|
ಮುಖಪುಟ
/ನಮ್ಮ
ದೇವಾಲಯಗಳು
ಧರ್ಮ
ಕರ್ಮಗಳ ಸಂಗಮವೀ ‘ಧರ್ಮಸ್ಥಳ’ *ಟಿ.ಎಂ.ಸತೀಶ್
ಭಗವಂತನ ದರ್ಶನ ಪಡೆದು ಕೃತಾರ್ಥರಾಗಿ ಹೆಗ್ಗಡೆಬೀಡಿಗೆ ತೆರಳಿ ಶ್ರೀವೀರೇಂದ್ರಹೆಗ್ಗಡೆಯವರೊಂದಿಗೆ ತಮ್ಮ ದುಃಖ ದುಮ್ಮಾನ ಹೇಳಿಕೊಂಡು, ಪರಿಹಾರ ಪಡೆದು, ಮಂಜೂಷ ವಸ್ತುಸಂಗ್ರಹಾಲಯ, ಉದ್ಯಾನ ವೀಕ್ಷಣೆಯ ಬಳಿಕ ಅನ್ನಪೂರ್ಣ ಹಾಲಿನಲ್ಲಿ ಭೋಜನಕ್ಕೆ ತೆರಳುತ್ತಾರೆ. ಬಂದರು ನಗರಿ ಮಂಗಳೂರಿನಿಂದ 60 ಕಿ.ಮೀಟರ್ ದೂರದಲ್ಲಿರುವ ಶ್ರೀಕ್ಷೇತ್ರ ಧರ್ಮಸ್ಥಳ ಭೂಕೈಲಾಸ ಎಂದೇ ಪ್ರಖ್ಯಾತವಾಗದೆ. ನೇತ್ರಾವತಿಯ ಮಡಿಲ ಘಟ್ಟಪ್ರದೇಶದ ಸುಂದರ ಮಡಲಲ್ಲಿ ಶಿವನೇ ನೆಲೆಸಿಹ ಪುಣ್ಯಕ್ಷೇತ್ರ. ಧರ್ಮಸ್ಥಳ, ಧರ್ಮದ ನೆಲೆವೀಡು. ಸರ್ವಧರ್ಮ ಸಮನ್ವಯದ ನಾಡು. ಇಲ್ಲಿರುವದು ಶೈವದೇವರು ಅರ್ಥಾತ್ ಮಂಜುನಾಥ. ಈ ದೇವಾಲಯದಲ್ಲಿ ಈಶ್ವರನ ಪೂಜಿಸುವ ಅರ್ಚಕರು ವೈಷ್ಣವರು, ದೇಗುಲದ ಧರ್ಮಾಕಾರಿಗಳು ಜೈನಧರ್ಮೀಯರಾದ ಡಾ. ಡಿ. ವೀರೇಂದ್ರಹೆಗ್ಗಡೆಯವರು.ಹೀಗಾಗಿ ಮೂರು ಧರ್ಮಗಳ ಸಂಗಮ ಸ್ಥಳವಾಗಿದೆ. ಮಿಗಿಲಾಗಿ ಇಲ್ಲಿನ ಎತ್ತರದ ಬೆಟ್ಟದ ಮೇಲೆ ಗೊಮ್ಮಟೇಶ್ವರನೂ ನಿಂತಿದ್ದಾನೆ. 210 ಟನ್ ಏಕಶಿಲೆಯ 39 ಅಡಿ ಎತ್ತರದ ಬಾಹುಬಲಿಯ ಮೂರ್ತಿಯನ್ನು 1982ರಲ್ಲಿ ರತ್ನಗಿರಿಯ ಬೆಟ್ಟದ ಮೇಲೆ ಪ್ರತಿಷ್ಠಾಪಿಸಲಾಯಿತು. ಧರ್ಮಸ್ಥಳ ಕೇವಲ ಧಾರ್ಮಿಕ ಕ್ಷೇತ್ರವಷ್ಟೇ ಅಲ್ಲ. ಇದೊಂದು ನ್ಯಾಯಪೀಠ, ಸಾಹಿತ್ಯ ಸರಸ್ವತಿಯ ನೆಲೆವೀಡು, ಅನ್ನಪೂಣೆಯ (ನಿತ್ಯ ದಾಸೋಹದ) ಸಿರಿನಾಡು, ಒಟ್ಟಿನಲ್ಲಿದು ಧರ್ಮಕರ್ಮಗಳ ಸಂಗಮ ಸ್ಥಳ.
ಅಂದಿನಿಂದ ಇಲ್ಲಿ ಧರ್ಮ ನೆಲೆ ನಿಂತಿದ್ದಾರೆ. ತಾವೂ ಮಂಜುನಾಥನ ಪೂಜಿಸುತ್ತಾ, ಧರ್ಮರಕ್ಷಣೆಗೆ ತೊಡಗಿದ್ದಾರೆ. ಇಂದೂ ಇಲ್ಲಿ ಧರ್ಮಕಾರ್ಯಗಳು ನಿರಂತರವಾಗಿ ಯಾವ ವಿಘ್ನವೂ ಇಲ್ಲದೆ ಜರುಗುತ್ತವೆ. ಪ್ರತಿವರ್ಷ ಧರ್ಮಸ್ಥಳದಲ್ಲಿ ಸಾಮೂಹಿಕ ಉಚಿತ ವಿವಾಹ ಮಹೋತ್ಸವ, ಸರ್ವಧರ್ಮ ಸಾಹಿತ್ಯ ಸಮ್ಮೇಳನ ನಡೆಯುತ್ತದೆ. ಧರ್ಮಸ್ಥಳದ ದೇವಾಲಯದ ಆಡಳಿತದಲ್ಲಿ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ನಿರುದ್ಯೋಗಿ ಯುವಕರನ್ನು ಸ್ವಾವಲಂಬಿಗಳನ್ನಾಗಿ ಮಾಡಲು, ರುಡ್ಸೆಟ್ ಎಂಬ ಸಂಸ್ಥೆ ಸ್ಥಾಪಿಸಲಾಗಿದ್ದು, ಅಲ್ಲಿ ನಿರುದ್ಯೋಗಿ ಯುವಕರಿಗೆ ವೃತ್ತಿ ತರಬೇತಿ ನೀಡಿ ಆತ್ಮವಿಶ್ವಾಸ ತುಂಬಲಾಗುತ್ತದೆ. ಪ್ರತಿವರ್ಷ ಲಕ್ಷದೀಪೋತ್ಸವ ಸಂದರ್ಭದಲ್ಲಿ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತವೆ. 1933ರಿಂದ ಇಲ್ಲಿ ಸರ್ವಧರ್ಮ ಸಾಹಿತ್ಯ ಸಮ್ಮೇಳನವೂ ಜರುಗುತ್ತಾ ಬಂದಿದೆ. ಸುಮಾರು 6೦ ವರ್ಷಗಳ ಹಿಂದೆಯೇ ಸರ್ವಧರ್ಮ ಸಮ್ಮೇಳನ ನಡೆಸಿದ ಕೀರ್ತಿ ಧರ್ಮಸ್ಥಳದ್ದು. ಇದರ ಹಿಂದಿನ ಶಕ್ತಿ ಅಂದಿನ ಧರ್ಮಾಕಾರಿಗಳಾದ ಮಂಜಯ್ಯ ಹೆಗಡೆ ಅವರು. ವೀರೇಂದ್ರ ಹೆಗ್ಗಡೆ ಅವರು ಕೂಡ ಇದನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
ಅತಿಥಿ ಸತ್ಕಾರ : ಪೆರ್ಗಡೆ ದಂಪತಿ 8೦೦ ವರ್ಷಗಳಿಂದ ನಡೆಸಿಕೊಂಡು ಬಂದಿರುವ ಅತಿಥಿ ಸತ್ಕಾರ ಇಂದೂ ಇಲ್ಲಿ ಮುಂದುವರಿದಿದೆ. ಇಲ್ಲಿಗೆ ಬರುವ ಎಲ್ಲ ಭಕ್ತರೂ ಒಂದಲ್ಲಾ ಒಂದು ರೀತಿಯಲ್ಲಿ ಅತಿಥಿಗಳೇ. ನಿತ್ಯ ಇಲ್ಲಿ ಕನಿಷ್ಠ ಹತ್ತಾರು ಸಾವಿರಾರು ಭಕ್ತರಿಗೆ ಉಚಿತವಾಗಿ ಅನ್ನಸಂತರ್ಪಣೆ ನಡೆಯುತ್ತದೆ. ಅದಕ್ಕಾಗೆ ಸುಸಜ್ಜಿತವಾದ ಅನ್ನಪೂರ್ಣ ಹಾಲ್ ನಿರ್ಮಿಸಲಾಗಿದೆ.ಅನ್ನದಾನದ ಜೊತೆಗೆ ವಿದ್ಯಾದಾನ, ವಸ್ತ್ರದಾನ, ಅಭಯದಾನ ಹಾಗೂ ಔಷಧದಾನವೂ ಇಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಮಂಜುನಾಥೇಶ್ವರ ಮೆಡಿಕಲ್ ಟ್ರಸ್ಟ್ ಅತ್ಯಾಧುನಿಕ ಸಲಕರಣೆಗಳಿಂದ ಸಜ್ಜಾದ ಆಸ್ಪತ್ರೆ ನಿರ್ಮಿಸಿ, ದೀನದಲಿತರಾದಿಯಾಗಿ ಸರ್ವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದೆ. ಶ್ರೀಕ್ಷೇತ್ರ ಧರ್ಮಸ್ಥಳಕ್ಕ್ಕೆ ಕರ್ನಾಟಕದ ಎಲ್ಲ ಪ್ರಮುಖ ನಗರ-ಪಟ್ಟಣಗಳಿಂದಲೂ ನೇರಬಸ್ ಸೌಕರ್ಯಇದೆ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in | |||