|
ಮುಖಪುಟ
/ನಮ್ಮ
ದೇವಾಲಯಗಳು
ಹೆಬ್ಬೂರು ಕಾಮಾಕ್ಷಿ ದೇವಾಲಯ *ಟಿ.ಎಂ.ಸತೀಶ್
ಈ ಊರಿನಲ್ಲಿ 16 -17ನೇ ಶತಮಾನದಲ್ಲಿ ನಿರ್ಮಿಸಲಾದ ಹಲವು ಪುರಾತನ ದೇವಾಲಯವಿದೆ. ಶೃಂಗೇರಿ ದಕ್ಷಿಣಾಮ್ನೇಯ ಶಂಕರ ಮಠಕ್ಕೆ ಸೇರಿದ ಕೋದಂಡಾಶ್ರಮವಿದೆ. ಈ ಕ್ಷೇತ್ರದಲ್ಲಿ ಮಹಾಮೇರು ಶ್ರೀಚಕ್ರದೇವಾಲಯ ಅಥವಾ ಕಾಮಾಕ್ಷಿ ದೇಗುಲವಿದೆ. ಆಮೆಯಾಕಾರದ ಅಂದರೆ ಕೂರ್ಮಪೀಠದ ಮೇಲೆ ಶ್ರೀಚಕ್ರದ ಆಕಾರದಲ್ಲೇ ದೇವಾಲಯ ನಿರ್ಮಿಸಲಾಗಿದೆ. ಪ್ರವೇಶದ್ವಾರದ ಬಳಿ ಇರುವ ಮೆಟ್ಟಿಲುಗಳ ಮೇಲೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ ಎಂದು ಬರೆಯಲಾಗಿದ್ದು, ದೇವಾಲಯಕ್ಕೆ ಬರುವ ಭಕ್ತರು ಅರಿಷಡ್ವರ್ಗಗಳನ್ನು ಮೆಟ್ಟಿ ನಿಲ್ಲಬೇಕು ಎಂಬ ಸಂದೇಶವನ್ನು ಸಾರುತ್ತದೆ.
ದೇವಾಲಯ ಸಂಪೂರ್ಣವಾಗಿ ಶ್ರೀಚಕ್ರದ ರೂಪದಲ್ಲಿದೆ. ವಿಶಾಲವಾದ ಪ್ರಾಕಾರದಲ್ಲಿ ಆದಿ ವಂದಿಪ ಗಣಪತಿ, ಶ್ರೀಶಂಕರಾಚಾರ್ಯ, ಶ್ರೀ ಸತ್ಯನಾರಾಯಣ, ಲಕ್ಷ್ಮೀನಾರಾಯಣನ ಗುಡಿಗಳಿವೆ. ಸಮೀಪದಲ್ಲಿ ವರದರಾಜ ದೇವಾಲಯವಿದೆ.
| |||