ಮುಖಪುಟ /ನಮ್ಮ ದೇವಾಲಯಗಳು

ಯಶವಂತಪುರದ ದಾರಿ ಆಂಜನೇಯ

ಎಲ್ಲ ಸಂಕಷ್ಟಕ್ಕೂ ಪರಿಹಾರದ ದಾರಿ ತೋರುವ ಹನುಮ ಮಂದಿರ

Dari Anjaneya, Yashavantapura, Street Hanuman Temple, ದಾರಿ ಆಂಜನೇಯ, Bengaluru, temples of Karnataka, T.M.Satish, ourtemples.in, temples of Karnataka, Karnataka Temples*ಟಿ.ಎಂ. ಸತೀಶ್

ಹಿಂದೆ ಊರಿನ ನಿರ್ಮಾಣದ ಜೊತೆ ಜೊತೆಗೆ ಹನುಮನ ಗುಡಿಯೂ ನಿರ್ಮಾಣವಾಗುತ್ತಿತ್ತು. ಊರಿಗೆ ಯಾವುದೇ ಪೀಡೆ, ಪಿಶಾಚಿ, ದೆವ್ವ ಭೂತಗಳ ಕಾಟ ಇರಬಾರದು ಎಂದು ಊರ ಮುಂದೊಂದು ಆಂಜನೇಯನ ಗುಡಿ ಕಟ್ಟುತ್ತಿದ್ದರೆಂದು ಹಿರಿಯರು ಹೇಳುತ್ತಾರೆ.

ಹೀಗೆ ಊರಿನ ಪ್ರವೇಶದ ಬಳಿಯೇ ನೂರಾರು ವರ್ಷಗಳ ಹಿಂದೆ ನಿರ್ಮಾಣವಾದ ಹನುಮನ ಗುಡಿ ದಾರಿ ಆಂಜನೇಯ ಎಂದೇ ಖ್ಯಾತವಾಗಿದೆ. ಇದೇನು ದಾರಿ ಆಂಜನೇಯನೇ ಎನ್ನುತ್ತೀರಾ. ಹೌದು. ಈ ದೇವಾಲಯ ಇರುವುದು ಯಶವಂತಪುರದ ಸೇತುವೆಯ ಬಳಿ. ಅದೂ ಯಶವಂತಪುರ ಹಳೆಯ ಊರಿಗೆ ಹೋಗುವ ದಾರಿಯಲ್ಲಿ.

ಕೇಂದ್ರೀಯ ವಿದ್ಯಾಲಯದ ಆವರಣದ ಭಾಗವೇ ಆಗಿರುವ ಈ ದೇವಾಲಯ ಯಶವಂತಪುರ ಊರಿನ ದಾರಿಯಲ್ಲಿದ್ದ ಕಾರಣ ಇದಕ್ಕೆ ದಾರಿ ಆಂಜನೇಯ ಎಂಬ ಹೆಸರು ಬಂದಿದೆ ಎಂದು ಕೆಲವರು ಹೇಳುತ್ತಾರೆ. ಆದರೆ, ಈ ಆಂಜನೇಯನ ನಂಬಿ ದೇವಾಲಯಕ್ಕೆ ಬಂದು ಮೂರು ಶನಿವಾರ, ಐದು ಶನಿವಾರ, ಏಳು ಶನಿವಾರ

ಶ್ರೀ ದಾರಿ ಆಂಜನೇಯಾಯ ವಿದ್ಮಹೇ ವಾಯು ಪುತ್ರಾಯ
ಧೀಮಹಿ ತನ್ನೋ ಹನುಮಂತ ಪ್ರಚೋದಯಾತ್

Dari Anjaneya, Yashavantapura, Street Hanuman Temple, ದಾರಿ ಆಂಜನೇಯ, Bengaluru, temples of Karnataka, T.M.Satish, ourtemples.in, temples of Karnataka, Karnataka Templesಎಂಬ ಶ್ಲೋಕವನ್ನು ಹೇಳುತ್ತಾ 12 ಬಾರಿ ಪ್ರದಕ್ಷಿಣೆ ನಮಸ್ಕಾರ ಹಾಕಿ, ಪೂಜೆ ಮಾಡಿಸಿದರೆ ಸಕಲ ಇಷ್ಟಾರ್ಥ ನೆರವೇರುತ್ತದೆ ಮತ್ತು ರೋಗ ರುಜಿನಾದಿ ಸಕಲ ಬಾಧೆಗಳೂ ಪರಿಹಾರವಾಗುತ್ತವೆ ಎಂಬುದು ಭಕ್ತರ ನಂಬಿಕೆ. ಹೀಗೆ ಎಲ್ಲ ಸಂಕಷ್ಟಗಳಿಗೂ ಪರಿಹಾರದ ದಾರಿ ತೋರುವ ಈ ಆಂಜನೇಯ ದಾರಿ ಆಂಜನೇಯ ಎಂದೇ ಖ್ಯಾತನಾಗಿದ್ದಾನೆ ಎಂದು ದೇವಾಲಯ ಅರ್ಚಕರಾದ ಅಂಬರೀಷ್ ಅವರು ಹೇಳುತ್ತಾರೆ. ದಾರಿ ಆಂಜನೇಯನ ಹೆಸರಲ್ಲಿರುವ ಚಾರಿಟಬಲ್ ಟ್ರಸ್ಟ್ ಕೂಡ ಹಲವರಿಗೆ ದಾರಿ ದೀಪವಾಗಿದೆ.

ತಾಯಿ ಅಂಬಾ ಭವಾನಿಯ ಔಪಾಸಕರಾಗಿದ್ದ ಗೋಂದಲ್ಮನೆತನದ ಮಹಾನ್ ಜ್ಞಾನಿ ಗೋವಿಂದ ರಾವ್ ಜೀ ಅವರು ಶತಮಾನಗಳ ಹಿಂದೆ ಅಂದರೆ 1916ರಲ್ಲಿ ಇಲ್ಲಿ ಆಂಜನೇಯನಿಗೆ ಗುಡಿ ಕಟ್ಟಿಸಿದರು. ಇಂದಿಗೂ ದೇವಾಲಯದ ಹಿಂಭಾಗದಲ್ಲಿ ಅವರ ಲೋಹದ ಪುತ್ಥಳಿ ಇದೆ.

ಯಶವಂತಪುರ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿಯ ಮೇಲ್ಸೆತುವೆಯ ಮೇಲೆ ಮಲ್ಲೇಶ್ವರಕ್ಕೆ ಹೋಗುವ ಮಾರ್ಗವಾಗಿ ಬಂದರೆ ಎಡ ಭಾಗದಲ್ಲಿ ದಾರಿ ಆಂಜನೇಯನ ಗುಡಿ ಕಾಣುತ್ತದೆ. ಹೊರ ಮಂಟಪ, ಮುಖ ಮಂಟಪ, ಗರ್ಭಗೃಹವನ್ನು ಒಳಗೊಂಡ ಈ ಪುಟ್ಟ ದೇವಾಲಯದ ಪ್ರವೇಶದ ಮೇಲೆ ಆಂಜನೇಯನ ಬೃಹತ್ ಗಾರೆಯ ಪ್ರತಿಮೆ ಇದೆ. ದೇವಾಲಯ ಪ್ರವೇಶಿಸಿದರೆ ಎಡ ಭಾಗದಲ್ಲಿ 4 ಅಡಿ ಎತ್ತರದ ಕಂಚಿನ Dari Anjaneya, Yashavantapura, Street Hanuman Temple, ದಾರಿ ಆಂಜನೇಯ, Bengaluru, temples of Karnataka, T.M.Satish, ourtemples.in, temples of Karnataka, Karnataka Templesಹನುಮನ ವಿಗ್ರಹ ಕಾಣುತ್ತದೆ. ಗರ್ಭಗೃಹದ ಒಂದು ಸುತ್ತು ಪ್ರದಕ್ಷಿಣೆ ಹಾಕಿದರೆ ವಿಘ್ನ ನಿವಾರಕ ಗಣಪನ ದರ್ಶನವೂ ಆಗುತ್ತದೆ. ಇನ್ನು ಪ್ರಧಾನಗರ್ಭಗೃಹದಲ್ಲಿ ಪುಟ್ಟ ಆಂಜನೇಯನ ಮೂರ್ತಿ ಇದೆ. ಬಹುತೇಕ ಪ್ರತಿ ದಿನವೂ ಈ ಆಂಜನೇಯನಿಗೆ ಬೆಣ್ಣೆ ಅಲಂಕಾರ ಹಾಕುವುದು ಇಲ್ಲಿನ ವಿಶೇಷ.

ಇಲ್ಲಿ ದಾರಿ ಆಂಜನೇಯನಿಗೆ ವಾಯುಸ್ತುತಿ ಸಮೇತ ನಿತ್ಯ ಮಧು ಅಂದರೆ ಜೇನಿನ ಅಭಿಷೇಕವನ್ನೂ ನಡೆಸಲಾಗುತ್ತದೆ. ಪ್ರತಿ ಶನಿವಾರಗಳಂದು ವಿಶೇಷ ಅಲಂಕಾರ ಇರುತ್ತದೆ. ಭಕ್ತರು ವಿಳ್ಯದೆಲೆ, ವಡೆ ಸರದ ಅಲಂಕಾರಗಳನ್ನೂ ಮಾಡಿಸುತ್ತಾರೆ. ಪ್ರತಿವರ್ಷ ಹನುಮ ಜಯಂತಿಯ ಸಂದರ್ಭದಲ್ಲಿ 9 ದಿನಗಳ ಕಾಲ ಇಲ್ಲಿ ಉತ್ಸವ ನಡೆಯುತ್ತದೆ.

ಎಲ್ಲಿ ಹನುಮನೋ ಅಲ್ಲಿ ರಾಮನು, ಎಲ್ಲಿ ರಾಮನೋ ಅಲ್ಲಿ ಹನುಮನು ಎಂಬ ಮಾತಿನಂತೆ. ಇಲ್ಲಿ ಹನುಮದ್ ಸಮೇತ ಸೀತಾರಾಮಲಕ್ಷ್ಮಣರ ಕಂಚಿನ ಮೂರ್ತಿಗಳೂ ಇವೆ. ಶ್ರೀರಾಮನವಮಿಯ ಸಂದರ್ಭದಲ್ಲಿ 5 ದಿನಗಳ ಕಾಲ ಇಲ್ಲಿ ವಿಶೇಷ ಉತ್ಸವಗಳು ನಡೆಯುತ್ತವೆ.

ಮುಖಪುಟ /ನಮ್ಮ ದೇವಾಲಯಗಳು