್ತುಶಿಲ್ಪಿಗಳು ಅದರ ರಚನೆಗೆ ವಿಸ್ಮಯಗೊಂಡಿದ್ದಾರೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

 

ಮುಖಪುಟ /ನಮ್ಮದೇವಾಲಯಗಳು