|
ಮುಖಪುಟ
/ನಮ್ಮದೇವಾಲಯಗಳು
ಚಿಮ್ಮನಹಳ್ಳಿಯ ಸುಕ್ಷೇತ್ರ ಶ್ರೀಮುನೀಶ್ವರ ದೇವಾಲಯ
ಐತಿಹ್ಯ:
ಚಿಮ್ಮನಹಳ್ಳಿಯಿಂದ
1
ಕಿಲೋ ಮೀಟರ್ ದೂರದಲ್ಲಿನ ಈ ಮುನೀಶ್ವರ ಬಾರೆಯಲ್ಲಿ ಜಡೆ ಮುನೀಶ್ವರ ಸ್ವಾಮಿ ಸರ್ಪದ
ರೂಪದಲ್ಲಿ ಸಂಚರಿಸುತ್ತಾ ಸುತ್ತ ಮುತ್ತಲಿನ ರೈತಾಪಿ ವರ್ಗದ ಆಸ್ತಿಪಾಸ್ತಿಗಳನ್ನು
ಸಂರಕ್ಷಿಸುತ್ತಾ ಅವರ ಭಕ್ತಿಗೆ ಪಾತ್ರವಾಗಿದೆ. ಇಷ್ಟ ದೈವವಾಗಿ ನಿತ್ಯ
ಪೂಜೆಗೊಂಡಿದೆ. ಅತ್ಯಂತ ಪ್ರಾಚೀನವಾದ ಹಾಗೂ ಬೃಹದಾಕಾರವಾಗಿ ಬೆಳೆಯುತ್ತಿರುವ ಬಿಳಿ
ಎಕ್ಕದ ಗಿಡದ ಬುಡದಲ್ಲಿ ನೆಲೆಸಿದೆ. ಒಮ್ಮೆ ಈ ಊರಿನ ಮಹಾನ್ ದೈವಭಕ್ತರಾದ ಶ್ರೀ
ರಂಗಪ್ಪ ಎಂಬುವರ ಕನಸಿನಲ್ಲಿ ಬಂದ ಜಡೆ ಮುನೀಶ್ವರ ಸ್ವಾಮಿ,
ತಾನು ಎಕ್ಕದ ಗಿಡದ ಬುಡದಲ್ಲಿ ನೆಲೆಸಿರುವುದಾಗಿ ತಿಳಿಸಿ
ತನಗೊಂದು ಗುಡಿ ಕಟ್ಟಿಸುವಂತೆ ಆಣತಿಯಿತ್ತರು.
ಶ್ರೀ
ರಂಗಪ್ಪನವರು ಈ ಕನಸಿನ ಬಗ್ಗೆ ತಮ್ಮ ಕುಟುಂಬದವರಿಗೆ ತಿಳಿಸಿದರು.
ಗುರು-ಹಿರಿಯರೊಂದಿಗೆ ಚರ್ಚಿಸಿ ದೇವರು ಅಪ್ಪಣೆಕೊಡಿಸಿದ ಸ್ಥಳದಲ್ಲಿ ದೇವಾಲಯ
ನಿರ್ಮಾಣಕ್ಕೆ ಕೈಹಾಕಿದರು. ತಮ್ಮ ಸ್ವಪ್ನದಲ್ಲಿ ಕಾಣಿಸಿಕೊಂಡ ಸ್ವಾಮಿಯ ರೂಪವನ್ನು
ಕಲ್ಪಿಸಿಕೊಂಡು ಅದರಂತೆಯೇ ಶಿಲಾಪ್ರತಿಮೆ ಮಾಡಿಸಲು ಊರೂರು ಅಲೆದರೂ
ಪ್ರಯೋಜನವಾಗಲಿಲ್ಲ.
ಸ್ವಾಮಿಯ
ಪ್ರೇರಣೆಯಂತೆ ಶ್ರೀ ರಂಗಪ್ಪನವರು ದೇ
ದೇವಾಲಯದ
ಪ್ರಧಾನ ಗರ್ಭಗೃಹದಲ್ಲಿ ಐದು ಅಡಿ ಎತ್ತರದ ಸುಂದರ ಮೂರ್ತಿ ತನ್ನ ಎಡಗೈಯಲ್ಲಿ
ಸರ್ಪಹಿಡಿದಿದ್ದರೆ,
ಬಲಗೈ ಅಭಯಮುದ್ರೆಯಲ್ಲಿದೆ. ಭಕ್ತರನ್ನು ಹರಸುತ್ತಿರುವ ಹಾಗೂ
ಶಿರದಲ್ಲಿ ಐದು ಹೆಡೆಯ ಸರ್ಪವನ್ನು ಧರಿಸಿರುವ ಶ್ರೀ ಮುನೀಶ್ವರಸ್ವಾಮಿಯ ಮೂರ್ತಿ
ವಿರಾಜಮಾನವಾಯ್ತು.
ಹೀಗೆ ಈ
ಸ್ವಾಮಿಯ ಮಹಿಮೆ ಅಪಾರವಾಗಿದೆ. ವಿವಾಹವಾಗಿಯೂ ಬಹುಕಾಲ ಮಕ್ಕಳಿಲ್ಲದವರು ಇಲ್ಲಿ
ಬಂದು ಹರಕೆ ಹೊತ್ತು ಸಂತಾನ ಭಾಗ್ಯ ಪಡೆಯುತ್ತಿದ್ದಾರೆ. ಅಂತಹವರು ದೇವರಿಗೆ ಹರಕೆ
ತೀರಿಸುವ ಹಲವು ಸಂಗತಿಗಳು ಇಲ್ಲಿ ನಡೆಯುತ್ತಿವೆ. ಉದ್ಯೋಗವಿಲ್ಲದೆ ಕಷ್ಟ
ಪಡುತ್ತಿದ್ದವರು ಹರಕೆ ಹೊತ್ತು ಉತ್ತರರೋತ್ತರ ಅಭಿವೃದ್ಧಿ ಹೊಂದಿದ ನಿದರ್ಶನಗಳಿವೆ.
ಗ್ರಹಗತಿಗಳ ಹಾಗೂ ಭೂತಚೇಷ್ಟೆಗಳ ಪೀಡೆಗೆ ಒಳಗಾದವು ಈ ಸ್ವಾಮಿಯ ನೆಲೆಗೆ ಬಂದು
ಪರಿಹಾರ ಪಡೆದು ಕಥೆಯನ್ನು ಓದಿಸಿ ತಮ್ಮ ಹರಕೆಗಳನ್ನು ತೀರಿಸುತ್ತಾರೆ.
ಪ್ರತಿ ವರ್ಷ
ದೇವಾಲಯದಲ್ಲಿ ವಾರ್ಷಿಕೋತ್ಸವ ಹಾಗೂ ವಿಶೇಷ ಜಾತ್ರಾ ಮಹೋತ್ಸವ ನಡೆಯುತ್ತದೆ.
ಚಿಮ್ಮನಹಳ್ಳಿಯ ಜನತೆಯಷ್ಟೇ ಅಲ್ಲದೆ ದೂರದೂರದ ಊರುಗಳಿಂದ ಕೂಡ ಭಕ್ತರು ಅಪಾರ
ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಾರೆ. ಸುತ್ತಮುತ್ತಲ ಗ್ರಾಮದ ದೇವತೆಗಳ ಉತ್ಸವ
ಮೂರ್ತಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತವೆ. ಜಾತ್ರೆಗೆ ಬರುವ ಸಹಸ್ರಾರು
ಭಕ್ತರಿಗೆ ಶ್ರೀರಂಗಪ್ಪ ಹಾಗೂ ಸೋದರರ ಕುಟುಂಬದವರು,
ಭಕ್ತಾದಿಗಳ ಸಹಕಾರದೊಂದಿಗೆ ಅನ್ನಸಂತರ್ಪಣೆ ಏರ್ಪಡಿಸುತ್ತಾ
ಬಂದಿದ್ದಾರೆ.
ಭಗವತ್
ಪ್ರೇರಣೆಯಿಂದ ಹಾಗೂ ಮಾತೃಶ್ರೀಯವರಾದ ಶ್ರೀಮತಿ ಚನ್ನಮ್ಮನವರ ಹಾಗೂ ಭಕ್ತಾದಿಗಳ
ಅಪೇಕ್ಷೆಯಂತೆ ಶ್ರೀ ರಂಗಪ್ಪನವರು ದೇವಾಲಯದ ಪ್ರಾಕಾರದಲ್ಲಿ ಶ್ರೀ ಮಹಾ ಶಕ್ತಿಗಣಪತಿ
ಹಾಗೂ ಶ್ರೀ ಚಾಮುಂಡೇಶ್ವರಿ ಅಮ್ಮನವರ ಮೂರ್ತಿಯನ್ನೂ ಪ್ರತಿಷ್ಠಾಪಿಸಿದ್ದಾರೆ.
ನವರಾತ್ರಿಯ ಹತ್ತೂ ದಿನ,
ಶಿವರಾತ್ರಿಯ ದಿನ ಹಾಗೂ ಧನುರ್ಮಾಸದಲ್ಲಿ ಇಲ್ಲಿ ವಿಶೇಷ ಪೂಜಾ
ವಿಧಿಗಳು ನಡೆಯುತ್ತವೆ.
ಶ್ರೀ
ಸ್ವಾಮಿಯ ಸೇವೆಯಲ್ಲಿ ಆಸಕ್ತರಾಗಿರುವ ಭಕ್ತರ ಸೂಕ್ತ ಸಲಹೆ - ಸಹಾಯ ಸಹಕಾರಗಳ
ನೆರವಿನಿಂದ ಈಗ ಕಲ್ಲಿನ ಭವ್ಯ ದೇವಾಲಯ ನಿರ್ಮಿಸುವ ಕಾಮಗಾರಿ ಭರದಿಂದ ಸಾಗಿದೆ.
ದೇವಾಲಯದ ಸಂಕೀರ್ಣದಲ್ಲಿ ದ್ವಾದಶ ಜ್ಯೋತಿರ್ಲಿಂಗ ಪ್ರತಿಷ್ಠಾಪನೆ,
ದೇಗುಲದ ಹೊರಗೆ ಭವ್ಯ ರಾಜಗೋಪುರ ನಿರ್ಮಾಣ,
ನವಗ್ರಹಗಳ ಪವಿತ್ರ ವನ,
ನವದುರ್ಗೆಯರ ವಿಗ್ರಹ ಪ್ರತಿಷ್ಠಾಪನೆ,
ಶ್ರೀಚಕ್ರಸ್ಥಾಪನೆ ಮುಂತಾದವುಗಳನ್ನು ನಿರ್ಮಿಸುವ ಬೃಹತ್ ಯೋಜನೆಗಳು
“ಶ್ರೀಮುನೀಶ್ವರ
ಸ್ವಾಮಿ ಧಾರ್ಮಿಕ ಮತ್ತು ಶೈಕ್ಷಣಿಕ ಟ್ರಸ್ಟ್ (ರಿ)”ನ
ಗುರಿಯಾಗಿದೆ.
ಹೆಚ್ಚಿನ
ಮಾಹಿತಿಗೆ ಶ್ರೀ ಸಿ.ಆರ್. ಮುರುಳೀಧರ್ ಅವರನ್ನು ದೂರವಾಣಿ ಸಂಖ್ಯೆ ಮಾರ್ಗ : ತುಮಕೂರು ಜಿಲ್ಲಾ ಕೇಂದ್ರದಿಂದ 5೦ ಕಿಲೋ ಮೀಟರ್ ದೂರದಲ್ಲಿರುವ ಚಿಮ್ಮನಹಳ್ಳಿಗೆ ಹೋಗಲು ಮೈಸೂರು ಬಸ್ ಹತ್ತಿ, ಕಲ್ಲೂರು ಕ್ರಾಸ್ ಬಳಿ ಇಳಿಯಬೇಕು. ಅಲ್ಲಂದ ಆಟೋದಲ್ಲಿ ದೇವಾಲಯಕ್ಕೆ ಹೋಗಿಬರುವ ವ್ಯವಸ್ಥೆ ಇದೆ. ತುರುವೇಕೆರೆಯಿಂದಲೂ 20 ಕಿಲೋ ಮೀಟರ್ ದೂರದಲ್ಲಿರುವ ಶ್ರೀ ಮುನೀಶ್ವರಸ್ವಾಮಿ ಸುಕ್ಷೇತ್ರಕ್ಕೆ ದೊಡ್ಡಗೊರಘಟ್ಟ ಮಾರ್ಗವಾಗಿ ತಲುಪಬಹುದು. |
![]() ![]() |
||