ಮುಖಪುಟ /ನಮ್ಮದೇವಾಲಯಗಳು   

ದೇವರಾಯನದುರ್ಗದ ಭೋಗಾನರಸಿಂಹ

Devarayanadurga, ದೇವರಾಯನದುರ್ಗ, ಲಕ್ಷ್ಮೀನರಸಿಂಹ ಸ್ವಾಮಿ, ಕುಂಬಿ ನರಸಿಂಹಸ್ವಾಮಿ, dashavatara, Matsyavatara, kurmavatara, krishnavatara, ramavatara, varahavatara, parashuramavatara, buddavatara, kalki avatara,  ಧಶಾವತಾರ,  ಮತ್ಸ್ಯಾವತಾರ, ಕೂರ್ಮಾವತಾರ, ವರಹಾವತಾರ, ರಾಮಾವತಾರ, ಪರಶುರಾಮಾವತಾರ, ಕೃಷ್ಣಾವತಾರ, ಬೌದ್ಧಾವತಾರ, ಕಲ್ಕಿ ಅವತಾರ. ಕನ್ನಡರತ್ನ.ಕಾಂ, kannadaratna.com, ourtemples.in, ಕರ್ನಾಟಕದ ದೇವಾಲಯಗಳು, karnataka temples,*ಟಿ.ಎಂ.ಸತೀಶ್

ದೇವರಾಯನದುರ್ಗದ ಕೆಳಗಿರುವ ಊರಿನಲ್ಲಿ ವಿಜಯನಗರ ಶೈಲಿಯಲ್ಲಿ ನಿರ್ಮಿಸಲಾಗಿರುವ ವಿಶಾಲ ದೇವಾಲಯವಿದೆ. ಇಲ್ಲಿ ಭೋಗಾನರಸಿಂಹ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿರುವ ಸುಂದರ ದೇವಾಲಯ ಸುಮಾರು 30 ಮೀಟರ್ ಉದ್ದ ಹಾಗೂ 27 ಮೀಟರ್ ಅಗಲವಿದೆ. ದೇವಾಲಯದ ಸುತ್ತಲೂ ಮಂಟಪಗಳಿವೆ. ದೇವಾಲಯಕ್ಕೆ ಭವ್ಯವಾದ ಗೋಪುರ ನಿರ್ಮಿಸಲಾಗಿದೆ.

ಗೋಪುರದ ಸುತ್ತಲೂ ಇರುವ ಗೂಡುಗಳಲ್ಲಿ  ದಶಾವತಾರದ ಗಾರೆ ಶಿಲ್ಪಗಳಿವೆ. ಮಧ್ಯೆ ಸುಂದರವೂ ಭವ್ಯವೂ ಆದ ಭೋಗಾನರಸಿಂಹ ಗುಡಿಯಿದೆ.

ದೇವಾಲಯಕ್ಕೆ ಭವ್ಯವಾದ ರಾಜಗೋಪುರವಿದೆ.  ಐದು ಹಂತಗಳ ಈ ಗೋಪುರದ ಪ್ರತಿ ದ್ವಾರದ ಪಕ್ಕದಲ್ಲಿ ಜಯವಿಜಯರ ಗಾರೆ ಪ್ರತಿಮೆಗಳಿವೆ. ಜೊತೆಗೆ ಅರೆ ಗೋಪುರಗಳಿವೆ. ಗೋಪುರದ ತುದಿಯಲ್ಲಿ ಲಕ್ಷ್ಮೀನಾರಾಯಣರ ಪ್ರತಿಮೆಯಿದೆ. ಮೇಲೆ ಕೊಂಬಿನಾಕಾರದ ನಡುವೆ ಐದು  ಕಳಶಗಳಿವೆ. ವಿಜಯನಗರ ವಾಸ್ತು ಶೈಲಿಯಲ್ಲಿರುವ ಈ ಗೋಪುರದ ಪ್ರವೇಶದ್ವಾರದ ಎಡಗಡೆ ವಿಘ್ನನಿವಾರಕ ವಿನಾಯಕನ ಉಬ್ಬಶಿಲ್ಪವಿದೆ. ದ್ವಾರದ ಎಡ ಬಲದಲ್ಲಿ ವೈಕುಂಠದ ದ್ವಾರಪಾಲಕರಾದ ಜಯ ವಿಜಯರ ಮೂರ್ತಿಗಳಿವೆ.

Devarayanadurga temple ದೇವರಾಯನದುರ್ಗ ದೇವಾಲಯ, dashavatara, Matsyavatara, kurmavatara, krishnavatara, ramavatara, varahavatara, parashuramavatara, buddavatara, kalki avatara,  ಧಶಾವತಾರ,  ಮತ್ಸ್ಯಾವತಾರ, ಕೂರ್ಮಾವತಾರ, ವರಹಾವತಾರ, ರಾಮಾವತಾರ, ಪರಶುರಾಮಾವತಾರ, ಕೃಷ್ಣಾವತಾರ, ಬೌದ್ಧಾವತಾರ, ಕಲ್ಕಿ ಅವತಾರ. ಕನ್ನಡರತ್ನ.ಕಾಂ, kannadaratna.com, ourtemples.in, ಕರ್ನಾಟಕದ ದೇವಾಲಯಗಳು, karnataka temples,ಒಳ ಪ್ರವೇಶಿಸುತ್ತಿದ್ದಂತೆಯೇ ಸುಂದರವಾದ ಗರುಡಗಂಭವಿದೆ. ಅದಕ್ಕೆ ಹಿತ್ತಾಳೆಯ ಕವಚವನ್ನು ತೊಡಿಸಲಾಗಿದೆ. ಅದರ ಎದುರು ಇರುವ ದೇವಾಲಯ ಪ್ರವೇಶಿಸಿದರೆ ಗರ್ಭಗುಡಿಯಲ್ಲಿ ಮೂರೂವರೆ ಅಡಿ ಎತ್ತರದ ಕಪ್ಪುವರ್ಣದ ನುಣುಪಾದ ಶಿಲೆಯಲ್ಲಿ ಲಕ್ಷ್ಮೀನರಸಿಂಹನ ಸುಂದರ ಮೂರ್ತಿಯ ದರ್ಶನವಾಗುತ್ತದೆ.   ಈ ಮೂರ್ತಿಯನ್ನು ದೂರ್ವಾಸ ಮಹರ್ಷಿಗಳು ಪ್ರತಿಷ್ಠಾಪಿಸಿದರು ಎಂಬುದು ಪ್ರತೀತಿ.

ದೇಗುಲ ಪ್ರಾಕಾರದಲ್ಲಿ ಧನದೇವತೆ ಲಕ್ಷ್ಮೀ ದೇಗುಲವೂ ಇದೆ. ಇಲ್ಲಿ ಲಕ್ಷ್ಮೀ ಹಾಗೂ ನರಸಿಂಹ ದೇವರಿಬ್ಬರೂ ಪೂರ್ವಾಭಿಮುಖವಾಗಿದ್ದಾರೆ. ಗರುಡಗಂಭ, ಆಳ್ವರ ಪ್ರತಿಮೆಯೂ ಇದೆ. ಭಕ್ತರು ದೇವರಿಗೆ ಬೆಳ್ಳಿಯ ರಥವನ್ನು ಸಮರ್ಪಿಸಿದ್ದಾರೆ.

ಭೋಗಾನರಸಿಂಹಸ್ವಾಮಿ ದೇವಾಲಯದ ಹಿಂಭಾಗದಲ್ಲಿ ಪುಷ್ಕರಣಿ ಇದೆ. ಇದನ್ನು ನರಸಿಂಹತೀರ್ಥ ಎಂದು ಕರೆಯುತ್ತಾರೆ. ದೇವರಾಯನದುರ್ಗ ಜಯಮಂಗಲಿ ಹಾಗೂ ಶಿಂಶಾ ನದಿಗಳ ಉಗಮಸ್ಥಾನವೂ ಹೌದು.

ನೃಸಿಂಹ ಜಯಂತಿಯಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ವರ್ಷಕ್ಕೊಮ್ಮೆ ಫಾಲ್ಗುಣ ಮಾಸದ ಪುಬ್ಬಾ ನಕ್ಷತ್ರದಲ್ಲಿ ನರಸಿಂಹದೇವರ ಜಾತ್ರೆಯೂ ನಡೆಯುತ್ತದೆ. 7 ದಿನಗಳ ಕಾಲ ಇಲ್ಲಿ ಜಾತ್ರೆ ನಡೆಯುತ್ತದೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯಗಳು