|
ಮುಖಪುಟ
/ನಮ್ಮ
ದೇವಾಲಯಗಳು ಗುಂಜಾ ನರಸಿಂಹ ದೇವಾಲಯ *ಟಿ.ಎಂ. ಸತೀಶ್
ಇಲ್ಲಿ ಅಗಸ್ತ್ಯೇಶ್ವರ ದೇವಾಲಯದ ಜೊತೆಗೆ ಗುಂಜಾ ನರಸಿಂಹಸ್ವಾಮಿ ದೇವಾಲಯವಿದೆ. ನದಿಯ ಆಚೆ ದಡದಲ್ಲಿರುವ ಈ ದೇವಾಲಯದ ಪ್ರಮುಖ ದೇವರು ಭಕ್ತ ಪ್ರಹ್ಲಾದರ ಮೊರೆ ಕೇಳಿ ಕಂಬದಲ್ಲಿ ಅವತರಿಸಿದ ನರಸಿಂಹ. ನರಸಿಂಹ ದೇವರ ಕೈಯಲ್ಲಿ ಗುಲಗಂಜಿ ಇರುವ ಕಾರಣ ಗುಂಜಾ ನರಸಿಂಹ ಎಂದೇ ಖ್ಯಾತವಾಗಿದೆ.
ದ್ರಾವಿಡ ಶೈಲಿಯಲ್ಲಿರುವ ಗುಂಜಾ
ನರಸಿಂಹಸ್ವಾಮಿಯ ದೇವಾಲಯವನ್ನು ಮಧ್ಯಯುಗದ ಕಾಲದ್ದೆಂದೂ
ಹೇಳಲಾಗುತ್ತದೆ. ಶಿಥಿಲವಾಗಿದ್ದ ಈ ದೇವಾಲಯವನ್ನು
16ನೇ ಶತಮಾನದಲ್ಲಿ ಮೈಸೂರು ಒಡೆಯರ ದಳವಾಯಿ
ಲಿಂಗಣ್ಣ ಜೀರ್ಣೋದ್ಧಾರ ಮಾಡಿಸಿರುವುದಾಗಿ
ತಿಳಿದುಬರುತ್ತದೆ. ಮುಖಮಂಟಪದ ಬಳಿಯಿರುವ
ಇಲ್ಲಿರುವ ಅಮ್ಮನವರ ಗುಡಿಯಲ್ಲಿ ಹನುಮಂತನ ಸುಂದರಮೂರ್ತಿ, ಶ್ರೀಕೃಷ್ಣಲೀಲೆಯ ದೃಶ್ಯಗಳನ್ನು ಕೆತ್ತಲಾಗಿದೆ. ನರಸಿಂಹನ ವಿವಿಧ ಭಂಗಿಗಳಲ್ಲಿರುವ ಶಿಲ್ಪಗಳು ದೇವಾಲಯದ ಸೌಂದರ್ಯವನ್ನು ನೂರ್ಮಡಿಗೊಳಿಸಿವೆ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in | |||