|
ಗವಿಪುರದ ಗುರು ಶನೇಶ್ವರ ದೇವಾಲಯ *ಟಿ.ಎಂ.ಸತೀಶ್
ವಿಶಾಲವಾದ ಪ್ರಾಕಾರ, ಸುಂದರ ಗೋಪುರ, ವಿಶಾಲ ಮಂಟಪ ಹಾಗೂ ಗರ್ಭಗೃಹವಿರುವ ಈ ದೇವಾಲಯದಲ್ಲಿ ಪೂರ್ವಾಭಿಮುಖವಾಗಿ ಗುರಶನೇಶ್ವರಸ್ವಾಮಿಯನ್ನು ಪ್ರತಿಷ್ಠಾಪಿಸಲಾಗಿದೆ. ಗರ್ಭಗೃಹದ ಎಡಭಾಗದಲ್ಲಿರುವ ಗೂಡಿನಲ್ಲಿ ಗಣಪತಿಯ ಸುಂದರ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ದೇವಾಲಯ ಪ್ರವೇಶ ದ್ವಾರದ ಬಲಭಾಗದಲ್ಲಿ ನವಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ.
ಶನೇಶ್ವರ ಜಯಂತಿಯಂದು ಹಾಗೂ ಮಹಾಶಿವರಾತ್ರಿಯ ದಿನ ವಿಶೇಷ ಪೂಜೆ, ಭಜನೆ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತವೆ. ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವ ರಥದಲ್ಲಿ ಸ್ವಾಮಿಯ ರಥೋತ್ಸವವೂ ಜರುಗುತ್ತದೆ.
ಕೊಂಡಸೇವೆ
:
ಪವಿತ್ರ
ಪುಣ್ಯಕ್ಷೇತ್ರಗಳಲ್ಲಿ ಒಂದಾದ ಈ ಮಹಾಕ್ಷೇತ್ರದಲ್ಲಿ ಜಾತ್ರೆಯ ಸಮಯದಲ್ಲಿ ಕೊಂಡ
ಸೇವೆಯೂ ನಡೆಯುತ್ತದೆ. ಶನೇಶ್ಚರ ಸ್ವಾಮಿ ದೇವಾಲಯದ ಸ್ವಾಮೀಜಿ ಶ್ರೀ
ಎಚ್.ವಿ.ಸ್ವಾಮಿ ಅವರು ಕೊಂಡದ ದಿನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಖಡ್ಗ
ಝಳಪಿಸುತ್ತಾ ಕೆಂಡದ ಮೇಲೆ ನಡೆದು, ದೇವಾಲಯ ಪ್ರವೇಶಿಸುತ್ತಾರೆ. ನಂತರ ಹರಕೆ ಹೊತ್ತ
1949ರಲ್ಲಿ ಈ ಕ್ಷೇತ್ರದಲ್ಲಿ ಆರಂಭವಾದ ಈ ಕೊಂಡ ಸೇವೆ ಇಂದಿನವರೆಗೆ ಅನೂಚಾನವಾಗಿ ನಡೆದು ಬಂದಿದೆ. ಕೊಂಡ ನಡೆಯುವ ದಿನ ಸಾಯಂಕಾಲ ಸಾಲಂಕೃತವಾದ ಪಲ್ಲಕ್ಕಿಯಲ್ಲಿ ವಿಜೃಂಭಣೆಯಿಂದ ಸ್ವಾಮಿಯ ಉತ್ಸವ ಜರುಗುತ್ತದೆ. ಈ ಅಗ್ನಿಕೊಂಡ ಉತ್ಸವದ ಅಂಗವಾಗಿ ಐದು ದಿನಗಳ ಕಾಲ ಹೋಮ ಹವನವೇ ಮೊದಲಾದ ಹಲವು ಧಾರ್ಮಿಕ ವಿಧಿಗಳು ಜರುಗುತ್ತವೆ. ಕೊಂಡ ನಡೆಯುವ ಹಿಂದಿನ ದಿನ ದೊಡ್ಡ ಹೊಂಡ ತೆಗೆದು, ರಾತ್ರಿಯೇ ಸೌದೆ ಹಾಕಿ ಉರಿಹಾಕಿ ಕೆಂಡ ಮಾಡುತ್ತಾರೆ. ಬೆಳಗ್ಗೆ ಮಡಿಯುಟ್ಟ ಭಕ್ತರು ಉರಿಯುವ ಕೆಂಡದ ಮೇಲೆ ನಡೆದು ಹರಕೆ ತೀರಿಸಿ ಧನ್ಯರಾಗುತ್ತಾರೆ. ಏನು ಕೊಂಡಹಾಯ್ದವರಿಗೆ ಕಾಲು ಸುಡುವುದಿಲ್ಲವೇ? ಎನ್ನುತ್ತೀರಾ.. ದೇವರನ್ನು ನಂಬಿದವರಿಗೆ ಈ ಸಮಸ್ಯೆ ಇಲ್ಲ.. ನೀವೇ ಕೊಂಡದಲ್ಲಿ ನಡೆದು ಬೇಕಾದರೆ ಪರೀಕ್ಷಿಸಿ ಎನ್ನುತ್ತಾರೆ ಸ್ವಾಮೀಜಿ.. | |||