ಮುಖಪುಟ /ನಮ್ಮದೇವಾಲಯಗಳು

ಘಾಳಿ ಆಂಜನೇಯ ದೇವಾಲಯ

*ಟಿ.ಎಂ.ಸತೀಶ್

gali Anjaneya, bangalore, kannadaratna.com, ourtemples.in, ಘಾಲಿ ಆಂಜನೇಯ, ಗಾಳಿ ಆಂಜನೇಯ, ಬೇಟೆರಾಯನಪುರಸಹಸ್ರಾರು ದೇವಾಲಯಗಳಿರುವ ಬೆಂಗಳೂರು ಮಹಾನಗರದಲ್ಲಿನ ಪುರಾತನ ದೇವಾಲಯಗಳಲ್ಲಿ ಒಂದು ಘಾಳಿ ಆಂಜನೇಯ ಸ್ವಾಮಿ ದೇವಾಲಯ. ಬೆಂಗಳೂರು ನಗರ ನಿರ್ಮಾಣಕ್ಕೂ ಮುನ್ನ ಇಲ್ಲಿ ದೇವಾಲಯವಿತ್ತು ಎಂಬುದನ್ನು ಈ ದೇವಾಲಯದ ಗರ್ಭಗೃಹದ ರಚನೆಯೇ ಸಾರುತ್ತದೆ.

ಬೆಂಗಳೂರು - ಮೈಸೂರು ರಸ್ತೆಯಲ್ಲಿ ಬ್ಯಾಟರಾಯನಪುರದಲ್ಲಿರುವ ಈ ದೇವಾಲಯ ವಿಜಯನಗರ ವಾಸ್ತುಶೈಲಿಯ ಭವ್ಯ ರಾಜಗೋಪರ ಹಾಗೂ ವಿಶಾಲ ಪ್ರಾಕಾರದ ಸುಂದರ ದೇವಾಲಯ ಒಳಗೊಂಡಿದೆ.

ಈ ಪ್ರದೇಶಕ್ಕೆ ಬೇಟೆರಾಯನಪುರ ಎಂದು ಹೆಸರು ಬರಲು ಇಲ್ಲಿರುವ ರುಕ್ಮಿಣಿ, ಸತ್ಯಭಾಮಾ ಸಮೇತನಾದ ವೇಣುಗೋಪಾಲಸ್ವಾಮಿ ಕಾರಣ ಎನ್ನುತ್ತಾರೆ ದೇವಾಲಯದ ಅರ್ಚಕರು. ಗೋಪಾಲಕರನ್ನು ಕಾಪಾಡಲು ಕೃಷ್ಣ ಬೇಟೆಗೆ ಹೋಗುವ ಮೂಲಕ ಬೇಟೆರಾಯನಾದ ಆತನ ದೇವಾಲಯವಿರುವ ಈ ತಾಣಕ್ಕೆ ಬೇಟೆರಾಯನಪುರ ಎಂದು ಹೆಸರು ಬಂದಿದೆ ಎನ್ನುತ್ತಾರವರು.

ಬಹಳ ವರ್ಷಗಳ ಹಿಂದೆ ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಾಲಯದ ಎದುರಿನ ದಕ್ಷಿಣಮುಖ ನಂದಿ ಕ್ಷೇತ್ರದಲ್ಲಿ ಗುಪ್ತಗಾಮಿನಿಯಾಗಿ ಹರಿಯುವ ವೃಷಭಾವತಿ ಇಲ್ಲಿ ಹರಿಯುತ್ತಿದ್ದಳು. ಕೇವಲ 50-60 ವರ್ಷಗಳ ಹಿಂದೆ ದೇವರ ದರ್ಶನಕ್ಕೆ ಬರುತ್ತಿದ್ದ ಭಕ್ತರು, ಈ ಹೊಳೆಯಲ್ಲಿ ಸ್ನಾನ ಮಾಡಿ ದೇವಸ್ಥಾನ ಪ್ರವೇಶಿಸುತ್ತಿದ್ದರು ಎನ್ನುತ್ತಾರೆ ಈ ಪ್ರದೇಶದ ಹಿರಿಯರು. ಆದರೆ ಇಂದು ಈ ನದಿಯ ಹರಿವು ನಗರದ ತ್ಯಾಜ್ಯ ನೀರು ಹರಿಯುವ ದೊಡ್ಡ ಮೋರಿಯಾಗಿ ಹೋಗಿದೆ.

gali Anjaneya, bangalore, kannadaratna.com, ourtemples.in, ಘಾಲಿ ಆಂಜನೇಯ, ಗಾಳಿ ಆಂಜನೇಯ, ಬೇಟೆರಾಯನಪುರಪಕ್ಕದಲ್ಲಿರುವ ದೇವಾಲಯದಲ್ಲಿ ಪುರಾತನವಾದ ಗರ್ಭಗೃಹದಲ್ಲಿ ಒಂದು ಕರವನ್ನು ಮೇಲೆತ್ತಿ ಅಭಯ ನೀಡುತ್ತಿರುವ ಮತ್ತು ಮತ್ತೊಂದು ಕರದಲ್ಲಿ ಗದೆ ಹಿಡಿದ ಎದುರು ಮುಖದ ಆಂಜನೇಯನ ಸುಂದರ ಮೂರ್ತಿಯಿದೆ. ವಜ್ರ ಕವಚ ಅಲಂಕಾರದಲ್ಲಂತೂ ಸ್ವಾಮಿಯ ಸೊಬಗು ನೂರ್ಮಡಿಗೊಳ್ಳುತ್ತದೆ.

ದೇವಾಲಯಕ್ಕೆ ಈಗ ವಿಶಾಲವಾದ ಪ್ರಾಕಾರ ನಿರ್ಮಿಸಲಾಗಿದ್ದು ಇಲ್ಲಿ ನವಗ್ರಹ, ಸತ್ಯನಾರಾಯಣ ಹಾಗೂ ಸೀತಾ ಲಕ್ಷ್ಮಣ ಸಹಿತನಾದ ಕಲ್ಯಾಣ ರಾಮನನ್ನು ಪ್ರತಿಷ್ಠಾಪಿಸಲಾಗಿದೆ.  ವರ್ಷದಲ್ಲಿ ಎರಡು ಬಾರಿ ಇಲ್ಲಿ ಸ್ವಾಮಿಗೋ ಬ್ರಹ್ಮೋತ್ಸವ ಜರುಗುತ್ತದೆ. ದೇವಾಲಯದ ಸುತ್ತಮುತ್ತ ಇರುವ ಹಳೆಯ ಗ್ರಾಮಗಳಾದ ಆವಲಹಳ್ಳಿ, ಬ್ಯಾಟರಾಯನಪುರ ಹಾಗೂ ದೀವಟಿಕೆ ರಾಮನಹಳ್ಳಿಯ ಗ್ರಾಮಸ್ಥರ ಆಡಳಿತ ಮಂಡಳಿ ದೇವಾಲಯದ ನಿರ್ವಹಣೆಯ ಹೊಣೆ ಹೊತ್ತಿದೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮ ದೇವಾಲಯಗಳು

M.V.Shankaranarayan

Our ministers.com