|
ಮುಖಪುಟ
/ನಮ್ಮದೇವಾಲಯಗಳು
ಭೂಕೈಲಾಸವೀ ಗೋಕರ್ಣ
ಮಹಾಕ್ಷೇತ್ರ
*ಟಿ.ಎಂ.ಸತೀಶ್
ತ್ರೇತಾಯುಗದಲ್ಲಿ ರಾವಣ,
ಈಶ್ವರನನ್ನು ಕುರಿತು ತಪಸ್ಸುಮಾಡಿ ಆತ್ಮಲಿಂಗವನ್ನೇ ವರವಾಗಿ ಪಡೆದು ಲಂಕೆಗೆ
ಒಯ್ಯುತ್ತಿದ್ದಾಗ, ಗೋಕರ್ಣದ ಬಳಿ ಬಂದಾಗ ಸಂಧ್ಯಾಕಾಲವಾಗುತ್ತದೆ. ಬ್ರಾಹ್ಮಣನಾದ
ರಾವಣ ಅರ್ಘ್ಯಪ್ರದಾನಕ್ಕಾಗಿ ಹೋಗುವಾಗ ಅಲ್ಲಿ ಪ್ರತ್ಯಕ್ಷನಾದ ಬ್ರಹ್ಮಚಾರಿ ರೂಪದ
ಗಣಪತಿಯ ಕೈಯಲ್ಲಿ ಆತ್ಮಲಿಂಗ ಕೊಟ್ಟು ಸಂಧ್ಯಾಂದನೆಗೆ ಸಮುದ್ರಕ್ಕೆ ಇಳಿಯುತ್ತಾನೆ.
ಈ ಪವಿತ್ರ
ಪುಣ್ಯಕ್ಷೇತ್ರದಲ್ಲಿ ಈಶ್ವರ ಮಹಾಬಲೇಶ್ವರ ಲಿಂಗವಾಗಿ ನೆಲೆಸಿದ್ದಾರೆ. ಇದಲ್ಲದೆ
ಇಲ್ಲಿ ಇತರ ೩೦ ಲಿಂಗಗಳೂ ೩೦ ತೀರ್ಥಗಳೂ ಇವೆ. ಮಹಾಬಲೇಶ್ವರ ದೇವರ ಗರ್ಭಗುಡಿಯ
ವಿಶಾಲವಾಗಿದ್ದು, ಸಭಾಮಂಟಪ, ಚಂದ್ರಶಾಲೆ, ಗರ್ಭಗುಡಿಯನ್ನು ಒಳಗೊಂಡಿದೆ.
ಸಭಾಮಂಟಪದಲ್ಲಿ ಪಾರ್ವತಿ, ಗಣಪತಿ ಮಧ್ಯದಲ್ಲಿ ನಂದಿ ವಿಗ್ರಹವೂ ಇದೆ.
ಕೋಟಿತೀರ್ಥ :
ಗೋಕರ್ಣದಲ್ಲಿ 30
ತೀರ್ಥಗಳಿದ್ದು, ಕೋಟಿ ತೀರ್ಥ ಪ್ರಧಾನವಾದ್ದು.
ಶಿವರಾತ್ರಿಯಲ್ಲಿ ಸಹಸ್ರಾರು ಭಕ್ತರು ಆಗಮಿಸಿ ಕೋಟಿತೀರ್ಥ ಸ್ನಾನ ಮಾಡಿ
ಪುನೀತರಾಗುತ್ತದೆ. ಇದರ ಪಶ್ಚಿಮಕ್ಕೆ ನರಸಿಂಹ ದೇವಾಲಯವಿದೆ;
ದಕ್ಷಿಣಕ್ಕೆ ಅಗಸ್ತ್ಯ, ಸುಮಿತ್ರಾ,
ಗಂಗಾತೀರ್ಥಗಳೆಂಬ ಗುಹೆಗಳಿವೆ. ಶತಶೃಂಗದ ಮೇಲೆ ಗೋಗರ್ಭ
ತೀರ್ಥ, ಬ್ರಹ್ಮಕಮಂಡಲ ತೀರ್ಥ ಮತ್ತು
ಮಹೇಶ್ವರರಾರಣ್ಯಗಳಿವೆ. ಆ ಗುಡ್ಡದ ಕೆಳಗೆ ಮಾಲಿನಿ,
ಸುಮಾಲಿನಿ, ಸೂರ್ಯ, ಚಂದ್ರ
ಮತ್ತು ಅನಂತ ಎಂಬ ತೀರ್ಥಗಳಿವೆ.
ಗಣಪತಿ
:
ಗೋಕರ್ಣದಲ್ಲಿ ಮಹಾಬಲೇಶ್ವರನ
ಸ್ಥಾಪನೆಗೆ ಕಾರಣನಾದ ಗಣಪತಿಯ ದೇವಾಲಯವಿದೆ. ಇಲ್ಲಿರುವ ನಿಂತಿರುವ ಗಣಪನ ವಿಗ್ರಹ
ಕರ್ನಾಟಕದ ಅತಿ ಪ್ರಾಚೀನ ಗಣೇಶ ವಿಗ್ರಹಗಳಲ್ಲಿ ಒಂದಾಗಿದೆ.
ಸಮುದ್ರ ತಡಿಯಲ್ಲೇ ಈ ಪವಿತ್ರ
ಪುಣ್ಯಕ್ಷೇತ್ರವಿದ್ದು, ಭೂಮಾರ್ಗ,
ಜಲಮಾರ್ಗಗಳೆರಡರಿಂದಲೂ ಗೋಕರ್ಣಕ್ಕೆ ಬರಲು ಅವಕಾಶವಿದೆ.
ಇಲ್ಲಿಗೆ 3 ಕಿಲೋ ಮೀಟರ್ ದೂರದಲ್ಲಿರುವ ತದಡಿ ಬಂದರಕ್ಕೆ ಉಗಿ ಹಡಗಿನಲ್ಲಿ ಪ್ರಯಾಣ
ಮಾಡಲೂ ಅವಕಾಶವಿದೆ. ಗೋಕರ್ಣದ ಓಂ ಬೀಚ್ ಪ್ರಸಿದ್ಧವಾಗಿದ್ದು, ವಿದೇಶೀ
ಯಾತ್ರಿಕರನ್ನೂ ತನ್ನತ್ತ ಸೆಳೆಯುತ್ತಿದೆ.
ಸಂಪರ್ಕ: ನಿರ್ದೇಶಕರು,
ಪ್ರವಾಸೋದ್ಯಮ ಇಲಾಖೆ, ಖನಿಜ ಭವನ,
ರೇಸ್‌ಕೋರ್ಸ್ ರಸ್ತೆ, ಬೆಂಗಳೂರು.
ದೂರವಾಣಿ :080-22352901 /22352909 /22352903
Email : kstdc@vsnl.in |
![]() ![]() |
||