|
ಹಲವು ವಿಶೇಷಗಳ ಗವಿ ಗಂಗಾಧರೇಶ್ವರ ದೇವಾಲಯ *ಟಿ.ಎಂ.ಸತೀಶ್
ಭಾರದ್ವಾಜ ಮುನಿಗಳು ಕೂಡ ಈ ಗುಹೆಯಲ್ಲಿ ತಪವನ್ನಾಚರಿಸಿದ್ದರು ಎಂಬ ಐತಿಹ್ಯಕ್ಕೆ ಪೂರಕವಾಗಿ ಈ ದೇವಾಲಯ ಗರ್ಭಗುಡಿಯ ಸುತ್ತ ಇರುವ ಗುಹಾ ಮಾರ್ಗದಲ್ಲಿ ಗೌತಮ ಮಹರ್ಷಿಗಳ ಹಾಗೂ ಭಾರದ್ವಾಜರ ಶಿಲಾಮೂರ್ತಿಗಳನ್ನೂ ಪ್ರತಿಷ್ಠಾಪಿಸಲಾಗಿದೆ. ಇದೇ ಮಾರ್ಗದಲ್ಲಿ ಸಪ್ತ ಮಾತೃಕೆಯರಾದ ಬ್ರಾಹ್ಮೀ, ಮಾಹೇಶ್ವರಿ, ವಾರಾಹಿ, ಚಾಮುಂಡಿ, ವೈಷ್ಣವಿ ಹಾಗೂ ಶ್ರೀದೇವಿ, ಭೂದೇವಿಯ ವಿಗ್ರಹಗಳೂ ಇವೆ.
ವಿಶೇಷ: ಈ ಪ್ರಾಚೀನ ದೇವಾಲಯದ ವಾಸ್ತು ವಿನ್ಯಾಸ ಅತ್ಯಂತ ಮನಮೋಹಕವಾಗಿದ್ದು, ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಪ್ರತಿವರ್ಷ ಮಕರ ಸಂಕ್ರಾತಿಯ ದಿನ ಸಂಜೆ ಸೂರ್ಯನ ಕಿರಣಗಳು ಲಿಂಗದ ಮುಂದಿರುವ ನಂದಿಯ ಕೊಂಬಿನಿಂದ ಹಾದು, ಶಿವಲಿಂಗವನ್ನು ಸ್ಪರ್ಶಿಸುತ್ತದೆ. ಈ ವಿಸ್ಮಯವನ್ನು ಕಾಣಲು ಅಂದು ಇಲ್ಲಿ ಜನಜಾತ್ರೆಯೇ ಸೇರುತ್ತದೆ. ಕಾರ್ತೀಕ ಮಾಸದ ಎಲ್ಲ ಸೋಮವಾರ ಹಾಗೂ ಶಿವರಾತ್ರಿಯ ದಿನ ಇಲ್ಲಿ ವಿಶೇಷ ಪೂಜೆಗಳು ಜರುಗುತ್ತವೆ. ದೇವಾಲಯದ ಪಕ್ಕದಲ್ಲೇ ಇರುವ ತಿಮ್ಮೇಶಪ್ರಭು ಉದ್ಯಾನದಲ್ಲಿ ಸಂಗೀತ, ನೃತ್ಯ ಕಾರಂಜಿಯೂ ಇದೆ. ಪ್ರತಿ ಭಾನುವಾರ ಸಂಜೆ ೭ರ ನಂತರ ಇಲ್ಲಿ ನೃತ್ಯಕಾರಂಜಿಯ ವೈಭವ ಕಣ್ತುಂಬಿಕೊಳ್ಳಬಹುದು. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.in
| |||